ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರಿಮತ್ತಿಹಳ್ಳಿ: ಖಾಲಿ ಹುದ್ದೆ, ಸೌಲಭ್ಯ ಕೊರತೆ

ಕೆರಿಮತ್ತಿಹಳ್ಳಿ ಸ್ನಾತಕೋತ್ತರ ಕೇಂದ್ರ: ಮೂಲ ಸೌಕರ್ಯವೂ ದೂರ
Last Updated 28 ನವೆಂಬರ್ 2014, 6:25 IST
ಅಕ್ಷರ ಗಾತ್ರ

ಹಾವೇರಿ: ಹಲವು ಸೌಲಭ್ಯಗಳ ಕೊರತೆ ಮತ್ತು ನಿರ್ಲಕ್ಷ್ಯದಿಂದ ಜಿಲ್ಲೆ ಬಳಲು ತ್ತಿದೆ. ಶೈಕ್ಷಣಿಕ ವಾತಾವರಣವೂ ಭಿನ್ನ ವಾಗಿಲ್ಲ. ಇದಕ್ಕೆ ಕೆರಿಮತ್ತಿಹಳ್ಳಿಯ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತ ಕೋತ್ತರ ಕೇಂದ್ರವೇ ನಿದರ್ಶನ.

29 ಸೆಪ್ಟೆಂಬರ್ 2008ರಲ್ಲಿ    ಆರಂಭಗೊಂಡ ಕೇಂದ್ರವು ಆರು ವರ್ಷಗಳ ಬಳಿಕವೂ ಪರಿಪೂರ್ಣ ಗೊಂಡಿಲ್ಲ. ಇಲ್ಲಿ ಖಾಲಿ ಹುದ್ದೆಗಳದ್ದೇ ಕಾರುಬಾರು. 

ಪ್ರಾಧ್ಯಾಪಕರು: ಕನ್ನಡ, ಇಂಗ್ಲಿಷ್‌, ಸಮಾಜಶಾಸ್ತ್ರ, ವಾಣಿಜ್ಯ, ಸಮಾಜ ಕಾರ್ಯ ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸೇರಿದಂತೆ ಆರು ವಿಭಾಗಗಳಿವೆ. ಒಟ್ಟು 370 ವಿದ್ಯಾರ್ಥಿ ಗಳಿದ್ದಾರೆ.

ಆದರೆ 38 ಬೋಧಕ ಹುದ್ದೆ ಗಳಲ್ಲಿ ಕೇವಲ 7 (ಶೇ 18) ಮಾತ್ರ ಕಾಯಂ. ಉಳಿದಂತೆ 12 ಅತಿಥಿ ಉಪ ನ್ಯಾಸಕರು. ಆದರೂ ಶೇ 50 ಖಾಲಿ ಇವೆ. ಸಮಾಜಶಾಸ್ತ್ರದಲ್ಲಿ ಇಬ್ಬರೂ ಅತಿಥಿ ಉಪನ್ಯಾಸಕರು ಇದ್ದರೆ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಕಾಯಂ ಪ್ರಾಧ್ಯಾಪಕರೇ ಇಲ್ಲ. ಉಳಿದ ವಿಭಾಗ ಗಳಲ್ಲಿ ಶೇ 50 ಖಾಲಿ ಹುದ್ದೆಗಳಿವೆ.

ಮೂಲ ಸೌಕರ್ಯ: ಕೇಂದ್ರವು ನಗರ ದಿಂದ ಎಂಟು ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಬೆಳಿಗ್ಗೆ ಮಾತ್ರ ಬಸ್‌್. ಉಳಿದ ಸಮಯದಲ್ಲಿ ಹೊಸಳ್ಳಿಗೆ ಮೂರು ಕಿ.ಮೀ ನಡೆದುಕೊಂಡು ಬರಬೇಕು. ಅಲ್ಲಿಂದ ಹಾವೇರಿ ಬಸ್‌ ಹಿಡಿಯ ಬೇಕು. ಸಂಚಾರ ಸಮಸ್ಯೆ ವಿದ್ಯಾರ್ಥಿ ಗಳಿಗೆ ಮಾತ್ರವಲ್ಲ, ಬೋಧಕ ಹಾಗೂ ಬೋಧಕೇತರ ವರ್ಗವನ್ನೂ ಕಾಡುತ್ತಿದೆ. ಸಮಸ್ಯೆಗಳಿಂದ ಕೆಲವೊಮ್ಮೆ ತರಗತಿಗಳು ವಿಳಂಬವಾಗಿ ಅಥವಾ ಕೆಲವೊಮ್ಮೆ ನಡೆಯದ ನಿದರ್ಶನವೂ ಇದೆ ಎನ್ನುತ್ತಾರೆ ವಿದ್ಯಾರ್ಥಿಗಳು. 

ಕುಡಿಯುವ ನೀರಿನ ತೊಟ್ಟಿ ಇದೆ. ನೀರಿಲ್ಲ. ಸಂಸದ ಶಿವಕುಮಾರ ಉದಾಸಿ ಕುಡಿಯುವ ನೀರಿನ ಸೌಲಭ್ಯದ ಭರವಸೆ ನೀಡಿದ್ದಾರೆ. ಹೀಗಾಗಿ ನಿರೀಕ್ಷೆಯಲ್ಲಿ ದ್ದೇವೆ ಎನ್ನುತ್ತಾರೆ. ಕಂಪ್ಯೂಟರ್‌ಗಳಿವೆ. ಸುಸ್ಥಿಯಲ್ಲಿ ಇಲ್ಲ. ಝೆರಾಕ್ಸ್ ಯಂತ್ರ ಕೆಟ್ಟು ಹೋಗಿದೆ. ಒಂದು ಝೆರಾಕ್ಸ್‌ ಪ್ರತಿಗೂ 8 ಕಿ.ಮೀ ದೂರದ ಹಾವೇರಿಗೆ ಹೆಜ್ಜೆ ಹಾಕಬೇಕು.

ಪುರುಷರ ಶೌಚಾಲಯ ಹದ ಗೆಟ್ಟಿದ್ದು, ಶೌಚಕ್ಕೆ ಬಯಲೇ ಆಲಯ. ಪ್ರಾಧ್ಯಾಪಕರಿಗೂ ಅದೇ ಗತಿ!
ಕೊರತೆ: ಪ್ರತಿ ವಿಭಾಗಕ್ಕೊಂದು ಪ್ರಯೋಗಾಲಯ ಬೇಕು. ಫ್ಯಾನ್‌, ಕಪಾಟು, ಮೇಜು, ಪೀಠೋಪಕರಣ, ಕ್ಯಾಂಟೀನ್‌, ಸ್ಟೇಶನರಿ ಮತ್ತಿತರ ಸೌಲಭ್ಯಗಳು ಬೇಕಾಗಿವೆ. ಪ್ರವೇಶ ದ್ವಾರದಲ್ಲಿ ನಾಮಫಲಕ, ಉದ್ಯಾನ ಮತ್ತಿತರ ಸೌಲಭ್ಯಗಳೂ ಪೂರ್ಣ ಗೊಂಡಿಲ್ಲ. ಒಟ್ಟಾರೆ ಶೈಕ್ಷಣಿಕ ವಾತಾ ವರಣಕ್ಕೆ ಪೂರಕವಾದ ಸೌಕರ್ಯ ಗಳನ್ನು ಒದಗಿಸಬೇಕು ಎಂಬುದು ವಿದ್ಯಾರ್ಥಿಗಳ ಬೇಡಿಕೆ.

‘ಮೂಲಸೌಕರ್ಯಕ್ಕೆ ₨1.5 ಕೋಟಿ’
ಉನ್ನತ ಶಿಕ್ಷಣ ಸಚಿವ ಆರ್‌.ವಿ ದೇಶಪಾಂಡೆ ಅವರು ಮೂಲ ಸೌಕರ್ಯ ಅಭಿ ವೃದ್ಧಿಗೆ ₨1.50 ಕೋಟಿ  ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಬಸ್‌ ಸೌಲಭ್ಯಕ್ಕೆ ಸಾರಿಗೆ ಸಂಸ್ಥೆಗೆ 6 ಬಾರಿ ಪತ್ರ ಬರೆದು ವಿನಂತಿಸಲಾಗಿದೆ. ಮತ್ತೊಮ್ಮೆ ಖುದ್ದಾಗಿ ಮಾತನಾಡುತ್ತೇವೆ.
- ಡಾ. ಎಂ. ಚಂದ್ರಮ್ಮ, ಆಡಳಿತಾಧಿಕಾರಿ, ಕ.ವಿ.ವಿ ಸ್ನಾತಕೋತ್ತರ ಕೇಂದ್ರ


‘ಸಮಸ್ಯೆ ಸರಿಪಡಿಸಿ’
ನಮ್ಮಲ್ಲಿ ಹೆಚ್ಚಿನವರು ಬಡತನ, ಸಾಮಾನ್ಯ ವರ್ಗದಿಂದ ಬಂದವರು. ಡೊನೇಶನ್‌ ನೀಡಿ, ದೊಡ್ಡ ನಗರದಲ್ಲಿ ಶಿಕ್ಷಣ ಪಡೆಯುವುದು ಕಷ್ಟಸಾಧ್ಯ. ಆದರೆ, ಇಲ್ಲಿ ಮೂಲಸೌಕರ್ಯ ಮತ್ತು ಪ್ರಾಧ್ಯಾಪಕರ ಕೊರತೆ ಇದೆ. ಮೂಲ ಸೌಕರ್ಯ ಕಲ್ಪಿಸಿ, ಸುಸೂತ್ರವಾಗಿ ತರಗತಿ ನಡೆಯುವ ವ್ಯವಸ್ಥೆ ಮಾಡಬೇಕು.
- ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT