ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ಕುಂಜನ್ನಮ್‌ ದೇಶದ ಅತಿ ಹಿರಿಯ ಮಹಿಳೆ

Last Updated 31 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ತ್ರಿಶೂರು, ಕೇರಳ (ಪಿಟಿಐ): ಪ್ರಸ್ತುತ 112 ವರ್ಷದ ಕುಂಜನ್ನಮ್‌ ಅಂತೋಣಿ ಭಾರತದ ಅತ್ಯಂತ ಹಿರಿಯ ಮಹಿಳೆ ಎಂದು ಲಿಮ್ಕಾ ದಾಖಲೆ ಹೇಳಿದೆ. ಅಮಲಾ ವೈದ್ಯಕೀಯ ಕಾಲೇಜು ಆಸ್ಪತ್ರೆ­ಯಲ್ಲಿ ವಯೋ ಸಹಜ ಅನಾ­ರೋಗ್ಯಗಳಿಗೆ ಚಿಕಿತ್ಸೆ ಪಡೆಯುತ್ತಿ­ರುವ ಕುಂಜನ್ನಮ್‌ ಅವ­ರನ್ನು ಲಿಮ್ಕಾ ದಾಖಲೆಯ ಹಿರಿಯ ಅಧಿಕಾರಿ ಪಿ.ಪಿ. ಪೀಟರ್‌ ಅವರು ಭೇಟಿಯಾಗಿ ಭಾರತದ ಅತ್ಯಂತ ಹಿರಿಯ ಮಹಿಳೆ ಎಂಬ ಪ್ರಮಾಣಪತ್ರವನ್ನು ನೀಡಿದರು.

ತ್ರಿಶೂರು ಸಮೀಪದ ಎರನಮ್ಮ­ಲೂರಿನ ‘ಅವರ್‌ ಲೇಡಿ ಆಫ್‌ ರೋಸರಿ ಚರ್ಚ್‌’ನಲ್ಲಿ ಕುಂಜನ್ನಮ್‌ ಅವರಿಗೆ 1903ರ ಮೇ 20ರಂದು ನಾಮಕರಣ ಮಾಡಿರುವ ದಾಖಲೆ ತ್ರಿಶೂರು ಕ್ಯಾಥಲಿಕ್‌ ಆರ್ಚ್‌­ಡಯೊ­ಸಿಸ್‌ನಲ್ಲಿ ದೊರೆತಿದೆ. ಈ ಆಧಾರದಲ್ಲಿ ಅವರ ವಯಸ್ಸನ್ನು ದೃಢ­ಪಡಿಸಲಾಗಿದೆ.

ಲಿಮ್ಕಾ ದಾಖಲೆ ಪುಸ್ತಕ ಆರಂಭವಾದ 25 ವರ್ಷಗಳಿಂದ ಇದೇ ಮೊದಲ ಬಾರಿಗೆ ಭಾರತದ ಅತ್ಯಂತ ವಯಸ್ಕ ಮಹಿಳೆಯೊಬ್ಬರು ದಾಖಲೆ ಪುಸ್ತಕ ಸೇರಿದ್ದಾರೆ ಎಂದು ಪೀಟರ್‌ ತಿಳಿಸಿದ್ದಾರೆ. ವಳಪಿಳ್ಳಿ ಅಂತೋಣಿ ಮತ್ತು ಅಚ್ಚುಣ್ಣಿ ಅವರ ಪುತ್ರಿಯಾಗಿರುವ ಕುಂಜನ್ನಮ್‌ ಅವಿವಾಹಿತೆ. ಸದ್ಯ ಸೋದರ ಸಂಬಂಧಿಗಳಾದ ಜೋಸ್‌ ಮತ್ತು ಅವರ ಮಕ್ಕಳು ಕುಂಜನ್ನಮ್‌ ಅವರನ್ನು ನೋಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT