ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ಗೆ ಹಾಜರಾದ ರಾಮಲಿಂಗ ರಾಜು

Last Updated 4 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್‌(ಪಿಟಿಐ): ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಸತ್ಯಂ ಕಂಪ್ಯೂಟರ್ಸ್‌ ಸಂಸ್ಥಾಪಕ ರಾಮಲಿಂಗ ರಾಜು ಹಾಗೂ ಮತ್ತೊಬ್ಬ ಆರೋಪಿ ಶುಕ್ರವಾರ ಇಲ್ಲಿನ ಕೋರ್ಟ್‌ಗೆ ಹಾಜರಾದರು.

ರಾಜು ಹಾಗೂ ಇತರ 212 ಆರೋಪಿಗಳು ಮತ್ತು 166 ಕಂಪೆನಿಗಳು ಕಾರ್ಪೊರೇಟ್‌ ಸೋಗಿನಲ್ಲಿ ಅಕ್ರಮ­ವಾಗಿ ಹಣ ವರ್ಗಾವಣೆ ಮಾಡಿದ್ದಾಗಿ ಜಾರಿ ನಿರ್ದೇಶನಾಲಯ  ಕಳೆದ ವರ್ಷ ಅಕ್ಟೋಬರ್‌ನಲ್ಲಿ  21ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಮುಂದೆ ದೂರು ದಾಖಲಿಸಿತ್ತು. 2009ರಲ್ಲಿ ಬಯಲಿಗೆ ಬಂದ ಈ ಹಗರಣ ಉದ್ಯಮ ವಲಯವನ್ನು ಬೆಚ್ಚಿ ಬೀಳಿಸಿತ್ತು.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕ­ರ­­ಣದ
ಆರೋಪಿ­ಗಳ ವಿಚಾರಣೆ ನಡೆಸ­ಬೇಕು ಎಂದು ಜಾರಿ ನಿರ್ದೇಶ­ನಾ­ಲಯ ತನ್ನ ತನಿಖಾ ವರ­ದಿ­ಯಲ್ಲಿ ಹೇಳಿತ್ತು. ಜಾರಿ ನಿರ್ದೇಶ­ನಾಲಯದ ಮನವಿ­ಪರಿಶೀಲಿಸಿದ ಕೋರ್ಟ್‌, ಆರೋಪಿ­­ಗಳಿಗೆ ಶುಕ್ರವಾರ ಕೋರ್ಟ್‌ಗೆ ಹಾಜರಾ­ಗು­ವಂತೆ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT