ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ಇಬ್ಬರಿಗೆ ಇಂದು ಸಂತ ಪದವಿ

Last Updated 22 ನವೆಂಬರ್ 2014, 19:30 IST
ಅಕ್ಷರ ಗಾತ್ರ

ತಿರುವನಂತಪುರ (ಪಿಟಿಐ): ಕೇರಳದ ದಿವಂಗತ ಫಾದರ್‌ ಕುರಿಯಕೋಸ್‌ ಇಲಿಯಾಸ್‌ ಚಾವರ ಮತ್ತು ದಿವಂಗತ ಸಿಸ್ಟರ್‌ ಯುಫ್ರೇಸಿಯಾ ಅವರಿಗೆ ಮರಣೋತ್ತರವಾಗಿ ಭಾನು­ವಾರ ಪೋಪ್‌ ಫ್ರಾನ್ಸಿಸ್‌ ಅವರು ವ್ಯಾಟಿಕನ್‌ನಲ್ಲಿ ಸಂತ ಪದವಿಯನ್ನು ಪ್ರದಾನ ಮಾಡಲಿದ್ದಾರೆ.

ನ ಸೇಂಟ್‌ ಪೀಟರ್ಸ್‌ ಸ್ಕ್ವೇರ್‌ನಲ್ಲಿ ನಡೆಯುವ ವಿಶೇಷ ಸಾಮೂಹಿಕ ಪ್ರಾರ್ಥನಾ ಅಧಿವೇಶನದಲ್ಲಿ ಪೋಪ್‌ ಅವರು ಈ ಇಬ್ಬರಿಗೆ ಸಂತ ಪದವಿಯನ್ನು ಪ್ರದಾನಿಸಲಿದ್ದಾರೆ.

ಈ ವಿಶೇಷ ಸಂದರ್ಭಕ್ಕೆ ಸಾಕ್ಷಿ­ಯಾಗಲು ಕೇರಳದ ಚರ್ಚ್‌ಗಳ ನಿಯೋಗ­ದೊಂದಿಗೆ ರಾಜ್ಯಸಭೆಯ ಉಪಸಭಾಪತಿ ಪಿ.ಜೆ. ಕುರಿಯನ್‌ ಅವರೂ  ವ್ಯಾಟಿಕನ್‌ಗೆ ತೆರಳಿದ್ದಾರೆ ಎಂದು  ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT