ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳ ಪೋಸ್ಟರ್‌ ಹಿಡಿದು ಪ್ರತಿಭಟನೆ

Last Updated 28 ಜುಲೈ 2014, 20:02 IST
ಅಕ್ಷರ ಗಾತ್ರ

ಬೆಂಗಳೂರು: ಕೆರೆಗಳ ಒತ್ತುವರಿ ಪ್ರಕರ­ಣ­­ಗಳನ್ನು  ಸಿಬಿಐಗೆ ವಹಿಸ­ಬೇಕೆಂದು ಆಗ್ರಹಿಸಿ ಜೆಡಿಎಸ್‌ ಸದಸ್ಯರು ವಿಧಾನ­ಸಭೆಯಲ್ಲಿ ಸೋಮವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದರು.

ಭೋಜನ ವಿರಾಮದ ನಂತರ ಸದನ ಸೇರಿದಾಗ ಜೆಡಿಎಸ್‌ ನಾಯಕ ಎಚ್‌.ಡಿ.­­ಕುಮಾರಸ್ವಾಮಿ ಮತ್ತು ಉಪ ನಾಯಕ ವೈ.ಎಸ್‌.ವಿ.ದತ್ತ ಅವರು,  ‘ಕೆರೆಗಳ ಒತ್ತುವರಿ ಪ್ರಕರಣವನ್ನು ಸಿಬಿಐಗೆ ವಹಿಸಿ. ವಿದ್ಯುತ್‌ ಖರೀದಿ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಸದನ ಸಮಿತಿ ರಚಿಸಿ’ ಎಂದರು.
ಜೆಡಿಎಸ್‌ ಶಾಸಕರು, ಒತ್ತುವರಿಗೆ ಒಳಗಾಗಿರುವ ಕೆರೆಗಳ ಪೋಸ್ಟರ್‌­ಗಳನ್ನು ಹಿಡಿದು ಗಮನ ಸೆಳೆದರು.

ಇನ್ನೊಂದೆಡೆ ಬಿಜೆಪಿ ಸದಸ್ಯರು ಅರ್ಕಾ­­ವತಿ ಬಡಾವಣೆಯ ಡಿನೋಟಿಫಿ­ಕೇಷನ್‌ ಪ್ರಕರಣವನ್ನು ಸಿಬಿಐಗೆ ವಹಿಸು­ವಂತೆ ಆಗ್ರಹಿಸಿ ಧರಣಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT