ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರ್ಚಿ ತೂರಾಟ: ಗ್ರಾಮಸಭೆ ರದ್ದು

ಕಾರಹಳ್ಳಿ ಜಮೀನು ವಿವಾದ : ಭುಗಿಲೆದ್ದ ಗ್ರಾಮಸ್ಥರ ಆಕ್ರೋಶ
Last Updated 19 ಸೆಪ್ಟೆಂಬರ್ 2014, 9:39 IST
ಅಕ್ಷರ ಗಾತ್ರ

ದೇವನಹಳ್ಳಿ:  ಹುತಾತ್ಮ ಯೋಧರ ಪತ್ನಿಗೆ ಮಂಜೂರಾಗಿರುವ ಜಮೀನಿನ ವಿವಾದ ಸೋಮವಾರ ತಾಲ್ಲೂಕಿನ ಕಾರ­­ಹಳ್ಳಿ ಗ್ರಾಮಸಭೆಯಲ್ಲೂ ಪ್ರತಿ­ಧ್ವನಿಸಿ ಕುರ್ಚಿಗಳ ತೂರಾಟಕ್ಕೆ ಕಾರಣ­ವಾ-ಯಿತು. ಗದ್ದಲ, ಗೊಂದಲದಿಂದ ಗ್ರಾಮ­ಸಭೆ­­ಯನ್ನೇ ರದ್ದುಪಡಿ­ಸ­ಬೇಕಾಯಿತು.

ಕಾರಹಳ್ಳಿ ಗ್ರಾಮ ಪಂಚಾಯಿತಿ ಆವ­ರಣದಲ್ಲಿ  ಆಯೋಜಿಸಿದ್ದ ಗ್ರಾಮಸಭೆ­ಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿ­ನಿಧಿಗಳ ವಿರುದ್ಧ ಹರಿಹಾಯ್ದ ಆಕ್ರೋಶ­ಗೊಂಡ ಗ್ರಾಮಸ್ಥರು ಜಮೀನು ಮಂಜೂ­­ರಾತಿ ರದ್ದುಗೊಳಿಸುವವರೆಗೂ ಗ್ರಾಮಸಭೆ ಬೇಡವೆಂದು ಪಟ್ಟು ಹಿಡಿದರು.

ಗ್ರಾಮಸ್ಥರ ಮನವೊಲಿಸಲು ಪ್ರಯ­ತ್ನಿಸಿದ ಶಾಸಕ ಪಿಳ್ಳಮುನಿಶ್ಯಾಮಪ್ಪ ಗ್ರಾಮ­­ಸಭೆ ವರ್ಷಕ್ಕೆರಡು ಬಾರಿ ನಡೆಸು­ವುದು ಪಂಚಾಯತ್‌ರಾಜ್ ಕಾಯ್ದೆ ಅನು­ಗುಣವಾಗಿದೆ. ರದ್ದು ಪಡಿಸಿದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡುವ ಅವಕಾಶವಿದೆ.

ಜಮೀನು ವಿಚಾರವನ್ನು ಗ್ರಾಮಸಭೆ­ಯಲ್ಲಿ ತರುವುದು ಬೇಡ ಎಂದರು. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಗ್ರಾಮ­ಸ್ಥರು ಶಾಸಕರಿಗೆ ಮತ್ತು ದಂಡಾ-­­ಧಿ­ಕಾರಿಗಳ ವಿರುದ್ಧ  ಧಿಕ್ಕಾರ ಹಾಕಿದರು.

ವೇದಿಕೆಯತ್ತ ಧಿಕ್ಕಾರದ ಫಲಕಗಳನ್ನು ಹಿಡಿದು ಬಂದ ನೂರಕ್ಕೂ ಹೆಚ್ಚಿನ ಯುವ­ಕರ ತಂಡ ಕುರ್ಚಿಗಳನ್ನು ತೂರಿ­ದರು.   ಸಿಪಿಐ ಮಹೇಶ್‌ ಕುಮಾರ್ ತಕ್ಷಣ ಕುರ್ಚಿ ತೂರಾಟದಲ್ಲಿ ತೊಡಗಿದ್ದವ­ರನ್ನು ಹಿಡಿದುಕೊಳ್ಳುವಲ್ಲಿ ಯಶಸ್ವಿ­ಯಾ­ದರೂ ಗದ್ದಲ, ಕೂಗಾಟ, ತಡೆಯಲು ಆಗಲಿಲ್ಲ. ತಕ್ಷಣ ವೇದಿಕೆಯಿಂದ ಇಳಿದ ಶಾಸಕರು ನಿವೇಶನ ಸಮಸ್ಯೆಯನ್ನು ಸೌಹಾ­­ರ್ದಯುತವಾಗಿ ಬಗೆ ಹರಿ­ಸೋಣ ಎಂದು ಸಮಾಧಾನ ಪಡಿಸಿ­ದರು. ನಂತರ ಎಲ್ಲ ಅಧಿಕಾರಿಗಳು ಗ್ರಾಮ­ಸ್ಥ­ರೊಂದಿಗೆ ನಿವೇಶನ ಮಂಜೂ­ರಾಗಿರುವ ಸ್ಥಳಕ್ಕೆ ಬಂದರು.

ಗ್ರಾಮದ ಮುಖಂಡ ಮುನೇಗೌಡ ಮಾತನಾಡಿ, ಕಳೆದ 20 ವರ್ಷಗಳಿಂದ ಗ್ರಾಮಕ್ಕೆ ಹೊಂದಿಕೊಂಡಿರುವ ಜಾಗ­ದಲ್ಲಿ ಎಲ್ಲಾ ಸಮುದಾಯದ ಕಡು­ಬಡ­ವರು 53ರ ನಮೂನೆ ಅರ್ಜಿ ಸಲ್ಲಿಸಿ­ಕೊಂಡಿದ್ದರೂ ಇದುವರೆಗೂ ಸರ್ಕಾರ ನಿವೇಶನ ಮಂಜೂರು ಮಾಡಿಲ್ಲ. ಈಗ ಯಾರದೋ ಮರ್ಜಿಗೆ ಸ್ಥಳಿಯರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಇಲ್ಲಿನ ಅರ್ಹರಿಗೆ ನಿವೇಶನ ನೀಡ­ಲೇಬೇಕು ಎಂದರು ಆಗ್ರಹಿಸಿದರು.

ಜಿಲ್ಲಾ ಸಹಕಾರ ಯುನಿಯನ್ ನಿರ್ದೇ­­ಶಕ ದೇವರಾಜ್ ಮಾತನಾಡಿ, 1994­ರಿಂದ ಇದುವರೆಗೂ ಪ್ರತಿ­ಯೊಂದು ಗ್ರಾಮ ಸಭೆಯಲ್ಲಿ ಸರ್ವಾ­ನು­ಮತ­­ದಿಂದ ಠರಾವು ಮಂಡಿಸಿ ಸಂಬಂ­ಧಿಸಿದ ಎಲ್ಲ ಇಲಾಖೆಗಳಿಗೂ ಪ್ರತಿಯನ್ನು ರವಾನಿಸಲಾಗಿದೆ ಉಪವಿಭಾಗಾಧಿಕಾರಿ,  ಜಿಲ್ಲಾಧಿಕಾರಿಗೂ ಪ್ರತ್ಯೇಕ ಮನವಿ ಸಲ್ಲಿಸಿ ಕೋರಲಾಗಿದೆ. ಆದರೂ ಕ್ರಮ­ಕೈಗೊಂಡಿಲ್ಲ. ಗ್ರಾಮ ಪಂಚಾಯಿತಿಯೇ ಸ್ಥಳಿಯ ಸರ್ಕಾರವೆಂದು ಪಂಚಾಯತ್‌ ರಾಜ್ ಕಾಯ್ದೆ ತಿಳಿಸುತ್ತದೆ. ಠರಾವಿಗೆ ಬೆಲೆ ಇಲ್ಲದ ಮೇಲೆ ಗ್ರಾಮ ಪಂಚಾ­ಯಿತಿ ವ್ಯವಸ್ಥೆ ಏಕೆ ಎಂದು ತಹಶೀಲ್ದಾರ್‌ ಅವರನ್ನು ಪ್ರಶ್ನಿಸಿದರು.

ಗ್ರಾ.ಪಂ. ಸದಸ್ಯ ರಾಜೇಂದ್ರ ಮಾತ­ನಾಡಿ, ಗ್ರಾಮದಲ್ಲಿನ ಅಶಾಂತಿಗೆ ತಹ­ಶೀಲ್ದಾರ್‌ ಹಾಗೂ ಭೂ ಮಾಪನ ಇಲಾಖೆ ಅಧಿಕಾರಿಗಳೇ ಕಾರಣ, ಸ್ಥಳಿ­ಯರಿಗೆ ಮಾಹಿತಿ ಇಲ್ಲದೆ ಸರ್ವೆ ಮಾಡಿದ್ದು, ತಾಲ್ಲೂಕು ಅಧಿಕಾರಿಗಳು ಗೌಪ್ಯ­ವಾಗಿ ಸರ್ಕಾರಕ್ಕೆ ವರದಿ ನೀಡಿದ್ದ­ರಿಂದ ಸಮಸ್ಯೆಯಾಗಿದೆ. ಸತತ ಹೋರಾ­ಟಕ್ಕೆ ಬೆಲೆ ಇಲ್ಲ. ಆದರೆ ರಾತ್ರೋ ರಾತ್ರಿ ಐದು ಎಕರೆ ಭೂಮಿ ಮಂಜೂರು ಮಾಡಿ­ರುವುದು ಅನು­ಮಾನಕ್ಕೆ ಕಾರಣ­ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿ­ಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾ­ಲಕ ಕಾರಹಳ್ಳಿ ಶ್ರೀನಿವಾಸ್ ಮಾತ­ನಾಡಿ, ಮಾಜಿ ಯೋಧನ ಪತ್ನಿ ಸುಭಾ­ಷಿಣಿ ವಸಂತ ಅವರ ಬಗ್ಗೆ ಗೌರವವಿದೆ. ಆದರೆ ಸರ್ಕಾರ ಈಗ ಮಂಜೂರು ಮಾಡಿ­ರುವ 5 ಎಕರೆ ಜಮೀನಿನಲ್ಲಿ ಅವಲಕೊಂಡ ಸ್ವಾಮಿ ದೇವಾಲಯ­ವಿದ್ದು, ಮುಜುರಾಯಿ ಇಲಾಖೆಗೆ ಸೇರಿದೆ.

ಈಗಾಗಲೇ 80ಕ್ಕೂ ಹೆಚ್ಚು ಗುಡಿ­ಸಲುಗಳಿವೆ ಸ.ನಂ.223ರ ಪಕ್ಕ­ದಲ್ಲೆ ಯೋಧರ ಪತ್ನಿಗೆ ಜಮೀನು ನೀಡಲಿ. ಸರ್ಕಾರ ಪದೇ ಪದೇ ಗ್ರಾಮ­ಸ್ಥರ ಮೇಲೆ ದೌರ್ಜನ್ಯ ನಡೆಸುವುದು ಸೂಕ್ತವಲ್ಲ. ಅಧಿಕಾರಿಗಳು ಗ್ರಾಮಸ್ಥ­ರೊಂದಿಗೆ ಚೆಲ್ಲಾಟವಾಡಬಾರದು. ರಕ್ತ ಹರಿ­ದರೂ ಒಂದಿಂಚು ಭೂಮಿ ನೀಡು­ವುದಿಲ್ಲ. ಇದು ಗ್ರಾಮಸ್ಥರ ಒಮ್ಮತದ ನಿರ್ಣಯ ಎಂದು ಖಡಕ್ ಎಚ್ಚರಿಕೆ ನೀಡಿದರು.

ಶಾಸಕ ಪಿಳ್ಳಮುನಿಶ್ಯಾಮಪ್ಪ ಮಾತ­ನಾಡಿ, ಕಳೆದ ಇಪ್ಪತ್ತು ವರ್ಷಗಳಿಂದ ಸಮಸ್ಯೆ ಇದ್ದರೂ ಅಧಿಕಾರಿಗಳು ನಿರ್ಲಕ್ಷ್ಯ­ವಹಿಸಿದ್ದಾರೆ ಸರ್ಕಾರ ಏಕಾಏಕಿ ನಿರ್ಧಾರ ಕೈಗೊಂಡಿದೆ. ದೇಶ ಸೇವೆ­ಯಲ್ಲಿ ಪ್ರಾಣ ಕಳೆದುಕೊಂಡ ಯೋಧರ ಪತ್ನಿ ಬಗ್ಗೆ ಗೌರವವಿದೆ. ಆದರೆ ಒಬ್ಬ­ರನ್ನು ಸಂತೈಸಲು ನೂರಾರು ಕುಟುಂಬ­ಗಳನ್ನು ಬೀದಿಗೆ ತರಲು ಸಾಧ್ಯವಿಲ್ಲ. ಗ್ರಾಮಕ್ಕೆ ಹೊಂದಿಕೊಂಡಿರುವ ಜಾಗ ಗ್ರಾಮಸ್ಥರಿಗೆ ಬೇಕು. ಯೋಧರ ಪತ್ನಿ ಬದಲಿ ವ್ಯವಸ್ಥೆ ಮಾಡಿಕೊಂಡರೆ ಒಳ್ಳೆ­ಯದು ಜನಸಾಮಾನ್ಯರ ನ್ಯಾಯಯುತ  ಹೋರಾಟಕ್ಕೆ ಸದಾ ನನ್ನ ಬೆಂಬಲವಿದೆ ಎಂದರು.

ತಹಶೀಲ್ದಾರ್ ಕೇಶವಮೂರ್ತಿ ಮಾತ­ನಾಡಿ, ಸರ್ಕಾರದ ಆದೇಶವನ್ನು ಪಾಲಿಸುವುದು ಅಧಿಕಾರಿಗಳ ಕರ್ತವ್ಯ . ಅದನ್ನು ತಿರಸ್ಕರಿಸುವಂತಿಲ್ಲ. ಮುಖಂಡ­ರೊಂದಿಗೆ ಸರ್ಕಾರದ ಮಟ್ಟದಲ್ಲಿ ಬಗೆ­ಹರಿಸಿಕೊಳ್ಳಿ ಅನಗತ್ಯ ಅಧಿಕಾರಿಗಳ ಮೇಲೆ ಅಪವಾದ ಹೊರಿಸುವುದು ಬೇಡ ಎಂದರು.

ತಾ.ಪಂ. ಅಧ್ಯಕ್ಷ ವೆಂಕಟೇಶಮ್ಮ, ಉಪಾ­ಧ್ಯಕ್ಷೆ ಮೀನಾಕ್ಷಿ ಮುನಿಕೃಷ್ಣ, ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಮ್ಮ, ಉಪಾ­ಧ್ಯಕ್ಷೆ ಜಯಸುಧಾ ಮೂಕ ಪ್ರೇಕ್ಷಕ­ರಾದರೆ ವಿವಿಧ ಇಲಾಖೆ ಅಧಿಕಾರಿಗಳು ಜಾಗಖಾಲಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT