ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈತಪ್ಪಿದ ಏಳು ಟಿಎಂಸಿ ನೀರು: ಆಕ್ರೋಶ

Last Updated 29 ಜುಲೈ 2016, 6:05 IST
ಅಕ್ಷರ ಗಾತ್ರ

ಉಡುಪಿ: ಮಹದಾಯಿ ನದಿಯ ಏಳು ಟಿಎಂಸಿ ನೀರು ಬಳಕೆ ಮಾಡಲು ಅನು ಮತಿ ಕೋರಿ ಕರ್ನಾಟಕ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯ
ಮಂಡಳಿ ವಜಾಗೊಳಿಸಿರುವುದನ್ನು ವಿರೋಧಿಸಿ ಜಯ ಕರ್ನಾಟಕ ಸಂಘಟನೆಯ ಸದಸ್ಯರು ನಗರದ ಸರ್ವೀಸ್ ಬಸ್‌ ನಿಲ್ದಾಣದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್‌ ಹಾಗೂ ಬಿಜೆಪಿ ದೊಂಬ ರಾಟದಿಂದಲೇ 7 ಟಿಎಂಸಿ ನೀರು ಬಳ ಸುವ ಅವಕಾಶ ಕೈತಪ್ಪಿದೆ. ಪರಿಣಾಮ ನಾಲ್ಕು ಜಿಲ್ಲೆಯ ಜನರಿಗೆ ಅನ್ಯಾಯ ವಾಗಿದೆ. ರಾಜ್ಯದ ಜನಪ್ರತಿನಿಧಿಗಳು ಇನ್ನಾದರೂ ಎಲ್ಲರೂ ಒಂದಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಪ್ರಧಾನಿ ಅವರ ಮನವೊಲಿಸಬೇಕು. ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ನ್ಯಾಯಾಲಯದ ಹೊರಗೆ ಈ ವಿವಾದ ಬಗೆಹರಿಸಲು ಪ್ರಯತ್ನಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಜನನಿ ದಿವಾಕರ ಶೆಟ್ಟಿ ಮಾತನಾಡಿ, ನಮ್ಮ ನೀರನ್ನು ನಾವು ಬಳಸಿಕೊಳ್ಳಲು ಹೋ ರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದು ದುರದೃಷ್ಟಕರ. ತಮ್ಮ ಪರವಾಗಿ ಕೆಲಸ ಮಾಡಲಿ ಎಂದು ಜನರು ಪ್ರತಿನಿಧಿಗಳನ್ನು ಆಯ್ಕೆ ಮಾಡು ತ್ತೇವೆ. ಆದರೆ ಜನಪ್ರತಿನಿಧಿಗಳು ರಾಜ್ಯದ ಹಿತಾಸಕ್ತಿ ಕಾಪಾಡುವ ಕೆಲಸ ಮಾಡು ತ್ತಿಲ್ಲ. ಆದ್ದರಿಂದ ಇಂತಹ ಸಮಸ್ಯೆಗಳು ಉದ್ಭವಿಸುತ್ತಿವೆ. ನೀರಿನ ತುರ್ತು ಇರು ವುದರಿಂದ ಜನರು ಒಂದು ವರ್ಷದಿಂದ ಬೀದಿಗಳಿದು ಹೋರಾಟ ಮಾಡುತ್ತಿ ದ್ದಾರೆ.

ನ್ಯಾಯ ಮಂಡಳಿ ಮಧ್ಯಂತರ ಅರ್ಜಿ ವಜಾಗೊಳಿಸಿರುವುದರಿಂದ ಜನರಿಗೆ ತೀವ್ರ ಆಘಾತವಾಗಿದೆ. ಮಹದಾಯಿ ನೀರಿನ ಅಗತ್ಯ ಈಗ ಇದೆ. ಈ ವಿವಾದ ನ್ಯಾಯಾಲಯದಲ್ಲಿ ಬಗೆಹರಿಯುವವರೆಗೆ ಕಾಯಲು ಆಗದು ಎಂದರು.

ನ್ಯಾಯ ಮಂಡಳಿ ತೀರ್ಪಿನ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸಂಘಟ ನೆಯ ಮುಖಂಡರಾದ ರಮೇಶ್ ಮೆಂಡನ್‌, ವಿಜಯ ಹೆಗ್ಡೆ, ಸುರೇಶ್ ಪೂಜಾರಿ, ಶಶಿಕುಮಾರ್‌, ಜಾನ್‌ ಲೆನ್ನಿ, ಮುನ್ನಾಬಾಯಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT