ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರಿಯ ವಿದ್ಯಾಲಯಗಳಲ್ಲಿ ಸಂಸ್ಕೃತ ತೃತೀಯ ಭಾಷೆ

ಸುಪ್ರೀಂಕೋರ್ಟ್‌ ಮುಂದೆ ಕೇಂದ್ರ ಸರ್ಕಾರ ಹೇಳಿಕೆ
Last Updated 27 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್‌): ಕೇಂದ್ರೀಯ ವಿದ್ಯಾ­ಲ­ಯಗಳ ೬ರಿಂದ ೮ನೇ ತರಗತಿ ಪಠ್ಯದಲ್ಲಿ ಸಂಸ್ಕೃತವನ್ನು ತೃತೀಯ ಭಾಷೆಯಾಗಿ ಬೋಧಿಸುವ ತನ್ನ ನಿರ್ಧಾರ­ವನ್ನು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಎಚ್‌. ಎಲ್‌.­ದತ್ತು ಅವರಿದ್ದ ಪೀಠದ ಮುಂದೆ ಹಾಜರಾದ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ, ಕೇಂದ್ರೀಯ ವಿದ್ಯಾಲಯಗಳಲ್ಲಿ ಜರ್ಮನ್‌ ಭಾಷೆಗೆ ಬದಲು ಸಂಸ್ಕೃತ­ವನ್ನು ತೃತೀಯ ಭಾಷೆಯನ್ನಾಗಿ ಬೋಧಿ­­ಸುವ ನಿರ್ಧಾರದಿಂದ ಉಂಟಾದ ವಿವಾದದ ಕುರಿತು ಪ್ರಮಾಣಪತ್ರ ಸಲ್ಲಿಸುವುದಕ್ಕೆ ಅನುಮತಿ ಕೇಳಿದರು. ಇದಕ್ಕೆ ಅನುಮತಿ ನೀಡಿದ ಪೀಠವು ವಿಚಾರಣೆ­ಯನ್ನು ಶುಕ್ರವಾರಕ್ಕೆ ಮುಂದೂಡಿದೆ.

ಈ ವಿಷಯವಾಗಿ ಕೇಂದ್ರೀಯ ವಿದ್ಯಾಲಯ ವಿದ್ಯಾರ್ಥಿಗಳ ಪೋಷಕರ ತಂಡವೊಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತ್ವರಿತವಾಗಿ ವಿಚಾರಣೆಗೊಳಪಡಿಸಲು ನ. ೨೧ರಂದು ಕೋರ್ಟ್‌್ ಒಪ್ಪಿಕೊಂಡಿತ್ತು.  

ಸ್ಮೃತಿ ವಿರುದ್ಧ ಯುಜಿಸಿ ಸದಸ್ಯ ಅನ್ಸಾರಿ ಕಿಡಿ
ನವದೆಹಲಿ (ಪಿಟಿಐ):
ಕೇಂದ್ರೀಯ ವಿದ್ಯಾಲಯಗಳಲ್ಲಿ ಸಂಸ್ಕೃತ ಭಾಷೆಯನ್ನು ಕಡ್ಡಾಯಗೊಳಿಸಲು ಹೊರ­ಟಿರುವ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ವಿರುದ್ಧ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸದಸ್ಯ ಎಂ.ಎಂ. ಅನ್ಸಾರಿ ಗುರುವಾರ ಬಹಿರಂಗವಾಗಿ ಹರಿ ಹಾಯ್ದಿದ್ದಾರೆ.

ಇರಾನಿ ಕಾರ್ಯವೈಖರಿ­ಯನ್ನು ಕಟು­ವಾಗಿ ಟೀಕಿಸಿರುವ ಅನ್ಸಾರಿ ಅವರು ಮಾನವ ಸಂಪನ್ಮೂಲ ಖಾತೆ­­ ಜವಾ­ಬ್ದಾರಿಯನ್ನು ನಿಭಾಯಿ­ಸಲು ಇರಾನಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಶಿಕ್ಷಣಕ್ಕೆ ಸಂಬಂಧಿಸಿದಂತೆ ಇದುವರೆಗೂ  ಒಂದೇ ಒಂದು ಯೋಜನೆಯನ್ನೂ ಅವರು ಘೋಷಿಸಿಲ್ಲ. ತಾರತಮ್ಯದಿಂದ ಕೂಡಿದ ವಿದ್ಯಾರ್ಥಿ ವೇತನ ಹಾಗೂ ಹೊಸ ಸಂಸ್ಥೆಗಳ ಸ್ಥಾಪನೆ ಘೋಷಣೆ­ಯೊಂದನ್ನು ಬಿಟ್ಟು ಮತ್ತೇನನ್ನೂ ಮಾಡಲು ಅವರಿಗೆ ಸಾಧ್ಯವಾಗಿಲ್ಲ ಎಂದು ಅವರು ಹರಿಹಾಯ್ದಿದ್ದಾರೆ.

 ಒಟ್ಟಾರೆ ಸಚಿವೆಯ ಸಾಧನೆ ತೃಪ್ತಿಕರ­ವಾಗಿಲ್ಲ ಎಂದಿರುವ ಅನ್ಸಾರಿ, ತಮ್ಮ ಬಹಿ­ರಂಗ ಟೀಕೆಯ ಪರಿಣಾಮ ಎದುರಿಸಲು ಸಿದ್ಧ ಎಂದು ಸವಾಲು ಹಾಕಿದ್ದಾರೆ. ಅನ್ಸಾರಿ ಕಟುವಾದ ಟೀಕೆಗೆ ಪ್ರತಿಕ್ರಿಯಿ­ಸಲು ಸಚಿವಾಲಯ ನಿರಾಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT