ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಪಾಂಕ ಸಲ್ಲದು

Last Updated 24 ಮೇ 2016, 19:30 IST
ಅಕ್ಷರ ಗಾತ್ರ

ಒಮ್ಮೊಮ್ಮೆ ಪ್ರಶ್ನೆಪತ್ರಿಕೆಯಲ್ಲಿ ಕೇಳಿರುವ ಪ್ರಶ್ನೆಗಳೇ ತಪ್ಪಾಗಿರುತ್ತವೆ. ಅಂತಹ ಸಂದರ್ಭಗಳಲ್ಲಿ ಎಷ್ಟು ಪ್ರಶ್ನೆಗಳು ತಪ್ಪಾಗಿರುತ್ತವೆಯೋ ಅವಕ್ಕೆ ನಿಗದಿಪಡಿಸಿದ ಅಷ್ಟೂ ಅಂಕಗಳನ್ನು ಕೃಪಾಂಕಗಳಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ನೀಡಲಾಗುತ್ತದೆ. ಇದು ಮೂರ್ಖತನದ ಪರಮಾವಧಿ!

ತಪ್ಪಾಗಿರುವ ಪ್ರಶ್ನೆಗಳಿಗೆ ನಿಗದಿಗೊಳಿಸಿದ ಅಷ್ಟೂ ಅಂಕಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ನೀಡುವುದೂ ಒಂದೇ, ನೀಡದಿರುವುದೂ ಒಂದೇ! ಆದಕಾರಣ  ಕೃಪಾಂಕ ನೀಡುವ ಬದಲು, ತಪ್ಪು ಪ್ರಶ್ನೆಗಳಿಗೆ ನಿಗದಿಗೊಳಿಸಿದ ಅಂಕಗಳನ್ನು ಒಟ್ಟು ಅಂಕಗಳಲ್ಲಿ ಕಡಿತಗೊಳಿಸುವುದು ಒಳ್ಳೆಯದು. ಉದಾಹರಣೆಗೆ 100 ಅಂಕಗಳ ಪ್ರಶ್ನೆ ಪತ್ರಿಕೆಯಲ್ಲಿ ಐದು ಅಂಕಗಳುಳ್ಳ ಪ್ರಶ್ನೆಗಳು ತಪ್ಪಾಗಿದ್ದರೆ ಒಟ್ಟು ಅಂಕಗಳನ್ನು 95 ಎಂದು ನಿರ್ಧರಿಸಬೇಕು.

ವಿದ್ಯಾರ್ಥಿಗಳು ಆ ವಿಷಯದಲ್ಲಿ  65 ಅಂಕ ಗಳಿಸಿದ್ದರೆ ಅಂತಹವರಿಗೆ 5 ಕೃಪಾಂಕ ನೀಡಿ 100ಕ್ಕೆ 70 ಅಂಕ ನೀಡುವ ಬದಲು 95ಕ್ಕೆ 65  ಅಂಕ ನೀಡಿದರೆ ಒಳ್ಳೆಯದು. ಹೀಗಾದಾಗ ಆಯಾ ವರ್ಷದಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳ ಜೊತೆಗೆ ಪ್ರಶ್ನೆಪತ್ರಿಕೆಯನ್ನು ತಯಾರಿಸಿದ ಮಹಾನುಭಾವರ ತಪ್ಪುಗಳೂ ಇತಿಹಾಸದಲ್ಲಿ ದಾಖಲಾಗುತ್ತವೆ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT