ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಲ್ಲಿಂಗ್‌ ವೀರಪ್ಪನ್‌ನನ್ನು ಹಿಂದಿಕ್ಕಿದ ಆ್ಯಂಗ್ರಿ ಬರ್ಡ್ಸ್‌

Last Updated 29 ಮೇ 2016, 19:30 IST
ಅಕ್ಷರ ಗಾತ್ರ

ಭಾರತೀಯ ಬಾಕ್ಸ್‌ ಆಫೀಸಿನಲ್ಲಿ ಸಾಮಾನ್ಯವಾಗಿ ಹಾಲಿವುಡ್‌ ಮತ್ತು ಬಾಲಿವುಡ್‌ ಸಿನಿಮಾಗಳು ಪ್ರತಿಸ್ಪರ್ಧಿಯಾಗುವುದಿಲ್ಲ. ಆದರೆ, ಈ ಬಾರಿ ಈ ನಿಯಮ ಉಳಿಯಲಿಲ್ಲ.

ಕ್ಲೇ ಕೆಟಿಸ್ ಮತ್ತು ಫೆರ್‌ಗಲ್‌ ರೆಲ್ಲಿ ತೆರೆಗೆ ತಂದಿರುವ ‘ದಿ ಆ್ಯಂಗ್ರಿ ಬರ್ಡ್ಸ್‌’ ಚಿತ್ರವು ರಾಮ್‌ಗೋಪಾಲ್ ವರ್ಮಾ ನಿರ್ದೇಶನದ ಬಹುಚರ್ಚಿತ ‘ವೀರಪ್ಪನ್‌’ (ಹಿಂದಿ) ಚಿತ್ರದ ಜತೆ ಸ್ಪರ್ಧೆಗಿಳಿದಿದೆ.

‘ದಿ ಆ್ಯಂಗ್ರಿ ಬರ್ಡ್ಸ್‌’ ಮೊದಲ ದಿನ ₹2.16 ಕೋಟಿ ಗಳಿಸಿದೆ. ‘ವೀರಪ್ಪನ್’ ಗಳಿಕೆ ₹ 1.77 ಕೋಟಿ ಗಳಿಸಿದೆ’ ಎಂದು ಸಿನಿಮಾ ವಹಿವಾಟಿನ ವಿಶ್ಲೇಷಕ ತರನ್‌ ಆದರ್ಶ್ (@taran_adarsh) ಟ್ವೀಟ್‌ ಮಾಡಿದ್ದಾರೆ.

ಜನಪ್ರಿಯ ವಿಡಿಯೊ ಗೇಂನ ಕಥೆ ಆಧರಿಸಿದ ‘ಆ್ಯಂಗ್ರಿ ಬರ್ಡ್‌’, ದಕ್ಷಿಣ ಭಾರತದ ಮೂರು ರಾಜ್ಯ ನಡುಗಿಸಿದ ‘ವೀರಪ್ಪನ್’ ಬದುಕು ಆಧರಿಸಿದ ಚಿತ್ರವನ್ನು ಗಳಿಕೆಯಲ್ಲಿ ಮೀರಿಸಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ.

ಈ ಹಿಂದೆ ಹಾಲಿವುಡ್‌ನ ‘ಕ್ಯಾಪ್ಟನ್ ಅಮೆರಿಕ’, ‘ಸಿವಿಲ್‌ ವಾರ್’, ‘ದಿ ಜಂಗಲ್ ಬುಕ್‌’, ‘ಬ್ಯಾಟ್‌ಮನ್‌ ವರ್ಸಸ್‌ ಸೂಪರ್ ಮ್ಯಾನ್‌’, ‘ಡೆಡ್‌ ಪೂಲ್‌’ ಸಿನಿಮಾಗಳು ಭಾರತದಲ್ಲಿ ಹೆಚ್ಚು ಹಣ ಗಳಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT