ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾರ್ಯಕ್ಕೆ ಹಿನ್ನಡೆ: ರೈತರು ಕಂಗಾಲು

ಕುಂದಾಪುರ : ನಿಲ್ಲದ ಮಳೆ ಆರ್ಭಟ – ನೆರೆ ಭೀತಿ
Last Updated 30 ಜೂನ್ 2016, 11:22 IST
ಅಕ್ಷರ ಗಾತ್ರ

ಕುಂದಾಪುರ: 6 ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಮಳೆಗೆ  ತಾಲ್ಲೂ ಕಿನಾದ್ಯಾಂತ ಕೃಷಿಕ ವರ್ಗವು ಕಂಗಾಲಾಗಿದೆ. ಕೃಷಿ ಚಟುವಟಿಕೆ ಮೇಲೆ ವ್ಯತಿರಕ್ತವಾದ ಪರಿಣಾಮ ಉಂಟಾ ಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

ತಾಲ್ಲೂಕಿನಲ್ಲಿ ಹರಿಯುತ್ತಿರುವ ಸೌಪರ್ಣಿಕ ಹಾಗೂ ವರಾಹಿ ನದಿಗಳ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮಲೆನಾಡ ಮೇಲ್ಬಾಗದಲ್ಲಿನ ಘಟ್ಟ ಪ್ರದೇಶಗಳಲ್ಲಿ ಮಳೆಯಾದರೆ, ಇಲ್ಲಿನ ನೀರಿನ ಮಟ್ಟ  ಏರುವುದರಿಂದ ಈ ನದಿಗಳ ಆಸುಪಾಸಿ ಪ್ರದೇಶಗಳಲ್ಲಿ ನೆರೆ ಬರುವ ಭೀತಿ ಸ್ಥಳೀಯರಲ್ಲಿ ಇದೆ.

ನಾಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಳ್ಳಿ, ಹಡವು, ಕೋಣ್ಕಿ, ಸೇನಾಪುರ ಗ್ರಾಮದ ಸೇನಾಪುರ, ಬಂಟ್ವಾಡಿ, ಕುಂಬಾರಮಕ್ಕಿ, ಹೊಸಾಡು ಗ್ರಾಮ ಪಂಚಾಯಿತಿಯ ಹೊಸಾಡು, ಮುವತ್ತುಮುಡಿ, ಮುಳ್ಳಿಕಟ್ಟೆ ಮುಂತಾದ ಪ್ರದೇಶಗಳಲ್ಲಿನ ಕೃಷಿ ಗದ್ದೆಗಳಲ್ಲಿ ನೀರು ಸಂಗ್ರಹವಾಗಿದ್ದು, ಕೃಷಿ ಕಾರ್ಯಗಳನ್ನು ಮಾಡದೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೃಷಿ ಗದ್ದೆಗಳ ಅಕ್ಕ–ಪಕ್ಕದಲ್ಲಿ ಇರುವ ತೋಡು ಗಳಲ್ಲಿ ನೀರು ಭಾರಿ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ. ಬಂಟ್ವಾಡಿಯಲ್ಲಿನ ಉಪ್ಪು ನೀರಿನ ತಡೆಗೋಡೆಯ ಮಟ್ಟದ ವರೆಗೂ ನೀರು ಸಂಗ್ರಹವಾಗುತ್ತಿದ್ದು, ಮಳೆರಾಯನ ರೌದ್ರವತಾರ ಹೆಚ್ಚಿದ್ದಲ್ಲಿ ಅಕ್ಕ–ಪಕ್ಕದ ಕೃಷಿ ಗದ್ದೆಗಳಿಗೆ ಉಪ್ಪು ನೀರಿನ ಹರಿವು ಆಗುವ ಸಾಧ್ಯತೆಗಳಿವೆ.

ಕುಂಭ ದ್ರೋಣ ಮಳೆ ಸುರಿಯು ತ್ತಿರುವ ಮಳೆಯಿಂದಾಗಿ ತಾಲ್ಲೂಕಿನಾ ದ್ಯಾಂತ ಜನಜೀವನ ಅಸ್ತವ್ಯಸ್ತವಾಗಿದೆ. ವಿದ್ಯುತ್‌ ಹಾಗೂ ದೂರವಾಣಿ ಸಂಪರ್ಕ ಗಳು ಕಣ್ಣು ಮುಚ್ಚಾಲೆ ಆಡುತ್ತಿರುವು ದರಿಂದಾಗಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾದ ವಿದ್ಯಾರ್ಥಿಗಳು ಪರ ದಾಟ ಶುರುವಾಗಿದೆ. ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಮಳೆರಾಯನ ರಗಳೆಯಿಂದಾಗಿ ಒದ್ದೆ ಬಟ್ಟೆಯಲ್ಲಿಯೇ ಶಾಲೆಯಲ್ಲಿ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಇದೆ.

ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಶೀತ ಭಾದೆ, ಜ್ವರ ಮುಂತಾದ ಮಳೆ ರಾಯನ ಕೊಡುಗೆಗಳು ಈಗಾಗಲೆ ತಲುಪಿದೆ. ಮಳೆಯೊಂದಿಗೆ ಗಾಳಿಯೂ ಬೀಸುತ್ತಿರುವುದರಿಂದಾಗಿ ಅಲ್ಲಲ್ಲಿ ಗಿಡ ಮರಗಳು ಧರಶಾಹಿಗಳಾ ಗುತ್ತಿರುವುದ ರಿಂದ ಸುಗಮ ಸಂಚಾರಕ್ಕೂ ತಡೆಯುಂಟಾಗುತ್ತಿದೆ.

ಕೊಲ್ಲೂರು ಸಮೀಪದ ಜಡ್ಕಲ್‌ನ ಬೋಗಿ ಹಾಡಿ ಸಮೀಪದ ಮಂಗಳವಾರ ಸಂಜೆ ಭಾರಿ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಸಂಚಾರಕ್ಕೆ ತೊಡ ಕುಂಟಾಗಿತ್ತು. ಕೊಲ್ಲೂರು ಪೊಲೀಸರ ಸಕಾಲಿಕ ಕ್ರಮದಿಂದಾಗಿ ರಾತ್ರಿಯೇ ಮರವನ್ನು ತೆರವುಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT