ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಾಣಿ ಅಂಗಡಿಯಲ್ಲಿ ಸಿಲಿಂಡರ್‌

ಬೆಂಗಳೂರು ಸೇರಿ 5 ನಗರಗಳಲ್ಲಿ ಜಾರಿ
Last Updated 3 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕೊಚ್ಚಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ (ಐಒಸಿ) ತನ್ನ 5 ಕೆ.ಜಿ. ಭಾರದ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಬೆಂಗಳೂರು ಸೇರಿ­ದಂತೆ ದೇಶದ ಐದು ನಗರಗಳ   ಕಿರಾಣಿ ಅಂಗಡಿ ಹಾಗೂ ಸೂಪರ್‌ ಮಾರ್ಕೆಟ್‌­ಗಳಲ್ಲಿ ಮಾರಾಟ ಮಾಡಲು ಕ್ರಮ ಕೈಗೊಂಡಿದೆ.

ಬೆಂಗಳೂರು, ಚೆನ್ನೈ, ಗೋರಖ್ ಪುರ, ಲಖನೌ ಹಾಗೂ ಅಲಿಗಡಗಳಲ್ಲಿ ಗುರುವಾರ ಇಂತಹ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ ಎಂದು ಐಒಸಿ ಪ್ರಕಟಣೆ ತಿಳಿಸಿದೆ.

ಸಬ್ಸಿಡಿ ರಹಿತ 5 ಕೆಜಿಯ ಇಂತಹ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮೊದಲ ಬಾರಿಗೆ ಖರೀದಿಸುವಾಗ  ₨ 1,600 ರಿಂದ ₨ 1,700ರತನಕ ಬೆಲೆ ಇರಲಿದೆ. ಖಾಲಿ ಸಿಲಿಂಡರ್‌ ನೀಡಿ ತುಂಬಿದ ಸಿಲಿಂಡರ್‌ ಪಡೆಯುವ ಸಂದರ್ಭದಲ್ಲಿ ಕೇವಲ ಉತ್ಪಾದನಾ ವೆಚ್ಚವನ್ನು ಮಾತ್ರ ಪಡೆಯ­ಲಾಗು­ವುದು.

ವಲಸೆ ಬಂದ ವಿದ್ಯಾರ್ಥಿಗಳಿಗೆ, ಐಟಿ, ಬಿಪಿಒ  ಉದ್ಯೋಗಿಗಳಿಗೆ ಹಾಗೂ ನಿಗದಿತ ವೇಳೆ ಇಲ್ಲದ ನೌಕರರಿಗೆ ಇದರಿಂದ ಸಾಕಷ್ಟು ಪ್ರಯೋಜನ­ವಾಗಲಿದೆ.

ಆರಂಭಿಕವಾಗಿ ಐದು ನಗರಗಳ 11 ಕಿರಾಣಿ ಅಂಗಡಿಗಳಲ್ಲಿ ಈ ಹೊಸ ಸೇವೆ ಆರಂಭಿಸಲಾಗಿದ್ದು ಬರುವ ದಿನಗಳಲ್ಲಿ ಇನ್ನೂ 50 ನಗರಗಳಿಗೆ ವಿಸ್ತರಣೆ ಮಾಡಲಾಗುವುದು.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಇಂತಹ ಸಿಲಿಂಡರ್‌ಗಳ ಮಾರಾಟವನ್ನು ಆಯ್ದ ಪೆಟ್ರೋಲ್‌ ಬಂಕ್‌ಗಳಲ್ಲಿ ಆರಂಭಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT