ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್‌ ಸರ್ವಾಧಿಕಾರಿ: ‌ ಭೂಷಣ್‌ ಕಿಡಿ

Last Updated 21 ಏಪ್ರಿಲ್ 2015, 15:48 IST
ಅಕ್ಷರ ಗಾತ್ರ

ನವದೆಹಲಿ: ಪಕ್ಷ ವಿರೋಧಿ ಚಟು ವಟಿಕೆ ಮತ್ತು ಅಶಿಸ್ತಿನ ಕಾರಣದಿಂದ ಆಮ್‌ ಆದ್ಮಿ ಪಾರ್ಟಿಯಿಂದ (ಎಎಪಿ)ಉಚ್ಚಾಟನೆಗೊಂಡಿರುವ ಭಿನ್ನಮತೀಯ ಮುಖಂಡ ಪ್ರಶಾಂತ್‌ ಭೂಷಣ್‌, ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಕಿಡಿ ಕಾರಿದ್ದಾರೆ.

‘ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿರುವ ನೀವು ನ್ಯಾಯದಿಂದ ಕಾರ್ಯ ನಿರ್ವಹಿಸಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿರುವ ಅವರು, ‘ಎಎಪಿ ಪಕ್ಷದ ಸದ್ಯದ ಸ್ಥಿತಿ ಸರ್ವಾಧಿಕಾರಿ ನಾಯಕನನ್ನು ಹೊಂದಿರುವ ಕಾಪ್‌ ಪಂಚಾಯತ್‌ಗೆ ಸಮ’ ಎಂದು ವ್ಯಂಗ್ಯವಾಡಿದ್ದಾರೆ.

ಭಿನ್ನಮತೀಯ ಮುಖಂಡರಾದ ಪ್ರಶಾಂತ್‌ ಭೂಷಣ್‌, ಯೋಗೇಂದ್ರ ಯಾದವ್‌ ಮತ್ತು ಇತರ ಇಬ್ಬರನ್ನು ಸೋಮವಾರ ರಾತ್ರಿ ಉಚ್ಚಾ ಟಿಸಲಾಗಿತ್ತು. ಎರಡು ದಿನಗಳ  ಹಿಂದೆ ಈ ಮುಖಂಡರಿಗೆ ಪಕ್ಷ ಷೋಕಾಸ್‌ ನೋಟಿಸ್‌ ನೀಡಿತ್ತು. ಆದರೆ, ತಮ್ಮನ್ನು ಉಚ್ಚಾಟಿಸುವ ಒಳಸಂಚು ತಿಂಗಳ ಹಿಂದೆಯೇ ಪ್ರಾರಂಭವಾಗಿತ್ತು ಎಂದು ಭೂಷಣ್‌ ಮಂಗಳವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

ಕೇಜ್ರಿವಾಲ್‌ ಒಬ್ಬ ಸರ್ವಾಧಿಕಾರಿ. ಪಕ್ಷದ ಸದಸ್ಯರು ಅವರ ಆಜ್ಞೆಗಳನ್ನು ಕುರುಡಾಗಿ ಪಾಲಿಸುತ್ತಿದ್ದಾರೆ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT