ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ನಲ್ಲಿ ನುಸಿ ಗುಳಿಗೆ ನುಂಗಿದ ವಕೀಲೆ!

Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪತಿಯ ಕುಟುಂ­ಬದ ಸದಸ್ಯರಿಂದ ಅತ್ಯಾಚಾರಕ್ಕೆ ಒಳಗಾ­ಗಿ­ದ್ದಾರೆ ಎನ್ನಲಾದ ಛತ್ತೀಸ್‌ಗಡದ ವಕೀಲೆಯೊಬ್ಬರು ತಮಗೆ ನ್ಯಾಯ ಸಿಕ್ಕಿಲ್ಲ ಎಂದು ಸುಪ್ರೀಂಕೋರ್ಟ್‌ನಲ್ಲಿ ಅಳುತ್ತಾ ಕುಸಿದುಬಿದ್ದ ಘಟನೆ ನಡೆದಿದೆ.

ಮುಖ್ಯ ನ್ಯಾಯಮೂರ್ತಿ ಆರ್. ಎಂ­ ಲೋಧಾ ನೇತೃತ್ವದ ನ್ಯಾಯಪೀಠವು ದಿನದ ಕಲಾಪ ಮುಗಿಸಿ ಹೊರಡುತ್ತಿದ್ದ ವೇಳೆ, ಅತ್ಯಾಚಾರದ ಬಗ್ಗೆ ದೂರು ನೀಡಿದ್ದರೂ ಛತ್ತೀಸ್‌ಗಡ ಪೊಲೀಸ­ರಿಂದ ತಮಗೆ ನ್ಯಾಯ ದೊರೆತಿಲ್ಲ ಎಂದು ಅಳುತ್ತ ಮಹಿಳಾ ವಕೀಲೆ ಕುಸಿದುಬಿದ್ದರು.

ಇತರ ಮಹಿಳಾ ವಕೀಲರು ಅವರ ಬಳಿ ತೆರಳಿ ವಿಚಾರಿಸಿದಾಗ ಅವರು ನುಸಿ (ಡಾಮರು) ಗುಳಿಗೆಯನ್ನು ಸೇವಿಸಿರು­ವುದು ಗೊತ್ತಾ­ಯಿತು. ಕೂಡಲೇ ಪೊಲೀ­ಸ­ರನ್ನು ಕರೆ­ಯಿ­ಸಲಾಯಿತು. ನಂತರ ಅವರನ್ನು ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಗೆ ಸಾಗಿಸಲಾಯಿತು.

ನ್ಯಾಯಮೂರ್ತಿಗಳು ತಾವು ಸ್ವಪ್ರೇರಣೆಯಿಂದ ಮಹಿಳೆಯ ದೂರನ್ನು ಮಂಗಳವಾರ ವಿಚಾರಣೆ ನಡೆಸುವುದಾಗಿ ತಿಳಿಸಿದರು.
2013ರ ನವೆಂಬರ್‌ನಲ್ಲಿಯೇ ತಾವು ದೂರು ಸಲ್ಲಿ­ಸಿ­ದ್ದರೂ ಪೊಲೀ­ಸರು ಕ್ರಮ ತೆಗೆದು­ಕೊಳ್ಳಲಿಲ್ಲ ಎಂದು ವಕೀಲೆ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT