ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಟುಂಬಿಕ ದೌರ್ಜನ್ಯ ಪ್ರಕರಣ ಹೆಚ್ಚಳ ಶಿಕ್ಷೆ ಪ್ರಮಾಣ ಇಳಿಕೆ

Last Updated 7 ಜುಲೈ 2014, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌ (ಪಿಟಿಐ): ಗುಜರಾತ್‌ನಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಶಿಕ್ಷೆಯ ಪ್ರಮಾಣ ಮಾತ್ರ ರಾಷ್ಟ್ರೀಯ ಸರಾಸರಿ ಮಟ್ಟಕ್ಕಿಂತಲೂ ತುಂಬಾ ಇಳಿಮುಖ­ವಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ದಳ ( ಎನ್‌ಸಿಆರ್‌ಬಿ) ತಿಳಿಸಿದೆ.

ಈ ವರ್ಷ ರಾಜ್ಯದಲ್ಲಿ ದಾಖಲಾದ ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ 7812. ಶಿಕ್ಷೆಯ ಪ್ರಮಾಣ ಮಾತ್ರ ಶೇ 2.30. ಕಳೆದ ವರ್ಷ 1154 ಪ್ರಕರಣಗಳು ದಾಖ­ಲಾಗಿದ್ದವು.

ಕೌಟುಂಬಿಕ ದೌರ್ಜನ್ಯ ಪ್ರಕರಣ­ಗಳಲ್ಲಿ ಗುಜರಾತ್‌ ವಿವಿಧ ರಾಜ್ಯಗಳ ಪೈಕಿ ಏಳನೇ ಸ್ಥಾನದಲ್ಲಿದೆ. ಶಿಕ್ಷೆಯ ಪ್ರಮಾಣವನ್ನು ತೆಗೆದುಕೊಂಡರೆ 25ನೇ ಸ್ಥಾನದಲ್ಲಿದೆ. 2013ರಲ್ಲಿ ದಾಖ­ಲಾದ ಪ್ರಕರಣಗಳ ಪ್ರಮಾಣ ಶೇ 17.3ರಷ್ಟು ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT