ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರಕ್ಕೆ ಸುಪ್ರೀಂ ನೋಟಿಸ್‌

Last Updated 1 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜಾಟರನ್ನು ಒಬಿಸಿ ವರ್ಗಕ್ಕೆ ಸೇರಿಸುವ ಅಧಿ­ಸೂಚನೆ ಪ್ರಶ್ನಿಸಿ ಸಲ್ಲಿಸಿರುವ ಎರಡು ಅರ್ಜಿಗಳಿಗೆ ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ.

‘ಸಾಮಾಜಿಕ ನ್ಯಾಯ ಹಾಗೂ ಸಬ­ಲೀ­­ಕರಣ ಸಚಿವಾಲಯಕ್ಕೆ ಈ ಸಂಬಂಧ ಸಂಪೂರ್ಣ ದಾಖಲೆ ಮತ್ತು ಕಡತಗಳನ್ನು ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ’ ಎಂದು ಮುಖ್ಯನ್ಯಾಯ­ಮೂರ್ತಿ ಪಿ.ಸದಾಶಿವಂ ಹಾಗೂ ನ್ಯಾಯ­­ಮೂರ್ತಿಗಳಾದ ರಂಜನ್‌  ಗೊಗೊಯ್‌ ಮತ್ತು ಎನ್‌.ವಿ.ರಮಣ ಅವರಿದ್ದ ಪೀಠ ಹೇಳಿದೆ.

‘ಅಧಿಸೂಚನೆಗೆ ತಡೆ ನೀಡಬೇಕೆಂದು ಈ ಮನವಿಗಳಲ್ಲಿ ಕೋರಲಾಗಿದೆ. ಇದೊಂದು ಗಂಭೀರ ವಿಷಯವಾ­ಗಿದ್ದು, ನಾವು ಅಟಾರ್ನಿ ಜನರಲ್‌ ಜಿ.ವಿ­.­­­­ವಾಹನ್ವತಿ ನೆರವು ಕೋರುತ್ತೇವೆ’ ಎಂದೂ ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT