ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಸಿಎ ಇಲೆವೆನ್‌ಗೆ ಇನಿಂಗ್ಸ್‌ ಜಯ

ಕ್ರಿಕೆಟ್‌: ಮಿಂಚಿದ ರೋನಿತ್‌ ಮೋರೆ, ಅಮಿತ್‌ ವರ್ಮ
Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಮಿತ್‌ ವರ್ಮ ಮತ್ತು ರೋನಿತ್‌ ಮೋರೆ ಅವರ ಪ್ರಭಾವಿ ಬೌಲಿಂಗ್‌ ನೆರವಿನಿಂದ ಕೆಎಸ್‌ಸಿಎ ಇಲೆವೆನ್‌ ತಂಡ ಇಲ್ಲಿ ನಡೆಯುತ್ತಿರುವ ಡಾ. ಕೆ. ತಿಮ್ಮಪ್ಪಯ್ಯ ಸ್ಮಾರಕ ಅಖಿಲ ಭಾರತ ಆಹ್ವಾನಿತ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ  ತ್ರಿಪುರಾ ಕ್ರಿಕೆಟ್‌ ಸಂಸ್ಥೆ ವಿರುದ್ಧ ಇನಿಂಗ್ಸ್‌ ಹಾಗೂ 152 ರನ್‌ಗಳ ಭರ್ಜರಿ ಜಯ ಸಾಧಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನಾಲ್ಕು ದಿನಗಳ ಪಂದ್ಯದ ಅಂತಿಮ ದಿನವಾದ ಬುಧವಾರ ತ್ರಿಪುರ ತಂಡ ತನ್ನ ಎರಡನೇ ಇನಿಂಗ್ಸ್‌ನಲ್ಲಿ 58.3 ಓವರ್‌ಗಳಲ್ಲಿ 143 ರನ್‌ಗಳಿಗೆ ಅಲೌಟಾಯಿತು. ವೇಗದ ಬೌಲರ್‌ ಮೋರೆ 28 ರನ್‌ಗಳಿಗೆ ಮೂರು ವಿಕೆಟ್‌ ಪಡೆದರೆ, ಅಮಿತ್‌ 50 ರನ್‌ ನೀಡಿ 4ವಿಕೆಟ್‌ ತಮ್ಮದಾಗಿಸಿಕೊಂಡರು.

ಕೆಎಸ್‌ಸಿಎ ಇಲೆವೆನ್‌ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 606 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ತ್ರಿಪುರ ಮೊದಲ ಇನಿಂಗ್ಸ್‌ನಲ್ಲಿ 311 ರನ್‌ಗಳಿಗೆ ಆಲೌಟಾಗಿ 295 ರನ್‌ಗಳ ಹಿನ್ನಡೆ ಅನುಭವಿಸಿತ್ತು.

ಆಲೂರು ಕ್ರೀಡಾಂಗಣದಲ್ಲಿ ಕೊನೆಗೊಂಡ ಮತ್ತೊಂದು ಪಂದ್ಯದಲ್ಲಿ ಕೆಎಸ್‌ಸಿಎ ಕೋಲ್ಟ್ಸ್‌ ತಂಡ ಡಾ. ಡಿ.ವೈ. ಪಾಟೀಲ್‌ ಅಕಾಡೆಮಿ ಜೊತೆ ಡ್ರಾ ಸಾಧಿಸಿತು. ಮೊದಲ ಇನಿಂಗ್ಸ್‌ 151 ರನ್‌ ಗಳಿಸಿದ್ದ ಕೋಲ್ಟ್ಸ್‌ ತಂಡದ ಶಿಶಿರ್‌ ಭವಾನೆ ಎರಡನೇ ಇನಿಂಗ್ಸ್‌ನಲ್ಲಿ ಅಜೇಯ 213 ರನ್‌ ಗಳಿಸಿ ಮಿಂಚಿದರು.

ಸಂಕ್ಷಿಪ್ತ ಸ್ಕೋರ್‌: (ಚಿನ್ನಸ್ವಾಮಿ ಕ್ರೀಡಾಂಗಣ) ಕೆಎಸ್‌ಸಿಎ ಇಲೆವೆನ್‌: 142.3 ಓವರ್‌ಗಳಲ್ಲಿ 7 ವಿಕೆಟ್‌ಗೆ 606 ಡಿಕ್ಲೇರ್ಡ್‌. ತ್ರಿಪುರ ಕ್ರಿಕೆಟ್‌ ಸಂಸ್ಥೆ: 80 ಓವರ್‌ಗಳಲ್ಲಿ 311 ಮತ್ತು 58.3 ಓವರ್‌ಗಳಲ್ಲಿ 143 (ನಿರುಪಮ್‌ ಸೇನ್‌ ಔಟಾಗದೆ 46, ರೋನಿತ್‌ ಮೋರೆ 28ಕ್ಕೆ 3, ಅಮಿತ್‌ ವರ್ಮಾ 50ಕ್ಕೆ 4)

ಫಲಿತಾಂಶ: ಕೆಎಸ್‌ಸಿಎ ಇಲೆವೆನ್‌ಗೆ ಇನಿಂಗ್ಸ್‌ ಹಾಗೂ 152 ರನ್‌ ಗೆಲುವು

(ಆಲೂರು ಕ್ರೀಡಾಂಗಣ–2) ಕೆಎಸ್‌ಸಿಎ ಕೋಲ್ಟ್ಸ್‌: 117.3 ಓವರ್‌ಗಳಲ್ಲಿ 384 ಮತ್ತು 98 ಓವರ್‌ಗಳಲ್ಲಿ 2 ವಿಕೆಟ್‌ಗೆ 421 ಡಿಕ್ಲೇರ್ಡ್‌ (ಶಿಶಿರ್‌ ಭವಾನೆ ಔಟಾಗದೆ 213, ಅಭಿಷೇಕ್‌ ರೆಡ್ಡಿ 160). ಡಾ. ಡಿ.ವೈ. ಪಾಟೀಲ್‌ ಅಕಾಡೆಮಿ: 117.5 ಓವರ್‌ಗಳಲ್ಲಿ 367

ಫಲಿತಾಂಶ: ಪಂದ್ಯ ಡ್ರಾ

(ಬಿಜಿಎಸ್‌ ಕ್ರೀಡಾಂಗಣ) ಆಂಧ್ರ ಕ್ರಿಕೆಟ್‌ ಸಂಸ್ಥೆ: 116 ಓವರ್‌ಗಳಲ್ಲಿ 286 ಮತ್ತು 97 ಓವರ್‌ಗಳಲ್ಲಿ 9 ವಿಕೆಟ್‌ಗೆ 296 ಡಿಕ್ಲೇರ್ಡ್‌ (ಡಿ. ಹರ್ಷವರ್ಧನ ನಾಯ್ಡು 82, ಹರೀಶ್‌ ಔಟಾಗದೆ 50, ಶೋಯಬ್‌ 40ಕ್ಕೆ 3) ಬರೋಡ ಕ್ರಿಕೆಟ್‌ ಸಂಸ್ಥೆ: 122 ಓವರ್‌ಗಳಲ್ಲಿ 433

ಫಲಿತಾಂಶ: ಪಂದ್ಯ ಡ್ರಾ

(ಆಲೂರು ಕ್ರೀಡಾಂಗಣ–1) ಗೋವಾ ಕ್ರಿಕೆಟ್‌ ಸಂಸ್ಥೆ: 272 ಮತ್ತು 100.4 ಓವರ್‌ಗಳಲ್ಲಿ 9 ವಿಕೆಟ್‌ಗೆ 262. ಬಂಗಾಳ ಕ್ರಿಕೆಟ್‌ ಸಂಸ್ಥೆ: 420 ಮತ್ತು 30.2 ಓವರ್‌ಗಳಲ್ಲಿ 3 ವಿಕೆಟ್‌ಗೆ 115 (ರೋಹನ್‌ ಬ್ಯಾನರ್ಜಿ 52, ನವೀದ್‌ ಅಹ್ಮದ್‌ 40)

ಫಲಿತಾಂಶ: ಬಂಗಾಳ ಕ್ರಿಕೆಟ್‌ ಸಂಸ್ಥೆಗೆ 7 ವಿಕೆಟ್‌ ಗೆಲುವು

(ಅಲೂರು ಕ್ರೀಡಾಂಗಣ–3) ಹರಿಯಾಣ ಕ್ರಿಕೆಟ್‌ ಸಂಸ್ಥೆ: 483 ಮತ್ತು 43 ಓವರ್‌ಗಳಲ್ಲಿ 7 ವಿಕೆಟ್‌ಗೆ 250 ಡಿಕ್ಲೇರ್ಡ್‌ (ಅಭಿಮನ್ಯು ಖೋಡ್‌ ಔಟಾಗದೆ 104, ಸನ್ನಿ ಸಿಂಗ್‌ 112, ಬಸಂತ್‌ ಮೊಹಂತಿ 55ಕ್ಕೆ 4) ಒಡಿಶಾ: 484 ಮತ್ತು 44 ಓವರ್‌ಗಳಲ್ಲಿ 113 (ಗೋವಿಂದ್‌ ಪೊದ್ದರ್‌ 44, ಯಜುವೇಂದ್ರ ಚಾಹಲ್‌ 54ಕ್ಕೆ 3, ರಾಹುಲ್‌ ತೆವಾಟಿಯ 26ಕ್ಕೆ 4)

ಫಲಿತಾಂಶ: ಹರಿಯಾಣ ಕ್ರಿಕೆಟ್‌ ಸಂಸ್ಥೆಗೆ 136 ರನ್‌ ಗೆಲುವು

(ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣ, ಮೈಸೂರು)  ಕೇರಳ ಕ್ರಿಕೆಟ್‌ ಸಂಸ್ಥೆ: 139 ಮತ್ತು 310 (ಜಾಫರ್‌ ಜಮಾಲ್‌ 47, ವೀರ್‌ ಪ್ರತಾಪ್‌ ಸಿಂಗ್‌ 76ಕ್ಕೆ 4, ದೀಪಕ್‌ ಚಾಹರ್‌ 79ಕ್ಕೆ 5) ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ: 7 ವಿಕೆಟ್‌ಗೆ 455 ಡಿಕ್ಲೇರ್ಡ್‌

ಫಲಿತಾಂಶ: ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಗೆ ಇನಿಂಗ್ಸ್‌ ಮತ್ತು 6 ರನ್‌ ಜಯ

(ಎಸ್‌ಜೆಸಿಇ ಕ್ರೀಡಾಂಗಣ) ಮುಂಬೈ ಕ್ರಿಕೆಟ್‌ ಸಂಸ್ಥೆ: 224 ಮತ್ತು 86 ಓವರ್‌ಗಳಲ್ಲಿ 8 ವಿಕೆಟ್‌ಗೆ 354 ಡಿಕ್ಲೇರ್ಡ್‌. ಅಸ್ಸಾಂ ಕ್ರಿಕೆಟ್‌ ಸಂಸ್ಥೆ: 246 ಮತ್ತು 19.4 ಓವರ್‌ಗಳಲ್ಲಿ 1 ವಿಕೆಟ್‌ಗೆ 47

ಫಲಿತಾಂಶ: ಪಂದ್ಯ ಡ್ರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT