ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಕೇರಮ್ಮ ಜಾತ್ರೆ ಸಂಭ್ರಮ

Last Updated 18 ಏಪ್ರಿಲ್ 2015, 11:36 IST
ಅಕ್ಷರ ಗಾತ್ರ

ಕನಕಪುರ: ನಗರದ ದೊಡ್ಡಿ ಬೀದಿಯಲ್ಲಿ ನೆಲೆಸಿರುವ ಧಾರ್ಮಿಕ ಪ್ರಸಿದ್ಧ ಶಕ್ತಿದೇವತೆ ಕೆಂಕೇರಮ್ಮ ದೇವಿಯ ಜಾತ್ರಾ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ಕೆಂಕೇರಮ್ಮ ಕೊಂಡೋತ್ಸವವು ಬುಧವಾರ ನಡೆದಿದ್ದು, ಅದರ ಜಾತ್ರಾ ಮಹೋತ್ಸವ ಮತ್ತು ಸಿಡಿ ಉತ್ಸವ ಶುಕ್ರವಾರ ನಡೆಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ 5 ಗಂಟೆಯಿಂದ ದೇವಿಯ ಮೆರವಣಿಯು ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಭಕ್ತರು ತಮ್ಮ ಮನೆ ಮುಂದೆ ಬಂದ ಮೆರವಣಿಗೆಗೆ ಪೂಜೆ ನೆರವೇರಿಸಿ ಭಕ್ತಿ ಸಮರ್ಪಣೆ ಮಾಡಿದರು.

ಸಿಡಿ ಉತ್ಸವ ನಡೆಸುವುದನ್ನು ದೇವಸ್ಥಾನ ಸಮಿತಿಯವರು ಹರಾಜು ಮಾಡಿದರು. ₹15 ಸಾವಿರಗಳನ್ನು ನೀಡಿ ಸಿಡಿ ಆಡಿಸುವುದನ್ನು ಹರಾಜು ಪಡೆದವರು ಮಧ್ಯಾಹ್ನದಿಂದ ಸಂಜೆವರೆಗೂ ಸಿಡಿಯಾಡಿಸಿದರು. ಭಕ್ತರು ಸಿಡಿಯ ತೊಟ್ಟಿಲಿನಲ್ಲಿ ಕುಳಿತು ಸಿಡಿಯಾಡುವ ಮೂಲಕ ದೇವರ ಹರಕೆಯನ್ನು ಸಮರ್ಪಿಸಿದರು.

ಜಾತ್ರಾ ಮಹೋತ್ಸವದ ಅಂಗವಾಗಿ ಅಂಗಡಿ ಮುಂಗಟ್ಟುಗಳನ್ನು ದೇವಾಲಯದ ಆವರಣದಲ್ಲಿ ಜೋಡಿಸಲಾಗಿತ್ತು. ಜಾತ್ರೆಗೆ ಬಂದವರು ತಮಗೆ ಬೇಕಾದ ವಸ್ತು ಕೊಳ್ಳುವ ಮೂಲಕ ಸಂತೋಷ ಅನುಭವಿಸುತ್ತಿದ್ದರು. ಭಕ್ತರು ಮತ್ತು ಸಾರ್ವಜನಿಕರಿಗಾಗಿ ಶುಕ್ರವಾರ ಸಂಜೆ ಸಂಗೀತ ರಜಮಂಜರಿ ಕಾರ್ಯಕ್ರಮವು ನಡೆಯಿತು. ದೇವಸ್ಥಾನ ಸಮಿತಿಯವರು ಮತ್ತು ಗ್ರಾಮದ ಮುಖಂಡರುಗಳು ನೇತೃತ್ವವಹಿಸಿ ಜಾತ್ರಾ ಮಹೋತ್ಸವ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT