ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸಚಿವ ನಖ್ವಿ ಶಿಕ್ಷೆಗೆ ತಡೆ

Last Updated 29 ಜನವರಿ 2015, 19:30 IST
ಅಕ್ಷರ ಗಾತ್ರ

ರಾಂಪುರ (ಉತ್ತರಪ್ರದೇಶ),(ಪಿಟಿಐ): 2009ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ನಿಷೇಧಾಜ್ಞೆಗಳನ್ನು ಉಲ್ಲಂಘಿ­ಸಿದ್ದ ಪ್ರಕರಣದಲ್ಲಿ ಕೇಂದ್ರ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ಅವರಿಗೆ ಸ್ಥಳೀಯ ನ್ಯಾಯಾಲಯ ವಿಧಿಸಿದ್ದ ಒಂದು ವರ್ಷ ಜೈಲು ಶಿಕ್ಷೆಗೆ ಜಿಲ್ಲಾ ನ್ಯಾಯಾಲಯ ತಡೆ ನೀಡಿದೆ.

ನಖ್ವಿ ವಿರುದ್ಧ ಪೊಲೀಸರು ಜರುಗಿ­ಸಿರುವ ಕ್ರಮ ರಾಜಕೀಯ ಪ್ರೇರಿತ­ವಾ­ಗಿದೆ. ಅವರ ವಿರುದ್ಧದ ಆರೋಪಗಳಿಗೆ ಯಾವುದೇ ಪುರಾವೆಗಳು ಇಲ್ಲ ಎಂದು ನಖ್ವಿ ವಕೀಲರು ವಾದಿಸಿದರು. ನಂತರ­ಜಿಲ್ಲಾ ನ್ಯಾಯಾಧೀಶ ಪಿ.ಕೆ.­ಗೋಯಲ್‌್ ಅವರು ನಖ್ವಿ ಅವರಿಗೆ ಜಾಮೀನು ನೀಡಿದರು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ ೧೪೩ (ಅಕ್ರಮ­ವಾಗಿ ಗುಂಪು ಸೇರು­ವಿಕೆ), ೩೪೧ (ಅಕ್ರಮವಾಗಿ ಪ್ರತಿರೋಧ ಒಡ್ಡುವುದು), ೩೪೨ (ಅಕ್ರಮವಾಗಿ  ವಶದಲ್ಲಿ­ಟ್ಟು­ಕೊಳ್ಳು­ವುದು)   ಹಾಗೂ  ಅಪ­ರಾಧ ಕಾನೂನು ತಿದ್ದುಪಡಿ ಕಾಯ್ದೆ  ಸೆಕ್ಷನ್‌ ೭ ಮತ್ತು  ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ ೧೪೪ರ ಅಡಿಯಲ್ಲಿ ನಖ್ವಿ ಅವರು ತಪ್ಪಿ­ತಸ್ಥರು ಎಂದು ಸ್ಥಳೀಯ ನ್ಯಾಯಾಲಯ ಹೇಳಿತ್ತು.

  ಪೊಲೀಸರು ಹೇಳಿರುವಂತೆ ನಖ್ವಿ ಅವರಾಗಲೀ, ಪಕ್ಷದ ಇತರ ಕಾರ್ಯ­ಕರ್ತ­ರಾಗಲೀ ನಿಷೇಧಾಜ್ಞೆ ಉಲ್ಲಂಘಿ­ಸಿರಲಿಲ್ಲ. ರಾಂಪುರ ಬಿಜೆಪಿ ಅಧ್ಯಕ್ಷರನ್ನು ಬಂಧಿಸಿದ್ದನ್ನು ವಿರೋಧಿಸಿ ಅವರೆಲ್ಲಾ ಅಂದು ಶಾಂತಿಯುತ ಪ್ರತಿಭಟನೆ ಮಾಡಿದ್ದರು ಎಂದು ನಖ್ವಿ  ವಕೀಲರು ಕೋರ್ಟ್‌ಗೆ ತಿಳಿಸಿದರು. ಈ ಪ್ರಕರಣದಲ್ಲಿ ನಖ್ವಿ  ಸೇರಿದಂತೆ ೨೦೦ ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT