ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್‌ ದಿನದ ಚಿಕಿತ್ಸೆಗೆ ₹30 ಸಾವಿರ

Last Updated 6 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೆಮ್ಮು ಹಾಗೂ ಮಧುಮೇಹ ಸಮಸ್ಯೆಯಿಂದ ಬಳಲು­ತ್ತಿರುವ ದೆಹಲಿಯ ಮುಖ್ಯ­ಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಜಿಂದಾಲ್‌ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ನ್ಯಾಚುರೋಪತಿ  ಚಿಕಿತ್ಸೆ ಶುಕ್ರವಾರ ಆರಂಭವಾಗಿದೆ.

ಚಿಕಿತ್ಸೆಗೆ ದಿನವೊಂದಕ್ಕೆ₹ 30 ಸಾವಿರ ವೆಚ್ಚವಾಗಲಿದ್ದು, 10 ದಿನಕ್ಕೆ₹ 3 ಲಕ್ಷ ಭರಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ನಿತ್ಯದ ಚಿಕಿತ್ಸಾ ವೆಚ್ಚ₹ 19,500, ಸಹಾಯಕನ ಸೇವೆಗೆ₹ - 1 ಸಾವಿರ, ಫುಲ್ ಮಡ್‌ಬಾತ್ -₹ 700,  ಆಯಿಲ್ ಥೆರಪಿ -₹ 1ಸಾವಿರ, ಡೀಪ್ ಟಿಶ್ಯೂ ಥೆರಪಿ -₹ 1,500,  ಹಾಟ್ ಸ್ಟೋನ್ ಥೆರಪಿ -₹ 2,500,  ಸಾಲ್ಟ್ ಗ್ಲೋ ಥೆರಪಿ -₹ 2,500, ಕಾಲನ್ ಹೈಡ್ರೋ ಥೆರಪಿ -₹ 1,100,  ಯೋಗ (ನಿತ್ಯ) -₹ 700 ಆಗಲಿದೆ ಎಂದು ಅಂದಾಜಿಸಲಾಗಿದೆ.

‘ಕೇಜ್ರಿವಾಲ್‌ ಅವರಿಗೆ ಬೆಳಿಗ್ಗೆ 5.30 ರಿಂದ ಚಿಕಿತ್ಸೆ ಆರಂಭ ಮಾಡಲಾ­ಯಿತು. ಅವರು ಯೋಗ, ಧ್ಯಾನ, ಪ್ರಾಣಾಯಾಮ ಮಾಡಿದರು. ನಂತರ ಅವರಿಗೆ ಮಡ್‌ಬಾತ್, ಹಿಪ್‌ ಬಾತ್‌, ಹಾಟ್‌ ಸ್ಟೋನ್ ಮಸಾಜ್ ಸೇರಿದಂತೆ ವಿವಿಧ ಪ್ರಕೃತಿ ಚಿಕಿತ್ಸೆ ನೀಡಲಾಯಿತು. ರಾತ್ರಿ 8.30 ರವ­ರೆಗೂ ಅವರಿಗೆ ಚಿಕಿತ್ಸೆ ನೀಡ­ಲಾಯಿತು’ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಬಬೀನಾ ಹೇಳಿದರು.

‘ಕೆಮ್ಮಿನ ಸಮಸ್ಯೆಯಿಂದ ಬಳಲು­ತ್ತಿರುವುದರಿಂದ ಮೊದಲು ಆ ಸಮಸ್ಯೆಗೆ ಚಿಕಿತ್ಸೆ ನೀಡಲು ಆದ್ಯತೆ ನೀಡಲಾಗಿದೆ. ಕಫ ಮತ್ತು ಕೆಮ್ಮು ನಿಯಂತ್ರಣಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ. ಹಣ್ಣಿನ ರಸ, ಸೂಪು, ಬೇಯಿಸಿದ ತರಕಾರಿ­ಯನ್ನು ಆಹಾರವಾಗಿ ನೀಡಲಾಗಿದ್ದು, ಪ್ರತಿ ಎರಡು ಗಂಟೆಗೊಮ್ಮೆ ಹಾಗಲ­ಕಾಯಿ ರಸ, ಮೆಂತ್ಯೆಸೊಪ್ಪು ರಸ ಸೇರಿದಂತೆ ವಿವಿಧ ತರಕಾರಿಯ ರಸವನ್ನು ನೀಡಲಾ­ಗುತ್ತಿದೆ. ಇದು ಕಫ ಮತ್ತು ಕೆಮ್ಮಿನ ಸಮಸ್ಯೆ ಕಡಿಮೆ ಮಾಡಲು ಸಹ­ಕಾರಿ­ಯಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT