ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ನಿಯೋಗ ಆರೋಪ

ಬೆಂಗಳೂರು ಭೂ ಮಾಫಿಯಾದಿಂದ ವಂಚನೆ
Last Updated 7 ಜುಲೈ 2014, 19:30 IST
ಅಕ್ಷರ ಗಾತ್ರ

ತಿರುವನಂಪುರ (ಪಿಟಿಐ): ಭೂ ಮಾಫಿಯಾದಿಂದ ಬೆಂಗಳೂರಿನಲ್ಲಿ ವಂಚನೆಗೆ ಒಳಗಾದ ಮಲಯಾಳಿಗಳ ನಿಯೋಗ ಸೋಮವಾರ ಕೇರಳ ಮುಖ್ಯ­ಮಂತ್ರಿ ಉಮ್ಮನ್‌ ಚಾಂಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಬೆಂಗಳೂರಿನ ವಿವಿಧ ಭಾಗಗಳಲ್ಲಿ ಪ್ಲಾಟ್‌ ಖರೀದಿಗೆಂದು ಹಣ ಹೂಡಿದ್ದ ಕೇರಳದ ಸುಮಾರು 450 ಮಂದಿಗೆ ರಾಜಕೀಯ ಪ್ರಭಾವ ಮತ್ತು ಅಧಿಕಾರಿ­ಗಳ ಸಂಪರ್ಕ ಬಳಸಿ ನಕಲಿ ದಾಖಲೆ­ಗಳನ್ನು ತೋರಿಸಿ ವಂಚಿಸಲಾಗಿದೆ ಎಂದು ಈ ನಿಯೋಗ ಆರೋಪಿಸಿದೆ.
ನಿಯೋಗದ ದೂರು ಆಲಿಸಿದ ಉಮ್ಮನ್‌ ಚಾಂಡಿ ಅವರು, ಈ ಕುರಿತು ಕರ್ನಾಟಕ ಸರ್ಕಾರದೊಂದಿಗೆ ಮಾತು­ಕತೆ ನಡೆಸುವ ಭರವಸೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಯೋಗದ ಸದಸ್ಯರು, 1994ರಲ್ಲಿ ರಿಯಲ್‌ ಎಸ್ಟೇಟ್‌ ಡೆವಲಪರ್‌  ಮೂಲಕ ಅನೇಕರು ಪ್ಲಾಟ್‌ಗಳನ್ನು ಖರೀದಿಸಿದ್ದರು. ಆದರೆ ಡೆವಲಪರ್‌ ಮೇಲೆ ಕೆಲವು ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಖರೀದಿದಾರರನ್ನು ಆ ಪ್ಲಾಟ್‌ಗಳಿಂದ ಒಕ್ಕಲೆಬ್ಬಿಸಲಾಯಿತು ಈ ಬಗ್ಗೆ ಕರ್ನಾಟಕ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದು­ಕೊಳ್ಳಲಿಲ್ಲ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT