ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಂಪಕೋಲಾ: ನೀರು ವಿದ್ಯುತ್‌ ಪೂರೈಕೆ ಸ್ಥಗಿತದ ಎಚ್ಚರಿಕೆ

Last Updated 22 ಜೂನ್ 2014, 11:16 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ದಕ್ಷಿಣ ಮುಂಬೈನ ಕ್ಯಾಂಪಕೋಲಾ ವಸತಿ ಸಮುಚ್ಚಯಾದ ನಿವಾಸಿಗಳ ಪ್ರತಿಭಟನೆ ಮೂರನೇ ದಿನಕ್ಕೆ ಮುಂದುವರೆದಿದ್ದು ನೀರು ಮತ್ತು ವಿದ್ಯುತ್‌ ಪೂರೈಕ್ಕೆ ಸ್ಥಗಿತಗೊಳಿಸುವುದಾಗಿ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಭಾನುವಾರ ಎಚ್ಚರಿಕೆ ನೀಡಿದ್ದಾರೆ.

ಕ್ಯಾಂಪಕೋಲಾದಲ್ಲಿ 99 ಅಕ್ರಮ ಪ್ಲಾಟ್‌ಗಳನ್ನು ಕೆಡವಲು ಪಾಲಿಕೆ ಮುಂದಾಗಿದೆ. ಇದನ್ನು ವಿರೋಧಿಸಿ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ನಡುವೆ ಅಕ್ರಮ ಪ್ಲಾಟ್‌ಗಳನ್ನು ಸಕ್ರಮ ಮಾಡುವಂತೆ ನಿವಾಸಿಗಳು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರಿಗೆ ಪತ್ರ ಬರೆದಿದ್ದಾರೆ.
ಅಕ್ರಮವಾಗಿ ಕಟ್ಟಿರುವ 99 ಪ್ಲಾಟ್‌ಗಳನ್ನು ಕೆಡವಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ.   ಈ ತೀರ್ಪಿನಿಂದ ನೂರು ಕುಟುಂಬಗಳು ಬೀದಿಗೆ ಬರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT