ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗೆ ಸಿಗದ ಫೋನ್‌ ಹುಡುಕಲೂ ಆ್ಯಪ್!

Last Updated 28 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಕೆಲಸದ ಒತ್ತಡದಲ್ಲಿ ಎಲ್ಲಿಯಾದರೂ ಸ್ಮಾರ್ಟ್‌ ಫೋನ್‌ ಇಟ್ಟು ಮರೆತುಬಿಡುವ ಆತಂಕ ಇನ್ನೂ ಬೇಕಾಗಿಲ್ಲ.
ಕಾರು, ಮನೆ ಅಥವಾ ಇನ್ನಾವುದೋ ಸ್ಥಳದಲ್ಲಿ ಸ್ಮಾರ್ಟ್‌ಫೋನ್‌ ಇಟ್ಟಿದ್ದರೆ ಅದನ್ನು ಪತ್ತೆ ಮಾಡಲು ಗೂಗಲ್‌ ನಿಮ್ಮ ನೆರವಿಗೆ  ಧಾವಿಸಲಿದೆ.

ಗೂಗಲ್‌ನಲ್ಲಿ ‘ನನ್ನ ಫೋನ್‌ ಪತ್ತೆ ಮಾಡು’ ಎಂದು ಟೈಪಿಸಿದರೆ ತಕ್ಷಣ ಸ್ಮಾರ್ಟ್‌ಫೋನ್‌ ಇರುವ ಸಮೀಪದ ಜಾಗವನ್ನು ತೋರಿಸುತ್ತದೆ ಎಂದು ಗೂಗಲ್‌ ಬ್ಲಾಗ್‌ಸ್ಪಾಟ್‌ ತಿಳಿಸಿದೆ.

‘ನೀವಿರುವ ಜಾಗದಲ್ಲಿ ಸ್ಮಾರ್ಟ್‌ಫೋನ್‌ ಕಾಣಿಸದೆ ಇದ್ದಾಗ ಸಹಜವಾಗಿ ಕಚೇರಿಯ ಕುರ್ಚಿ, ಟೇಬಲ್‌ಗಳು, ಕಾರು ಸೀಟುಗಳ ಕೆಳಗೆ ಅಥವಾ ಮನೆಯಲ್ಲಿನ ಸೋಫಾ ಮುಂತಾದ ಜಾಗಗಳಲ್ಲಿ ಹುಡುಕುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಗೂಗಲ್‌ ನೆರವು ಪಡೆಯಬಹುದು’ ಎಂದು ಅದು ತಿಳಿಸಿದೆ.

ಇದಕ್ಕಾಗಿ ಬಳಕೆದಾರರು ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಆ್ಯಪ್‌ ಅಳವಡಿಸಿಕೊಳ್ಳಬೇಕು. ಈ ಆ್ಯಪ್‌ನಲ್ಲಿ ಸ್ಮಾರ್ಟ್‌ಫೋನ್‌ ರಿಂಗಣಿಸುವ ಆಯ್ಕೆಯೂ ಇದೆ. ಸುಮಾರು ಐದು ನಿಮಿಷಗಳ ಕಾಲ ಸ್ಮಾರ್ಟ್‌ಫೋನ್‌ ರಿಂಗಣಿಸುತ್ತದೆ. ಇದರಲ್ಲಿ ಸ್ಥಳ ಗುರುತಿಸುವ ಆಯ್ಕೆ ಸದಾ ಸೇವೆಯಲ್ಲಿಡುವುದು ಕಡ್ಡಾಯ. ಇದರಿಂದ ಗೂಗಲ್‌ನಲ್ಲಿ ಸುಲಭವಾಗಿ ಹುಡುಕಲು ಸಾಧ್ಯವಾಗುತ್ತದೆ.

ಒಂದು ವೇಳೆ ಸ್ಮಾರ್ಟ್‌ಫೋನ್‌ ಕಳೆದುಕೊಂಡರೂ ಅದರಲ್ಲಿನ ಮಾಹಿತಿಯನ್ನು ಲಾಕ್‌ ಮಾಡುವ ಆಯ್ಕೆಯೂ ಇದರಲ್ಲಿ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT