ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಲಕರ್ಮಿಗಳ ಕೈಯಲ್ಲರಳಿದ ದೇಸಿ ಚಿತ್ತಾರ

ಕೈಮಗ್ಗ, ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಗಳ ಪ್ರದರ್ಶನ
Last Updated 1 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಒಳಗೆ ಕಾಲಿಡುತ್ತಿದ್ದಂತೆ ಲಾವಂಚದ ಘಮ. ಎಲ್ಲಿ ನೋಡಿದರಲ್ಲಿ ಶುದ್ಧ ದೇಸಿ ವಸ್ತುಗಳ ಸೊಬಗು. ಕರ­ಕುಶ­ಲ­ಕರ್ಮಿಗಳ ಕೈಯಲ್ಲರಳಿದ ದೇಸಿ ಸೊಗ­ಡಿನ ಉಡುಪುಗಳು. ಬಿದಿರಿನ ಹಸೆ­ಕಲೆ ಚಿತ್ತಾರ, ಸಾವಯವ ಸಾಬೂನು­ಗಳು, ರಾಸಾಯನಿಕ ರಹಿತ ನೈಸರ್ಗಿಕ ಅಗರ ಬತ್ತಿಗಳು...
–‘ಗ್ರಾಮೀಣ ಅಂಗಡಿ’ ಒಳಗಿನ ದೃಶ್ಯ­ಗಳಿವು. ಜಯನಗರ 4ನೇ ಟಿ ಹಂತದಲ್ಲಿ­ರುವ ‘ಗ್ರಾಮೀಣ ಅಂಗಡಿ’ ಆಯೋಜಿಸಿ­ರುವ ಗ್ರಾಮೀಣ ಕರಕುಶಲಕರ್ಮಿಗಳ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು­ಳ ಮಾರಾಟ ಹಾಗೂ ಪ್ರದರ್ಶನ ಮೇಳಕ್ಕೆ ಶುಕ್ರವಾರ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಹಾಗೂ ರಂಗಕರ್ಮಿ ಲಕ್ಷ್ಮೀ ಚಂದ್ರಶೇಖರ್‌ ಚಾಲನೆ ನೀಡಿದರು.

ವರಮಹಾಲಕ್ಷ್ಮೀ–ಗೌರಿ ಹಬ್ಬದ ಸಡ­ಗರ ಹಾಗೂ ಸ್ವಾತಂತ್ರ್ಯೋತ್ಸವ ಮಾಸಾ­ಚ­­ರಣೆ ಅಂಗವಾಗಿ ಇಲ್ಲಿ ಕೈಮಗ್ಗ, ಖಾದಿ ಹಾಗೂ ಗ್ರಾಮೋದ್ಯೋಗ ವಸ್ತುಗಳ ಪ್ರದ­ರ್ಶನ 31ರವರೆಗೆ ನಡೆಯಲಿದೆ.

ಉದ್ಘಾಟನೆ ಬಳಿಕ ಮಾತನಾಡಿದ ಎಚ್‌.ಎಸ್‌. ದೊರೆಸ್ವಾಮಿ, ‘ರಾಜ್ಯದ ಕೆಲವೆಡೆ ಬಡತನ ತಾಂಡವ ವಾಡುತ್ತಿದೆ. ಆದರೆ, ಮಂತ್ರಿಗಳು, ಶಾಸಕರು ಅಧಿ­ವೇಶ­­ನದಲ್ಲಿ ಒಂದು ದಿನವೂ ಬಡತನದ ವಿಷಯದ ಬಗ್ಗೆ ಚರ್ಚಿಸಲಿಲ್ಲ. ಅದಕ್ಕೆ ಬದ­ಲಾಗಿ ಭೂ ಕಬಳಿಕೆ, ತಲೆದಂಡದ ವಿಷಯಗಳ ಬಗ್ಗೆಯೇ ಕಿತ್ತಾಡಿದರು’ ಎಂದು ಬೇಸರ ವ್ಯಕ್ತಪಡಿಸಿದರು.

ಲಕ್ಷ್ಮೀ ಚಂದ್ರಶೇಖರ್‌ ಮಾತನಾಡಿ, ‘ಗ್ರಾಮೀಣ ಹೆಣ್ಣು ಮಕ್ಕಳಲ್ಲಿ ಅದ್ಭುತ ಪ್ರತಿಭೆ ಅಡಗಿದೆ. ಇಂಥವರನ್ನು ಗುರು­ತಿಸಿ ಪ್ರೋತ್ಸಾಹಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT