ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಪತಿಗಳ ವಿರುದ್ಧ ಹಕ್ಕುಚ್ಯುತಿ ಪ್ರಸ್ತಾಪ

Last Updated 26 ನವೆಂಬರ್ 2015, 20:17 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಗಳ ಕುಲಪತಿ, ಕುಲಸಚಿವರ ವಿರುದ್ಧ ಬಿಜೆಪಿ ಸದಸ್ಯರು ವಿಧಾನ ಪರಿಷತ್ತಿನಲ್ಲಿ ಗುರುವಾರ ಹಕ್ಕು ಚ್ಯುತಿ ಪ್ರಸ್ತಾಪ ಮಂಡಿಸಿದರು.

ಈ ವಿಶ್ವವಿದ್ಯಾಲಯಗಳು ಹೊಸ ನಿಯಮ ರಚಿಸಿದಾಗ ಅದನ್ನು ಸದನದಲ್ಲಿ ಮಂಡಿಸಬೇಕು. ಆದರೆ  ವಿಶ್ವವಿದ್ಯಾಲಯಗಳು ಹಲವು ನಿಯಮ, ಪರಿನಿಯಮಗಳನ್ನು ರಚಿಸಿದ್ದರೂ ಅವುಗಳನ್ನು ಸದನದಲ್ಲಿ ಮಂಡಿಸಿಲ್ಲ. ಇದರಿಂದ ಸದನದ ಹಕ್ಕು ಚ್ಯುತಿಯಾಗಿದೆ ಎಂದು  ಪ್ರಸ್ತಾಪದಲ್ಲಿ ಹೇಳಿದ್ದಾರೆ.

ಬಿಜೆಪಿಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ವೈ.ಎ. ನಾರಾಯಣಸ್ವಾಮಿ, ಅಮರನಾಥ ಪಾಟೀಲ, ಅರುಣ ಶಹಾಪುರ ಮತ್ತು ಎಸ್‌.ವಿ. ಸಂಕನೂರ ಅವರು ಪ್ರಸ್ತಾಪಕ್ಕೆ ಸಹಿ ಮಾಡಿದ್ದಾರೆ. ಪ್ರಸ್ತಾಪವನ್ನು ಹಕ್ಕುಬಾಧ್ಯತಾ ಸಮಿತಿಯ ಪರಿಶೀಲನೆಗೆ ಕಳುಹಿಸುವುದಾಗಿ ಸಭಾಪತಿ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT