ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರ್ದ್‌ ಹೋರಾಟ­ಗಾರರಿಗೆ ಅಮೆರಿಕದಿಂದ ಶಸ್ತ್ರಾಸ್ತ್ರ

Last Updated 20 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌(ಎಎಫ್‌ಪಿ): ಸಿರಿಯಾದ ಕೊಬಾನೆ ಪಟ್ಟಣದಲ್ಲಿ  ಇಸ್ಲಾಮಿಕ್ ಸ್ಟೇಟ್ ಉಗ್ರ­ಗಾ­ಮಿಗಳ ವಿರುದ್ಧ ಹೋರಾಟ ನಡೆಸುತ್ತಿರುವ ಕುರ್ದ್ ಹೋರಾಟ­ಗಾರರಿಗೆ ನೆರ­ವಾಗುವ ಉದ್ದೇಶ­ದಿಂದ ಅಮೆರಿಕ  ವಿಮಾನದ ಮೂಲಕ ಶಸ್ತ್ರಾಸ್ತ್ರ ಮತ್ತು ಮದ್ದು­ಗುಂಡುಗಳನ್ನು ಸರಬರಾಜು ಮಾಡಿದೆ.

ಕೊಬಾನೆ ಪಟ್ಟಣದಲ್ಲಿ ಐಎಸ್‌ ಉಗ್ರರ ವಿರುದ್ಧ ಕುರ್ದ್ ಸಮುದಾಯ ಒಂದು ತಿಂಗಳಿಗೂ ಹೆಚ್ಚು ಸಮಯ ದಿಂದ ಹೋರಾಟ ನಡೆಸುತ್ತಿದೆ.ಶಸ್ತ್ರಾಸ್ತ್ರ ಪೂರೈಸಿದ ಅಮೆ­ರಿಕ ವಿಮಾನಗಳಿಗೆ ಆಕಾಶ, ಭೂಮಿ­ಯಲ್ಲಿ ಯಾವುದೇ ಪ್ರತಿರೋಧ ವ್ಯಕ್ತ­ವಾ­ಗಿಲ್ಲ. ಈ ವಿಮಾನಗಳ ಜತೆ ಇತರೆ ಯುದ್ಧ ವಿಮಾನಗಳು ಇರಲಿಲ್ಲ ಎಂದು ಅಮೆರಿ­ಕದ ಹಿರಿಯ ಅಧಿಕಾರಿ ­ತಿಳಿದ್ದಾರೆ.

ಐಎಸ್‌ ಉಗ್ರರನ್ನು ಮಟ್ಟಹಾಕುವ ಉದ್ದೇಶದಿಂದಲೇ ಅಮೆರಿಕ ವಾಯು ಮಾರ್ಗದ ಮೂಲಕ ಕುರ್ದ್‌ ಹೋರಾ­ಟ­ಗಾರರಿಗೆ ನೆರವಾಗುತ್ತಿದೆ ಎಂದು ಅಮೆ­ರಿಕದ ಸೆಂಟ್ರಲ್‌ ಕಮಾಂಡ್‌ ಹೇಳಿದೆ. ಐಎಸ್ ಉಗ್ರರ ವಿರುದ್ಧ ಕುರ್ದ್‌ ಹೋರಾಟಗಾರರು  ನಡೆಸುತ್ತಿ­ರುವ ಯುದ್ಧ ಉತ್ತಮ ಪ್ರಗತಿ ಕಾಣು­ತ್ತಿದೆ. ಆದರೆ ಕೊಬಾನೆ ಪಟ್ಟಣವನ್ನು ಐಎಸ್ ಉಗ್ರರಿಂದ ಬಿಡಿಸಿಕೊಳ್ಳುವುದು ಸದ್ಯಕ್ಕೆ ಸಾಧ್ಯವಿಲ್ಲ ಎಂದು ಅಮೆರಿಕದ ಅಧಿಕಾರಿ­ಯೊಬ್ಬರು ಹೇಳಿದ್ದಾರೆ.

ಈ ಮಧ್ಯೆ, ಕೊಬಾನೆಯಲ್ಲಿ ಹೋರಾಟ ನಡೆಸುತ್ತಿರುವ ಕುರ್ದ್‌ ಯೋಧರಿಗೆ ನೆರವು ನೀಡಲು ಇರಾಕ್‌ನ ಕುರ್ದ್‌ ಸಮುದಾ­ಯದ ಜನರು ಸಿರಿ­ಯಾಕ್ಕೆ ಹೋಗು­ವುದಕ್ಕೆ ಅಗತ್ಯ ನೆರವು ನೀಡುವುದಾಗಿ ಟರ್ಕಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT