ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಮ್ಮಿಗಿದೆ ಮನೆ ಔಷಧಿ

Last Updated 19 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

*ಉಗುರು ಬಿಸಿ ಹಾಲಿಗೆ ಚಿಟಿಕೆ ಅರಿಶಿನ ಬೆರೆಸಿ ಕುಡಿಯಿರಿ

*ಹಸಿಶುಂಠಿಯನ್ನು ತುರಿದು, ಕಾಟನ್‌ ಬಟ್ಟೆಯಲ್ಲಿ ರಸ ಹಿಂಡಿಕೊಳ್ಳಿರಿ. ಅದನ್ನು ಜೇನಿನೊಂದಿಗೆ ಬೆರೆಸಿ, ಸೇವಿಸಿದರೆ ಗಂಟಲು ನೋವು, ಕೆಮ್ಮು  ಎರಡೂ ನಿವಾರಣೆಯಾಗುತ್ತದೆ.

*ಒಣ ಶುಂಠಿಪುಡಿಯನ್ನು ಮನೆಯಲ್ಲಿ ಮಾಡಿಟ್ಟುಕೊಂಡಿರಬೇಕು. ಪ್ರತಿಸಲವೂ ಚಹ ಅಥವಾ ಹಾಲಿನಲ್ಲಿ ಹಾಕಿ ಕುದಿಸಿ ಕುಡಿದರೆ ಚಳಿಗಾಲದ ಕೆಮ್ಮನ್ನು ನಿಯಂತ್ರಿಸಬಹುದು.

*ಹುರಿಗಡಲೆ ಹುರಿದು ತಿಂದರೆ ಕಫ ಕರಗುವುದು. ಮೂರು ದಿನಗಳಿಗಿಂತಲೂ ಹೆಚ್ಚು ಅವಧಿಗೆ ಕೆಮ್ಮು ಕಾಡಿದರೆ ವೈದ್ಯರನ್ನು ಭೇಟಿ ಮಾಡಿ. 

ಬಲು ಉಪಯುಕ್ತ ಬೆಳ್ಳುಳ್ಳಿ
*ಬೆಳ್ಳುಳ್ಳಿಯನ್ನು ಒಲೆಯ ಮೇಲಿಟ್ಟು ಸಿಪ್ಪೆಯೊಂದಿಗೆ ಸುಡಬೇಕು. ನಂತರ ಬೆಳ್ಳುಳ್ಳಿಯನ್ನು ಬೆಲ್ಲದೊಂದಿಗೆ ತಿನ್ನಬೇಕು. 

ಬಾಣಂತಿಯರಿಗೆ ನೀಡುವ ಊಟದಲ್ಲಿ ಹೇರಳವಾಗಿ ಬೆಳ್ಳುಳ್ಳಿಯನ್ನು ಬಳಸಬೇಕು, ಎದೆಹಾಲು ಹೆಚ್ಚುತ್ತದೆ. ಮಗುವಿಗೆ ಶೀತವೂ ಆಗದು. ಗರ್ಭಾವಸ್ಥೆಯ ಕೊಬ್ಬು ಸಹ ಕರಗುತ್ತದೆ.

ರಕ್ತದ ಏರೊತ್ತಡ ಇದ್ದವರು, ಹೃದ್ರೋಗಿಗಳು, ರಕ್ತದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಿದ್ದಲ್ಲಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದೆಸಳು ಬೆಳ್ಳುಳ್ಳಿ ಸೇವಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT