ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆಗಾರನಲ್ಲ ಕೊಲೆಸ್ಟ್ರಾಲ್

Last Updated 20 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಕೊಲೆಸ್ಟ್ರಾಲ್ ಎಂಬುದು ಸರ್ವೆಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಇದನ್ನು ನಾವು ಲಿಪಿಡ್‌ ಪ್ರೊಫೈಲ್‌ ಎಂದು ರಕ್ತಪರೀಕ್ಷೆಯ ವರದಿಗಳಲ್ಲಿ ನೋಡುತ್ತೇವೆ. ಇದು ನಮ್ಮ ಆರೋಗ್ಯ ಹಾಗು ಅನಾರೋಗ್ಯಕ್ಕೆ ಹೇಗೆ ಕಾರಣವಾಗುತ್ತದೆಂದು ತಿಳಿದುಕೊಳ್ಳೋಣ.

"ಕೊಲೆಸ್ಟ್ರಾಲ್ " ಎಂಬುದು ಒಂದು  ರೀತಿಯ ಕೊಬ್ಬು ಅಥವಾ "ಲಿಪಿಡ್" ಎಂದು ಹೇಳಬಹುದು. ಇದು ಲಿವರ್ ನಲ್ಲಿ ಉತ್ಪನ್ನವಾಗುವಂತಹ ಒಂದು ಸ್ಟೀರಾಲ್. ಇದು 3 ಪ್ರಮುಖ ಕಾಯಗಳನ್ನು ನಿರ್ವಹಿಸುತ್ತದೆ.

*ಕೊಲೆಸ್ಟ್ರಾಲ್ ಜೀವಕಣಗಳನ್ನು ನಿರ್ವಹಿಸಲು ಹಾಗು ನಿರ್ಮಿಸಲು ಸಹಾಯಕವಾಗಿರುತ್ತದೆ.

*ಪಿತ್ತರಸ ಉತ್ಪಾದನೆ : ಕರುಳಿನಲ್ಲಿ ಆಹಾರ ಜೀರ್ಣವಾಗಲು ಅವಶ್ಯವಾಗಿರುವ ಪಿತ್ತರಸವನ್ನು ಕೊಲೆಸ್ಟ್ರಾಲ್ ಸಹಾಯದಿಂದ ಉತ್ಪಾದಿಸಲಾಗುತ್ತದೆ.

* ವಿವಿಧ ಹಾರ್ಮೋನ್ ಉತ್ಪಾದನೆ : ಈಸ್ಟ್ರೊಜನ್ ಹಾಗು ಪ್ರೊಜೆಸ್ಟೀರಾನ್ ಹಾರ್ಮೋನ್  ಉತ್ಪಾದನೆಗೂ ಕೊಲೆಸ್ಟ್ರಾಲ್ ಬೇಕು.

ಕೊಲೆಸ್ಟ್ರಾಲ್ ರಕ್ತದ ಮೂಲಕ ದೇಹದಲ್ಲಿ ಚಲಿಸುತ್ತದೆ. ಕೊಲೆಸ್ಟ್ರಾಲ್ ನೀರಿನಲ್ಲಿ ಕರಗಲು ಸಾಧ್ಯವಾಗದಿರುವುದರಿಂದ ರಕ್ತದಲ್ಲಿ ಮಿಶ್ರಿತವಾಗುವುದಿಲ್ಲ. ಆದ್ದರಿಂದ ಲಿವರ್ ಅದನ್ನು ಪ್ರೋಟೀನ್ ಹಾಗು ಇತರ ಸಂಯುಕ್ತಗಳೊಂದಿಗೆ ಸೇರಿಸಿ ಲೈಪೊಪ್ರೋಟೀನ್ ಆಗಿಸಿ ರಕ್ತದಲ್ಲಿ ಮಿಶ್ರಿತವಾಗಲು ಬಿಡುಗಡೆ ಮಾಡುತ್ತದೆ. ಹೀಗೆ ಕೊಲೆಸ್ಟ್ರಾಲ್ ಅದರ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.

ಎಚ್ ಡಿಎಲ್‌  (ಹೈ ಡೆನ್ ಸಿಟಿ ಲಿಪೊ ಪ್ರೊಟೀನ್ ) ಹಾಗು ಎಲ್‌ಡಿಎಲ್‌ (ಲೊ ಡೆನ್ ಸಿಟಿ ಲಿಪೊ ಪ್ರೊಟೀನ್) :ಇವುಗಳ ಪ್ರಮಾಣವನ್ನು ಸಾಮಾನ್ಯವಾಗಿ ರಕ್ತ ಪರೀಕ್ಷೆಗಳಲ್ಲಿ ಒಂದಾದ "ಲಿಪಿಡ್ ಪ್ರೊಫ಼ೈಲ್"ನ ಮೂಲಕ ಕಂಡುಕೊಳ್ಳಬಹುದಾಗಿದೆ.

ಲೈಪೊಪ್ರೋಟೀನ್ ಜೀವಕಣದಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಿ ಇದ್ದು, ಕೊಲೆಸ್ಟ್ರಾಲ್ ಅಂಶ ಕಡಿಮೆ ಇದ್ದಾಗ ಎಚ್ ಡಿಎಲ್‌  ಅಥವ ಒಳ್ಳೆಯ ಕೊಲೆಸ್ಟ್ರಾಲ್ ಎಂದು ಕರೆಯುತ್ತಾರೆ . ಲೈಪೊಪ್ರೋಟೀನ್ ಕಣದಲ್ಲಿ ಹೆಚ್ಚಾಗಿ ಕೊಲೆಸ್ಟೀರಾಲ್ ಇದ್ದು ಪ್ರೊಟೀನ್ ಅಂಶ ಕಡಿಮೆ ಇದ್ದಲ್ಲಿ ಎಲ್‌ಡಿಎಲ್‌ ಅಥವ ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯುತ್ತೇವೆ. ಇದು ರಕ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ.

ಎಲ್‌ಡಿಎಲ್‌ ಪ್ರೋಟೀನ್ ಹೆಚ್ಚಿನ ಅಂಶವು ಹೃದಯದ ರಕ್ತನಾಳಗಳಲ್ಲಿ ಶೇಖರಣೆಯಾಗುತ್ತದೆ. ಕ್ರಮೇಣವಾಗಿ ಹೆಚ್ಚಾಗುತ್ತ, ಅಂತಿಮವಾಗಿ ರಕ್ತಚಲನೆಯನ್ನು ನಿಧಾನಿಸುತ್ತದೆ. ಆದರೆ ಎಚ್ ಡಿಎಲ್‌  ಬಹಳ ಉಪಯುಕ್ತವಾಗಿದೆ. ಹೆಚ್ಚಿನ ಕೊಲೆಸ್ಟ್ರಾಲ್ ಅಂಶವನ್ನು ಮತ್ತೆ ಲಿವರ್ ಗೆ ತೆಗೆದುಕೊಂಡು ಹೋಗಿ ಅವಶ್ಯವಿದ್ದಲ್ಲಿ ಶೇಖರಿಸಿ ಅಥವ ದೇಹದಿಂದ ಹೊರಗೆ ಹಾಕಲು ಸಹಾಯ ಮಾಡುತ್ತದೆ.

(ಹೈ ಡೆನ್ ಸಿಟಿ ಲಿಪೊ ಪ್ರೊಟೀನ್ ) ಅಂಶವನ್ನು ನಮ್ಮ ದೇಹದಲ್ಲಿ ಹೇಗೆ ವೃದ್ಧಿಸುವುದು ?
* (ವಿಟಮಿನ್‌ B3) ನಿಯಾಸಿನ್ : ನಿಯಾಸಿನ್ ರಕ್ತದ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಅಣಬೆ, ಅವಕ್ಯಾಡೊ,  ಖರ್ಜೂರ, ನೆಲಗಡಲೆ, ಬೇಯಿಸಿದ ಬಟಾಣಿ, ಮಲ್ಟಿ ಗ್ರೈನ್ ಬ್ರೆಡ್, ಧಾನ್ಯಗಳು ಹಾಗು ಬಿ ಕಾಂಪ್ಲೆಕ್ಸ್‌ ಇರುವ ಎಲ್ಲಾ ಆಹಾರ ಪದಾರ್ಥಗಳಲ್ಲಿ ನಿಯಾಸಿನ್ ಅಂಶ ದೊರೆಯುತ್ತದೆ.

* ನಟ್ಸ್‌ (ಬೀಜಗಳು) : ವಾಲ್‌ ನಟ್ಸ್, ಬಾದಾಮಿ, ನೆಲಗಡಲೆ, ಪಿಸ್ತಾ, ಹೇಸಲ್ ನಟ್ಸ್ - ಇವುಗಳಲ್ಲಿ ಹೃದಯದ ಆರೋಗ್ಯವನ್ನು ಹೆಚ್ಚಿಸುವ ಅಂಶಗಳು ದೊರೆಯುತ್ತದೆ.

ಈ ಪದಾರ್ಥಗಳಲ್ಲಿ ಅಪರ್ಯಾಪ್ತ ಕೊಬ್ಬು ಹೆಚ್ಚಿನ ಅಂಶದಲ್ಲಿ ಇದ್ದು, ಇದರಿಂದ ಎಚ್ ಡಿಎಲ್‌  (ಹೈ ಡೆನ್ ಸಿಟಿ ಲಿಪೊ ಪ್ರೊಟೀನ್ ) ಮಟ್ಟ ಜಾಸ್ತಿಯಾಗಲು ಸಹಾಯವಾಗಿತ್ತದೆ. ಬೆಣ್ಣೆ, ತುಪ್ಪ, ಎಣ್ಣೆಯಲ್ಲಿ ಕರಿದ ಪದಾರ್ಥಗಳ ಬದಲಾಗಿ ಹೃದಯದ ಆರೋಗ್ಯವನ್ನು ವೃದ್ಧಿಸುವ ಆಲಿವ್ ಎಣ್ಣೆಯ ಬಳಕೆ ಮಾಡಬಹುದು.
ನೆನಪಿಡಿ, ಎಣ್ಣೆ ಬಳಕೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಅದರಲ್ಲಿ ಕೊಬ್ಬು ಹಾಗು ಕ್ಯಾಲೋರಿ ಹೆಚ್ಚಾಗಿ ಇರುವುದರಿಂದ ಮಿತವಾಗಿ ಬಳಸಬೇಕು.

*ನಾರಿನ ಅಂಶ : ಓಟ್ಸ್, ಗೋದಿಯ ಬ್ರಾನ್ (ತೌಡು) ,ಬಾರ್ಲಿ, ಒಣ ದ್ರಾಕ್ಷಿ, ಸೇಬು ಮುಂತಾದುವುಗಳಲ್ಲಿ ಹೆಚ್ಚು ನಾರಿನ ಅಂಶ ಇದ್ದು HDL ಕಡಿಮೆ ಮಾಡಿ ಎಚ್ ಡಿಎಲ್‌ ಅನ್ನು ಹೆಚ್ಚಿಸುತ್ತದೆ. ಒಂದೆರಡು ಬಾರಿ ಇವುಗಳನ್ನು ನಮ್ಮ ಆಹಾರ ಕ್ರಮದಲ್ಲಿ ಬಳಸುವುದರಿಂದ ಧನಾತ್ಮಕ ಪರಿಣಾಮಗಳನ್ನು ನೋಡಬಹುದು.

* ಸಕ್ಕರೆ ಸೇವನೆಯನ್ನು ಕಡಿಮೆ ಮಾಡಬೇಕು: ಹೆಚ್ಚಿನ ಸಕ್ಕರೆ ಪದಾರ್ಥಗಳ ಸೇವನೆಯಿಂದ ಬರುವ ಕ್ಯಾಲೋರಿಗಳನ್ನು ಸೇವಿಸದೆ ಇದ್ದರೆ ನಾವು HDL ಹಾಗು ಎಲ್‌ಡಿಎಲ್‌ ಮಟ್ಟವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.

* ಯೋಗಾಭ್ಯಾಸ, ವ್ಯಾಯಾಮ, ವಾಕಿಂಗ್ ಇವುಗಳಿಂದ ಶೇಖರಣೆಯಾದ ಗ್ಲೈಕೋಜನ್ ಬಳಸಿಕೊಂಡು ಎಚ್ ಡಿಎಲ್‌  ಮಟ್ಟವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.

ಆಹಾರವೇ ನಮ್ಮ ಔಷಧಿಯಾಗಿದ್ದಾಗ ಅನಾರೋಗ್ಯ ನಮ್ಮಿಂದ ದೂರವಿರುತ್ತದೆ. ಆದ್ದರಿಂದ ಸಮತೋಲಿತ ಆಹಾರ ಸೇವಿಸುವುದರ ಮೇಲೆ ನಮ್ಮ ಗಮನ ಇರಬೇಕು.

ಪೌಷ್ಟಿಕವಾದ ಆಹಾರವೇ ಒಳ್ಳೆಯ ಆರೋಗ್ಯಕ್ಕೆ ಬುನಾದಿ. ಆಹಾರಕ್ಕೆ ದೀರ್ಘಕಾಲದ ರೋಗಗಳನ್ನು ತಡೆಗಟ್ಟಲು ಸಾಧ್ಯವಾಗುವುದಾದರೆ ನಮ್ಮ ಆಹಾರ ಕ್ರಮವನ್ನು ಆರೋಗ್ಯ ಸುಧಾರಣೆಗೆ ಉಪಯೋಗಿಸಿಕೊಳ್ಳುವುದರಲ್ಲಿ ಜಾಣತನ ಇದೆ ಎನ್ನುವ ಮಾತನ್ನು ನಾವೆಲ್ಲರು ಒಪ್ಪಿಕೊಳ್ಳಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT