ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಪರ ದ್ರಾವಿಡ್‌ ಬ್ಯಾಟಿಂಗ್‌

Last Updated 30 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್‌ (ಪಿಟಿಐ): ‘ಆಸ್ಟ್ರೇಲಿಯಾದ ಅಂಗಳದಲ್ಲಿ ವಿರಾಟ್ ಕೊಹ್ಲಿ ಟೆಸ್ಟ್‌ ಪಂದ್ಯಗಳಲ್ಲಿ ಅತ್ಯುತ್ತಮವಾಗಿ ಆಡಿದ್ದಾರೆ. ಅದನ್ನು ಮರೆತು ನಾವು ಟೀಕೆ ಮಾಡುತ್ತಿದ್ದೇವೆ’ ಎಂದು ಮಾಜಿ ಆಟಗಾರ ರಾಹುಲ್ ದ್ರಾವಿಡ್‌ ಹೇಳಿದ್ದಾರೆ.

‘ಸೆಮಿಫೈನಲ್‌ನಲ್ಲಿ ಕೊಹ್ಲಿ ಆಡದೆ ಇರಬಹುದು. ಆದರೆ ಟೆಸ್ಟ್‌ನಲ್ಲಿ ಉತ್ತಮವಾಗಿ ಆಡಿದ್ದಾರೆ. ಅವರೊಬ್ಬ ಉತ್ತಮ ಸಂವೇದನೆ ಹೊಂದಿರುವ ಆಟಗಾರ’ ಎಂದು ದ್ರಾವಿಡ್‌ ಹೇಳಿದ್ದಾರೆ.

‘ಭಾರತ ಬ್ಯಾಟ್ಸ್‌ಮನ್‌ಗಳು ಆಸ್ಟ್ರೇಲಿಯಾಕ್ಕೆ ಬಂದು ಉತ್ತಮ ಇನಿಂಗ್ಸ್‌ ಕಟ್ಟಬಲ್ಲರು ಎಂದು ನಾನು ನಿರೀಕ್ಷಿಸಿರಲಿಲ್ಲ. ಕೊಹ್ಲಿ ನಮ್ಮ ಊಹೆಯನ್ನು ಸುಳ್ಳು ಮಾಡಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಸೆಮಿಫೈನಲ್‌ನಲ್ಲಿ ಭಾರತ ಅತ್ಯುತ್ತಮ ತಂಡದ ಎದುರು ಸೋಲು ಕಂಡಿದೆ. ಹಾಗಾಗಿ ಈ ಸೋಲಿನಿಂದ  ನನಗೆ ಬೇಸರ ಇಲ್ಲ’ ಎಂದು ಮಾಜಿ ಆಟಗಾರ ತಮ್ಮ ಅಭಿಮತ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT