ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಡು ಓದುವವರೇ ‘ಚುನಾಯಿಸಲಿ’

Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಸಾರ್ವಜನಿಕ ಗ್ರಂಥಾಲಯಗಳಿಗೆ  ಯಾವುದೋ ಒಂದು ಸಮಿತಿ ಆಯ್ಕೆ ಮಾಡಿದ ಪುಸ್ತಕ­ಗಳನ್ನು ಸರ್ಕಾರ ಸಗಟಾಗಿ ಕೊಂಡು­ಕೊಳ್ಳು­ವುದು, ಒಂದಲ್ಲ ಒಂದು ರೀತಿಯ ಅಹಿತಾಸಕ್ತಿಗೆ ಎಡೆಗೊಡುತ್ತದೆ. ಓದುಗರೇ ಪುಸ್ತಕಗಳನ್ನು ‘ಚುನಾಯಿಸುವುದು’ ಉತ್ತಮ.

ನಾಗರಿಕನೊಬ್ಬ ತನಗೆ ಇಷ್ಟವಾದ ಪುಸ್ತಕವನ್ನು ಕೊಂಡು, ಓದಿದ ಮೇಲೆ ಆ ಪುಸ್ತಕವನ್ನು ಆರು ತಿಂಗಳೊಳಗೆ ತನ್ನ ಊರಿನ ಸರ್ಕಾರಿ ಗ್ರಂಥಾ­ಲ­ಯಕ್ಕೆ ಪುಸ್ತಕದ ಮೂರನೆ ಎರಡರಷ್ಟು ಬೆಲೆಗೆ ಮಾರ­ಬಹುದಾದ ಪದ್ಧತಿಯನ್ನು ಜಾರಿಗೆ ತರ­ಬೇಕು. ಹೀಗಾದರೆ ₨300ರ ಮುಖಬೆಲೆಯ ಪುಸ್ತಕಕ್ಕೆ ಓದುಗ ಕೇವಲ 100 ರೂಪಾಯಿ­ಯನ್ನು  ಮತ್ತು ಸರ್ಕಾರ  200 ರೂಪಾಯಿ­ಯನ್ನು ಕೊಡಬೇಕಾಗುತ್ತದೆ.
ಇದರಿಂದ ಓದುಗರು ಹೆಚ್ಚು ಪುಸ್ತಕಗಳನ್ನು ಕೊಂಡು ಓದಲು ಉತ್ತೇಜನ ದೊರೆಯುತ್ತದೆ, ಸರ್ಕಾರಕ್ಕೆ ಹಣ ಉಳಿಯುತ್ತದೆ ಮತ್ತು ಒಳ್ಳೆಯ ಪುಸ್ತಕಗಳು ಹೆಚ್ಚಿನ ಓದಿಗೆ ಒಳಗಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT