ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿವುಡರ ರಾಜ್ಯ ಮಟ್ಟದ ಕ್ರಿಕೆಟ್‌ ಟೂರ್ನಿ ಇಂದಿನಿಂದ

Last Updated 19 ಡಿಸೆಂಬರ್ 2014, 7:05 IST
ಅಕ್ಷರ ಗಾತ್ರ

ವಿಜಯಪುರ: ಕಿವುಡರ ರಾಜ್ಯ ಮಟ್ಟದ ನಾಲ್ಕನೇ ಟೆನಿಸ್‌ಬಾಲ್ ಕ್ರಿಕೆಟ್‌ ಟೂರ್ನಿ ಇದೇ ನಗರದಲ್ಲಿ ಇದೇ 19­ರಿಂದ ಮೂರು ದಿನ ನಡೆಯಲಿದ್ದು, ಅಂತಿಮ ಹಂತದ ಸಿದ್ಧತೆಗಳು ಪೂರ್ಣ­ಗೊಂಡಿವೆ. ಇಲ್ಲಿ ಪ್ರಥಮ ಬಾರಿ ಈ ಟೂರ್ನಿ ನಡೆಯುತ್ತಿದೆ.

ನಾಕೌಟ್‌ ಮಾದರಿಯ ಟೂರ್ನಿಯ ಮೊದಲ ದಿನ ನಗರದ ಡಾ.ಅಂಬೇ­ಡ್ಕರ್ ಜಿಲ್ಲಾ ಕ್ರೀಡಾಂಗಣ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ತಲಾ ನಾಲ್ಕು ಪಂದ್ಯಗಳು ಇರುತ್ತವೆ. ಬೆಳಿಗ್ಗೆ 9ಕ್ಕೆ ಪಂದ್ಯಗಳು ಆರಂಭವಾಗಲಿವೆ.
ಶನಿವಾರ ಸೆಮಿಫೈನಲ್ ಪಂದ್ಯ ನಡೆಯ­ಲಿದ್ದು, ಭಾನುವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಫೈನಲ್ ನಡೆಯಲಿದೆ. 

ಗುರುವಾರ ಸಂಜೆ­ಯೊಳಗೆ ಬೆಂಗ­ಳೂರು, ಕೋಲಾರ, ಮಂಡ್ಯ, ಹಾಸನ, ಚಿಕ್ಕಮಗಳೂರು, ಉಡುಪಿ, ಚಿತ್ರ­ದುರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರ­ವಾಡ, ಬೀದರ್, ಬೆಳಗಾವಿ, ಬಾಗಲಕೋಟೆ ಜಿಲ್ಲಾ ತಂಡಗಳು ನಗರಕ್ಕೆ ಬಂದಿವೆ ಎಂದು ಪಂದ್ಯಾವಳಿ ಆಯೋಜಿಸಿರುವ ರೋಟರಿ ಕ್ಲಬ್‌ ಆಫ್‌ ಬಿಜಾಪುರ ಹೆರಿಟೇಜ್‌ ಸಂಸ್ಥೆಯ ಪದಾ­ಧಿ­ಕಾರಿ ಸುರೇಶ ಬಿಜಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂತಿಮ ಸ್ಪರ್ಶ: ಕಿವುಡರ ಕ್ರಿಕೆಟ್‌ ಟೂರ್ನಿಗೆ ರೂಪಿಸಿರುವ ಪಿಚ್‌ಗೆ ಗುರು­ವಾರ ಮುಸ್ಸಂಜೆ ಅಂತಿಮ ಸ್ಪರ್ಶ ನೀಡಲಾಯಿತು. ಇದೇ ಸಂದರ್ಭ ಬೌಂಡರಿ ಗೆರೆಯನ್ನು ಗುರುತಿಸ­ಲಾಯಿತು.  ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳ­ವಾರ ಮಧ್ಯಾಹ್ನದಿಂದಲೇ ಪಿಚ್‌ ತಯಾರಿ ನಡೆದಿದ್ದು, ಗುರುವಾರ ಸಂಜೆ ಮತ್ತೊಮ್ಮೆ ನೀರು ಚಿಮುಕಿಸಿ ಪಿಚ್‌ ಮೇಲೆ ರೋಲ್‌ ಮಾಡಲಾಯಿತು. ಕ್ರೀಡಾಂಗಣದ ಮಾರ್ಕರ್ ಬಸವಂತ ಮೇಲಿನಮನಿ (ಭೀಮಶಿ) ತನ್ನ ಸಹ­ವರ್ತಿಗಳ ಜತೆ ಕಾಮ­ಗಾರಿ­ಗಳನ್ನು ಚುರುಕಿನಿಂದ ನಿರ್ವಹಿಸಿ, ಟೂರ್ನಿಗೆ ಅಂತಿಮ ಸ್ವರೂಪ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT