ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಿಯರ ವಿಶ್ವಕಪ್‌: ವೆಸ್ಟ್‌ಇಂಡೀಸ್‌ ಚಾಂಪಿಯನ್‌

ಫೈನಲ್‌ನಲ್ಲಿ ಎಡವಿದ ಭಾರತ ತಂಡ
Last Updated 14 ಫೆಬ್ರುವರಿ 2016, 11:53 IST
ಅಕ್ಷರ ಗಾತ್ರ

ಮೀರ್‌ಪುರ (ಪಿಟಿಐ): ಭಾರತ ತಂಡ 19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಮುಗ್ಗರಿಸಿದೆ.

ಭಾನುವಾರ ಇಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 145 ರನ್‌ಗಳ ಗುರಿ ಬೆನ್ನೆಟ್ಟಿದ ವೆಸ್ಟ್‌ ಇಂಡೀಸ್‌, 49.3 ಓವರ್‌ಗಳಲ್ಲಿ ಗುರಿ ತಲುಪುವ ಮೂಲಕ 5 ವಿಕೆಟ್‌ಗಳ  ವಿಜಯ ದಾಖಲಿಸಿ ವಿಶ್ವಕಪ್‌ ಎತ್ತಿ  ಹಿಡಿಯಿತು.

ಚಾಂಪಿಯನ್‌ ಪಟ್ಟ ಅಲಂಕರಿಸುವ ಭಾರತದ ಕನಸಿಗೆ ವೆಸ್ಟ್‌ಇಂಡೀಸ್‌ನ ಕೆ.ಯು ಕಾರ್ಟಿ (52) ಮತ್ತು ಕೆ.ಎಂ.ಎ ಪಾಲ್ ಅಜೇಯ (40) ತಣ್ಣೀರೆರೆಚಿದರು.  ಕೊನೆಯ ಓವರ್‌ನಲ್ಲಿ ವೆಸ್ಟ್‌ ಇಂಡೀಸ್‌ ಗೆಲುವಿಗೆ ಮೂರು ರನ್‌ ಬೇಕಿತ್ತು. ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ  ಕೆರೆಬಿಯನ್‌ ಪಡೆ ಈ ಗುರಿ ತಲುಪಿತು. 

ಭಾರತ ತಂಡದ ಪರವಾಗಿ ಸರ್ಫರಾಜ್‌ ಖಾನ್‌ (51), ಆರ್‌.ಆರ್‌ ಬಾಥಮ್‌ (21), ಎಂ.ಕೆ. ಲ್ಯಾಮ್ರರ್‌ (19)  ರನ್‌ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸಿನಲ್ಲಿ ನಿಲ್ಲಲಿಲ್ಲ. ಉತ್ತಮ ಲಯದಲ್ಲಿದ್ದ ನಾಯಕ ಕಿಶನ್‌ (4) ಮತ್ತು ರಿಷಭ್‌ ಪಂತ್‌ (1) ಬೇಗನೆ ಔಟಾಗಿದ್ದು ಭಾರತಕ್ಕೆ ಮುಳುವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT