ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟ ಕುದುರೆಯನೇರಲರಿಯದೆ...

ಅಕ್ಷರ ಗಾತ್ರ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ತಮ್ಮ ತಾಲ್ಲೂಕಿನಲ್ಲೇ ನಡೆಯಬೇಕು ಎಂಬ ಜಿದ್ದಿಗೆ ಬಿದ್ದು ಹಾವೇರಿ ಜಿಲ್ಲೆಯ ಎರಡು ತಾಲ್ಲೂಕು ಬಣಗಳ ಕಚ್ಚಾಟದಿಂದಾಗಿ ಜಿಲ್ಲೆಗೆ ಸಮ್ಮೇಳನದ ಆತಿಥ್ಯ ಕೈತಪ್ಪಿ ಹೋಗಿರುವುದು ವಿಷಾದನೀಯ. 

ಇದಕ್ಕಾಗಿ, ಅತಿರೇಕ ಎಂಬಂತೆ ತಾಲ್ಲೂಕು ಕೇಂದ್ರಗಳಲ್ಲಿ ಬಂದ್ ನಡೆಸಿದ್ದೂ ಆಯಿತು. ಸ್ಥಳ ನಿರ್ಣಯವು  ಆ ಪರಿ ಬಿಡಿಸಲಾಗದ ಕಗ್ಗಂಟಾಗಿದ್ದು ಸೋಜಿಗದ ಸಂಗತಿ!

ಅಷ್ಟಕ್ಕೂ ಎರಡೂ ತಾಲ್ಲೂಕು, ಹಾವೇರಿ ಜಿಲ್ಲೆಯವೇ ಅಲ್ಲವೇ? ಒಣ ಪ್ರತಿಷ್ಠೆ, ಮೊಂಡುತನ, ಕ್ಷುಲ್ಲಕ ಕಾರಣಗಳನ್ನು ಬದಿಗೊತ್ತಿ ಒಮ್ಮತದಿಂದ  ಕಲೆತು ಜಿಲ್ಲೆಯ ಎಲ್ಲಾದರೂ ಒಂದೆಡೆ ಸಾಹಿತ್ಯ ಸಮ್ಮೇಳನವನ್ನು ಸಕಲರೂ ಸೈ ಎನ್ನುವಂತೆ ನಡೆಸಿ ಕನ್ನಡ ತಾಯಿಯ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯಬಹುದಿತ್ತು.

ಅದು ಆಗಲಿಲ್ಲ ಎಂಬುದು ದೊಡ್ಡ ಲೋಪ. ತಮ್ಮ ಸಣ್ಣ ತನವನ್ನು ಬಯಲಿಗಿಡಲು ಸಾಹಿತ್ಯವನ್ನೋ ಸಮ್ಮೇಳನಗಳನ್ನೋ ಸಾಧನವಾಗಿಸಿಕೊಳ್ಳುವುದು ಹಿತಕರ ಬೆಳವಣಿಗೆಯಲ್ಲ. ಸಾಹಿತ್ಯದ ಆಶಯ ಮನಸ್ಸುಗಳನ್ನು ಬೆಸೆಯುವುದೇ ವಿನಾ ಒಡೆಯುವುದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT