ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳಿಗೆ ನೀರು ಹರಿಸಲು ಕೋರಿಕೆ

Last Updated 16 ಮೇ 2015, 6:23 IST
ಅಕ್ಷರ ಗಾತ್ರ

ರಾಮನಗರ :  ಜಿಲ್ಲಾ ಕೇಂದ್ರದ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಹಾಗೂ ರಾಮನಗರ– ಚನ್ನಪಟ್ಟಣದ ಜನರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದೂ ಸೇರಿದಂತೆ ಹಲವು ಯೋಜನೆಗಳ ಕುರಿತ ಪ್ರಸ್ತಾವನೆಯನ್ನು ರಾಮನಗರ– ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರವು (ಆರ್‌ಸಿಯುಡಿಎ) ಮುಖ್ಯಮಂತ್ರಿಗೆ ಸಲ್ಲಿಸಿದೆ.

ಆರ್‌ಸಿಯುಡಿಎ ಅಧ್ಯಕ್ಷ ಶಾರದಾಗೌಡ ಅವರೇ ಗುರುವಾರ ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಪ್ರಾಧಿಕಾರದ ಯೋಜನೆಗಳಿಗೆ ಅಗತ್ಯ ಆರ್ಥಿಕ ನೆರವು ಹಾಗೂ ಉಳಿದ ಯೋಜನೆಗಳ ಕೈಗೆತ್ತಿಕೊಳ್ಳಲು ಅನುಮತಿ ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲಾ ಕೇಂದ್ರದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇರುವ ಕಾರಣ ನಗರದ ಸಮೀಪ ಇರುವ ರಂಗರಾಯರದೊಡ್ಡಿ ಕೆರೆ, ಬೋಳಪ್ಪನಹಳ್ಳಿ ಅಮಾನಿಕೆರೆ ಹಾಗೂ ಭಕ್ಷಿ ಕೆರೆಗಳಿಗೆ ಕಣ್ವ ಜಲಾಶಯದಿಂದ ನೀರು ಹರಿಸುವ ಯೋಜನೆ ಹಮ್ಮಿಕೊಳ್ಳಲು ಅವಕಾಶ ಒದಗಿಸಿಕೊಡಿ. ಈಗಾಗಲೇ ಚನ್ನಪಟ್ಟಣ ತಾಲ್ಲೂಕಿನಲ್ಲಿ ಏತ ನೀರಾವರಿ ಮೂಲಕ ಕೆರೆಗಳು ತುಂಬಿಸುತ್ತಿದ್ದು, ಶೀಘ್ರದಲ್ಲಿಯೇ ಕಣ್ವ ಜಲಾಶಯ ಸಹ ಭರ್ತಿಯಾಗಲಿದೆ. ಅಲ್ಲಿಂದ ರಾಮನಗರ ಜಿಲ್ಲಾ ಕೇಂದ್ರದ ಸಮೀಪವಿರುವ ಮೂರು ಕೆರೆಗಳಿಗೆ ನೀರು ತುಂಬಿಸಲು ಅವಕಾಶ ಇದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗದೆ.

ಪ್ರಾಧಿಕಾರ ರಾಮನಗರದಲ್ಲಿ ಕೈಗೊಂಡಿರುವ ಕಚೇರಿ ಮತ್ತು ವಾಣಿಜ್ಯ ಸಂಕೀರ್ಣ ಕಟ್ಟಡ, ಚನ್ನಪಟ್ಟಣದಲ್ಲಿ ಖಾಸಗಿ ಬಸ್‌ ನಿಲ್ದಾಣದ ಕಟ್ಟಡ ಹಾಗೂ ಬಹು ಮಹಡಿ ವಾಣಿಜ್ಯ ಸಂಕೀರ್ಣ ಕಟ್ಟಡ, ಪ್ರಾಧಿಕಾರದ ವಶದಲ್ಲಿಇರುವ ಮೂರು ವಸತಿ ಬಡಾವಣೆಗಳಲ್ಲಿ ಅವಶ್ಯಕವಿರುವ ವಿದ್ಯುದೀಕರಣ, ಒಳಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲು ಅಂದಾಜು ರೂ 50 ಕೋಟಿ ಅವಶ್ಯಕತೆ ಇದೆ. ಅಲ್ಲದೆ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅನುಮತಿ ಒದಗಿಸುವಂತೆ ಪ್ರಸ್ತಾವನೆಯಲ್ಲಿ ಕೋರಲಾಗಿದೆ.

ನೆರೆಯ ನೆಲಮಂಗಲ, ಆನೇಕಲ್‌, ಕನಕಪುರ, ಮಾಗಡಿ ಯೋಜನಾ ಪ್ರಾಧಿಕಾರಗಳು ಹಾಗೂ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರಗಳು ಆರ್ಥಿಕವಾಗಿ ಸದೃಢವಾಗಿವೆ. ಆದರೆ ಆರ್‌ಸಿಯುಡಿಎ ನಲ್ಲಿ ಈ ಹಿಂದೆ ನಿಶ್ಚಿತ ಠೇವಣಿ ಮೊತ್ತ ಸುಮಾರ ₨ 16.70 ಕೋಟಿ ಅಪವ್ಯಯವಾಗಿದ್ದು, ಸಿಬಿಐ ತನಿಖೆ ನಡೆಯುತ್ತಿದೆ.

ಆದ್ದರಿಂದ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ನೆರೆಯ ಯೋಜನಾ ಪ್ರಾಧಿಕಾರಗಳಿಂದ ರಾಮನಗರ–ಚನ್ನಪಟ್ಟಣ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ₨  44 ಕೋಟಿ ಆರ್ಥಿಕ ನೆರವು ಒದಗಿಸಿಕೊಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT