ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರು ಚಿತ್ರಗಳಿಗಳೊಂದು ಸ್ಪರ್ಧೆ

ಪಂಚರಂಗಿ
Last Updated 26 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ತಮ್ಮ ಕಿರು ಚಿತ್ರಗಳನ್ನು ಬೆಳ್ಳಿಪರದೆ ಮೇಲೆ ತೋರಿಸುವ ಆಸೆ ಹಲವು ಉತ್ಸಾಹಿಗಳಲ್ಲಿ ಇರುತ್ತದೆ. ಆದರೆ ಅದಕ್ಕೆಲ್ಲ ಮಾರುಕಟ್ಟೆ ಕೌಶಲ ಬೇಕಲ್ಲವೇ? ‘ಆ ಚಿಂತೆಯನ್ನೆಲ್ಲ ಬಿಟ್ಟು ಬಿಡಿ. ನಿಮ್ಮ ಕಿರುಚಿತ್ರ ಚೆನ್ನಾಗಿದ್ದರೆ ಅದನ್ನು ನಾವು ಮಲ್ಟಿಪ್ಲೆಕ್ಸ್‌ಗಳಲ್ಲಿ ತೋರಿಸುತ್ತೇವೆ’ ಎನ್ನುತ್ತಾರೆ ‘ದಿ ಪಿಕ್ಚರ್ ಹೌಸ್‌’ನ ಸಂಸ್ಥಾಪಕ ಕುಮಾರ ಈಶ್ವರ್. ಅದಕ್ಕಾಗಿಯೇ ಅವರು ಕಿರುಚಿತ್ರ ಸ್ಪರ್ಧೆ ಆಯೋಜಿಸಿದ್ದು, ಇದರಲ್ಲಿ ಆಯ್ಕೆಯಾಗುವ ಚಿತ್ರಗಳನ್ನು ಮಲ್ಟಿಪ್ಲೆಕ್ಸ್‌ನಲ್ಲಿ ಪ್ರದರ್ಶಿಸಲಾಗುತ್ತದೆ.

ಅಲ್ಪ ಅವಧಿಯಲ್ಲಿ ಸಾಕಷ್ಟು ಸಂಗತಿ ಹೇಳುವ ಹಾಗೂ ನೋಡುಗನನ್ನು ಚಿಂತನೆಗೆ ಹಚ್ಚುವ ಕಿರುಚಿತ್ರಗಳು ಈಗ ಜನಪ್ರಿಯವಾಗುತ್ತಿವೆ. ಆದರೆ ಅವು ಫೇಸ್‌ಬುಕ್ ಅಥವಾ ಯೂಟ್ಯೂಬ್‌ನಲ್ಲಿ ಮಾತ್ರ ನೋಡಲು ಸಿಗುತ್ತವೆ. ತಮಾಷೆಯ ಹಾಗೂ ವಿಚಾರ ಪ್ರಚೋದಕ ಕಿರುಚಿತ್ರಗಳನ್ನು ವಾಟ್ಸಪ್‌ಗಳಲ್ಲಿ ಹಂಚಿಕೊಳ್ಳುವ ಪರಿಪಾಠವೂ ಹೆಚ್ಚುತ್ತದೆ. ಆದರೆ, ಅವು ದೊಡ್ಡ ತೆರೆಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ.

ಇದನ್ನು ಗಮನಿಸಿ, ‘ದಿ ಪಿಕ್ಚರ್‌ ಹೌಸ್’ ಕಿರುಚಿತ್ರ ಸ್ಪರ್ಧೆ ನಡೆಸಲಿದೆ. ಸ್ಪರ್ಧೆಗೆ ಬರುವ ಕಿರುಚಿತ್ರಗಳನ್ನು ವೀಕ್ಷಿಸಿ ಆಯ್ಕೆ ಮಾಡುವ ಕೆಲಸವನ್ನು ಅನುಭವಿಗಳ ತಂಡವೊಂದಕ್ಕೆ ವಹಿಸಲಾಗಿದೆ. ‘ವಿಜೇತ ಕಿರುಚಿತ್ರಗಳನ್ನು ಬೆಂಗಳೂರಿನ ಮಲ್ಟಿಪ್ಲೆಕ್ಸ್‌ನಲ್ಲಿ ಪ್ರದರ್ಶಿಸಲು ಯೋಜನೆ ರೂಪಿಸಲಾಗಿದೆ. ಬರುವ ಆದಾಯದಲ್ಲಿ ಒಂದು ಭಾಗ ಚಿತ್ರಗಳ ನಿರ್ಮಾಪಕರಿಗೂ ಸಿಗಲಿದೆ’ ಎನ್ನುತ್ತಾರೆ ಕುಮಾರ್.

ಯಾವುದೇ ವಿಷಯದ ಕುರಿತು ತಯಾರಿಸಿದ, ಹತ್ತರಿಂದ ಇಪ್ಪತ್ತು ನಿಮಿಷಗಳ ಅವಧಿಯ ಚಿತ್ರಗಳನ್ನು ಸ್ಪರ್ಧೆಗೆ ಕಳಿಸಬಹುದು. ಕೊನೆಯ ದಿನಾಂಕ: ಮೇ 20. ಸ್ಪರ್ಧೆ ಕುರಿತು ಹೆಚ್ಚಿನ ವಿವರಗಳಿಗೆ ದೂರವಾಣಿ 84950 62520 ಸಂಪರ್ಕಿಸಲು ಕೋರಲಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT