ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟಿಗೆ ಷರೀಫ್ ಹಾಜರು

Last Updated 27 ನವೆಂಬರ್ 2014, 19:44 IST
ಅಕ್ಷರ ಗಾತ್ರ

ಬೆಂಗಳೂರು:  ಕೆನರಾ ಬ್ಯಾಂಕ್ ಜೊತೆ ಅಮಾನತ್ ಸಹಕಾರ ಬ್ಯಾಂಕ್ ವಿಲೀನ ಗೊಳಿಸುವ ವಿವಾದಕ್ಕೆ ಸಂಬಂಧಿಸಿದಂತೆ  ಪ್ರಕರಣದಿಂದ ತನ್ನನ್ನು ಕೈಬಿಡುವಂತೆ ಕೆನರಾ ಬ್ಯಾಂಕ್ ಕೋರಿದೆ. ಈ ಸಂಬಂಧ ಕೆನರಾ ಬ್ಯಾಂಕ್ ಪರ ವಕೀಲರು ಗುರುವಾರ ಹೈಕೋರ್ಟಿಗೆ ಜ್ಞಾಪನಾ ಪತ್ರ ಸಲ್ಲಿಸಿದರು.

ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರಿದ್ದ ಪೀಠವು ಜ್ಞಾಪನಾ ಪತ್ರ ಸ್ವೀಕರಿಸಿ ವಿಚಾರಣೆಯನ್ನು ಡಿ.4ಕ್ಕೆ  ಮುಂದೂಡಿತು.
ಹಾಜರಿ: ವಿಲೀನ ಪ್ರಕ್ರಿಯೆ  ಪ್ರಶ್ನಿಸಿ ಕಾಂಗ್ರೆಸ್ಸಿನ ಹಿರಿಯ ಮುಖಂಡ ಸಿ.ಕೆ. ಜಾಫರ್ ಷರೀಫ್ ಸೇರಿದಂತೆ ಅನೇಕ ರು ರಿಟ್ ಅರ್ಜಿ ಸಲ್ಲಿಸಿದ್ದರು. ಇದ­ರಿಂದಾಗಿ ಅರ್ಜಿದಾರರು ವಿಚಾರಣೆಗೆ ಖುದ್ದು ಹಾಜರಾಗುವಂತೆ ನ್ಯಾಯ­ಪೀಠವು ಕಳೆದ ವಿಚಾರಣೆ ವೇಳೆ  ಸೂಚಿ­ಸಿತ್ತು.

ಈ ಕಾರಣಕ್ಕಾಗಿ ಸಿ.ಕೆ. ಜಾಫರ್ ಷರೀಫ್ ಅವರು ಗುರುವಾರ ಇದೇ ನ್ಯಾಯಪೀಠದ ಮುಂದೆ ಹಾಜ ರಾಗಿದ್ದರು. ಬ್ಯಾಂಕಿನ ಶೇರುದಾರರೂ ಆಗಿರುವ ಜಾಫರ್ ಷರೀಫ್ ಅವರು ನ್ಯಾಯ ಪೀಠಕ್ಕೆ ತಮ್ಮ ಗುರುತಿನ ಚೀಟಿಯನ್ನು ಹಾಜರುಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT