ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ: ಪ್ರಾಮಾಣಿಕ ಪ್ರಯತ್ನ ಅಗತ್ಯ

ಅಕ್ಷರ ಗಾತ್ರ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷರು ಹಾಗೂ ಸದಸ್ಯರ ಸ್ಥಾನ ಭರ್ತಿ ಮಾಡುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಈ ಸದಸ್ಯರ ನೇಮಕ ಮಾಡುವ ಮುನ್ನ ಮುಖ್ಯಮಂತ್ರಿಗಳು ಆಯೋಗದ ಅಧ್ಯಕ್ಷರು, ಸದಸ್ಯ­ರಾಗಲು ತೀವ್ರವಾದ ಲಾಬಿ ನಡೆಸುತ್ತಿರುವವರ ಪೂರ್ವಾಪರ, ದಕ್ಷತೆ, ಪ್ರಾಮಾಣಿಕತೆ, ಜನಸೇವೆಯ ಅಪೇಕ್ಷೆ ಹೀಗೆ ಹಲವು ಮಜಲು­ಗಳನ್ನು ಪರಾಮರ್ಶಿಸಿ ಯೋಗ್ಯರ ಆಯ್ಕೆ ಮಾಡಬೇಕು.

ಸರ್ಕಾರ ಯಾರ ಮರ್ಜಿಗೂ ಬಗ್ಗಬಾರದು. ಕೆಪಿಎಸ್‌ಸಿ ಈಗಾಗಲೇ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ತಾಳಿಭಾಗ್ಯ­ದಂತಹ ಹಲವು ಅವ್ಯವಹಾರಗಳಿಂದ ನಲುಗಿ ಹೋಗಿದೆ. ಹೀಗೆ ನಲುಗಿ ಹೋಗಿರುವ ಕೆಪಿಎಸ್‌ಸಿಗೆ ಮುಖ್ಯ­ಮಂತ್ರಿಗಳು ಸಣ್ಣ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಕೆಪಿಎಸ್‌ಸಿ ಶುದ್ಧೀಕರಣಕ್ಕಾಗಿ ಮುಂದೆಯೂ ಹಲವು ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಾರೆಂಬ ನಂಬಿಕೆ ಇದೆ.  ಸದಸ್ಯರ ನೇಮಕಾತಿ­­ಯಲ್ಲಿ ಪಾರದರ್ಶಕತೆ ಕಾಪಾಡಿ  ಹಳಿ­ತಪ್ಪಿರುವ ಈ ಸಂಸ್ಥೆಯನ್ನು ಸರಿ­ದಾರಿಗೆ ತರ­ಬೇಕು. ಈ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT