ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್‌ ನೆಚ್ಚಿನ ನಾಯಕ

ಪಾಕಿಸ್ತಾನದಲ್ಲೂ ಭಾರತದ ಚುನಾವಣೆ ಕಾವು
Last Updated 16 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಲಾಹೋರ್‌(ಐಎಎನ್‌ಎಸ್‌): ಈ ಸಲ ನರೇಂದ್ರ ಮೋದಿ ಗೆಲ್ಲುತ್ತಾರೆಯೇ? ಭಾರತ­ಕ್ಕೊಂದು ಸುಸ್ಥಿರ ಸರ್ಕಾರ ಸಿಗು­ತ್ತದೆಯೇ? ಅರವಿಂದ ಕೇಜ್ರಿವಾಲ್‌ ಅವರ ಭವಿಷ್ಯ ಏನಾಗಬಹುದು? ಕಾಂಗ್ರೆಸ್‌ ಕತೆ ಮುಗಿಯಿತೇ?ಇವೆಲ್ಲ ಯಾವುದೋ ವಾಹಿನಿಯ ಚುನಾ­­ವಣಾ ಕಾರ್ಯಕ್ರಮದಲ್ಲಿ ಮೂಡಿ­­­­­ಬಂದ ಪ್ರಶ್ನೆಗಳಲ್ಲ. ಬದಲಾಗಿ ಭಾರ­­ತದ ಲೋಕಸಭಾ ಚುನಾವಣೆಯ ಕುರಿ­ತಾಗಿ ನೆರೆದೇಶ ಪಾಕಿಸ್ತಾನದಲ್ಲಿ ವ್ಯಾಪ­ಕ­ವಾಗಿ ಚರ್ಚೆಯಲ್ಲಿರುವ ವಿಷಯಗಳು.

ಹೌದು. ಭಾರತದ ಲೋಕಸಭಾ ಚುನಾ­­­­ವಣೆಯ ಕಾವು ನೆರೆಯ ಪಾಕಿಸ್ತಾ­ನಕ್ಕೂ ತಲುಪಿದೆ. ಕಾಶ್ಮೀರ ಸಮಸ್ಯೆ ಒಳ­ಗೊಂಡಂತೆ ಭಾರತದ ಚುನಾವಣೆ ಕುರಿ­ತಾಗಿ ಅಲ್ಲಿ ಬಿಸಿಬಿಸಿ ಚರ್ಚೆ­ಗಳಾ­ಗುತ್ತಿವೆ.

ಹಲವು ಪಾಕಿಸ್ತಾನಿ ನಾಗರಿಕರಿಗೆ ಭಾರತ­ದಲ್ಲಿ ನೆಚ್ಚಿನ ರಾಜಕೀಯ ನಾಯ­ಕರೂ ಇದ್ದಾರೆ.ಆದರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಹೆಚ್ಚಿನ ಜನರು ಇಷ್ಟಪಡುವುದಿಲ್ಲ.ರಾಜಕಾರಣಿಯಾಗಿ ಬದಲಾಗಿರುವ ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್‌ ದೇಶದ ಗಡಿಯನ್ನೂ ಮೀರಿ ಪಾಕಿಸ್ತಾನದಲ್ಲಿ ಜನಪ್ರಿಯತೆ ಗಳಿಸಿ­ದ್ದಾರೆ. ಅನೇಕ ಪಾಕಿ­­ಸ್ತಾನಿಗಳಿಗೆ ಕೇಜ್ರಿ­­­ವಾಲ್‌ ನೆಚ್ಚಿನ ರಾಜ­ಕೀಯ ನಾಯಕ.

‘ಮುಖ್ಯಮಂತ್ರಿ­ಯಾದ ಅತ್ಯಂತ ಕಡಿಮೆ ಅವಧಿ­ಯಲ್ಲಿ ಅರವಿಂದ ಕೇಜ್ರಿ­­­ವಾಲ್‌ ಮಾಡಿದ ಸಾಧನೆ ಪ್ರಶಂಸ­ನಾ­ರ್ಹ­­ವಾ­ದದ್ದು. ಅವರು ಮತ್ತೆ ದೆಹಲಿ­ಯಲ್ಲಿ ಸರ್ಕಾರ ರಚಿಸುವುದನ್ನು ನೋಡಲು ನಾನು ಇಷ್ಟಪಡುತ್ತೇನೆ.’ ಎಂದು ಪಾಕಿಸ್ತಾನದ ಉದ್ಯಮಿ ಹರ್‌ದೀಪ್‌ ಖುಲ್ಲರ್‌ ತಮ್ಮ ಆಶಯ ವ್ಯಕ್ತಪಡಿಸುತ್ತಾರೆ.

40 ವರ್ಷದ ನಾವೇದ್‌ ಸಿದ್ದೀಖಿ ಅವರೂ ಕೇಜ್ರಿವಾಲ್‌ ಬಗ್ಗೆ ಒಲವು ವ್ಯಕ್ತ­ಪಡಿಸು­ತ್ತಾರೆ. ಕ್ರಿಕೆಟಿಗರಾಗಿದ್ದ ಇಮ್ರಾನ್‌ ಖಾನ್‌ ನಂತರ ರಾಜಕಾರಣಿಯಾಗಿ ಬದ­ಲಾಗಿ ಪಾಕಿಸ್ತಾನ ತೆಹ್ರೀಕ್‌ ಇ  ಇನ್ಸಾಫ್‌ ಪಕ್ಷ ಕಟ್ಟಿ ಹೊಸ ಅಲೆ ಎಬ್ಬಿಸಿದ್ದನ್ನು ನೆನೆಸಿಕೊಂಡು ‘ನಾವು ಕೇಜ್ರಿ­ವಾಲ್‌ ಅವ­ರ­ಲ್ಲಿಯೂ ಇಂಥದ್ದೇ ಕಿಡಿ­ಯನ್ನು ನೋಡಿ­ದ್ದೇವೆ. ತನ್ನ ಆದರ್ಶದ ಕಾರಣಕ್ಕಾಗಿ ಆಮ್‌ ಆದ್ಮಿ ಪಕ್ಷ ಗೆಲ್ಲಬೇಕು ಎಂದು ಬಯಸುತ್ತೇನೆ’ ಎನ್ನುತ್ತಾರೆ.

ವ್ಯಾಪಕವಾದ ಪ್ರಚಾರದ ಹೊರತಾ­ಗಿಯೂ ನರೇಂದ್ರ ಮೋದಿ ಪಾಕಿಸ್ತಾನಿ­ಗಳಿಗೆ ಸಮಸ್ಯಾತ್ಮಕ ವ್ಯಕ್ತಿಯಾಗಿಯೇ ಉಳಿದಿದ್ದಾರೆ.
ಯುವ ಉದ್ಯಮಿ ಮತ್ತು ಸಾರ್ವ­ಜನಿಕ ಸಂಪರ್ಕ ಸಲಹೆಗಾರ ನವಾಜು­ದ್ದೀನ್‌ ಖಾನ್‌ ಅವರ ಪ್ರಕಾರ ಮೋದಿ ಅವ­ರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿ ಬಿಜೆಪಿ ತಪ್ಪು ಮಾಡಿದೆ.

‘ಮೋದಿ ಅವರು 2002ರಲ್ಲಿ ನಡೆದ ಗುಜರಾತ್‌ ಗಲಭೆಯ ಕಳಂಕವನ್ನು ತೊಳೆ­ದು­ಕೊಳ್ಳಲು ಇನ್ನೂ ಕಷ್ಟಪಡುತ್ತಿ­ದ್ದಾರೆ. ಅಲ್ಲದೇ ಮುಸ್ಲಿಮರ ಕುರಿತಾದ ಅವರ ಧೋರಣೆ ಕೂಡ ಅಷ್ಟು ಸಮಂಜ­ಸ­ವಾಗಿಲ್ಲ’ ಎಂದು ಅವರು ಅಭಿಪ್ರಾಯ­ಪಡುತ್ತಾರೆ.

ಭಾರತ ಮತ್ತು ಪಾಕಿಸ್ತಾನದ ರಾಜ­ಕೀಯ ಪರಿಸ್ಥಿತಿಗಳ ನಡುವಣ ಸಾಮ್ಯತೆ­ಯತ್ತ ಗಮನಸೆಳೆಯುವ ಯುವ ಟ್ಯಾಕ್ಸಿ ಚಾಲಕ ಮೊಹ್ಸಿನ್‌ ರೆಹಮಾನ್‌, ‘ಭಾರತೀಯರು  ಸಾಮಾನ್ಯ­ವಾಗಿ ಬೇರೆಯ­ವರ ಮೇಲೆ ಗೂಬೆ ಕೂರಿಸಲು ಯತ್ನಿಸು­ತ್ತಾರೆ. ಪಾಕಿಸ್ತಾನದಲ್ಲಿಯೂ ಹೀಗೆಯೇ ಆಗುತ್ತಿದೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT