ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್‌ ಹಾದಿಯಲ್ಲಿ...

Last Updated 19 ಮೇ 2015, 19:30 IST
ಅಕ್ಷರ ಗಾತ್ರ

ನಟಿ, ಗಾಯಕಿ, ಮಾಜಿ ಫೆಮಿನಾ ಮಿಸ್‌ ಇಂಡಿಯಾ ಪ್ರಶಸ್ತಿ ವಿಜೇತೆ ಸಾರಾ ಜೇನ್‌ ಡಯಾಸ್‌ ಇದೇ ಮೊದಲ ಬಾರಿಗೆ ಕ್ಯಾನ್ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪಾಲ್ಗೊಳ್ಳುವ ತಯಾರಿಯಲ್ಲಿದ್ದಾರೆ. ಸಾರಾ ತಮ್ಮ ಮುಂದಿನ ಚಿತ್ರ  ‘ಜುಬಾನ್‌’  ತಂಡದೊಂದಿಗೆ ಹೊರಡುವ ಯೋಚನೆಯಲ್ಲಿದ್ದು,  ಪ್ರಯಾಣವನ್ನು ಖುಷಿಖುಷಿಯಾಗಿ ಅನುಭವಿಸಬೇಕೆಂದುಕೊಂಡಿದ್ದಾರಂತೆ.

‘ಇದೇ ಮೊದಲ ಬಾರಿಗೆ ಕ್ಯಾನ್‌ ಸಿನಿಮೋತ್ಸವದಲ್ಲಿ ಭಾಗವಹಿಸಲಿದ್ದೇನೆ. ಈ ಪ್ರಯಾಣ ತುಂಬಾ ಖುಷಿ ನೀಡಲಿದ್ದು, ಸಿನಿಮೋತ್ಸವದಲ್ಲಿ ಚಿತ್ರೀಕರಣ ಮಾಡುವ ತವಕದಲ್ಲಿದ್ದೇವೆ. ಆ ದಿನಕ್ಕಾಗಿ ಖುಷಿಯಿಂದ ಎದುರುನೋಡುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ ಸಾರಾ. ನಿರ್ಮಾಪಕರಾದ ಗುನೀತ್‌ ಮೊಂಗಾ, ನಿರ್ದೇಶಕ ಮೊಜೆಜ್‌ ಸಿಂಗ್‌, ನಟ ವಿಕ್ಕಿ ಕೌಶಲ್‌ ಜೊತೆ ಸಾರಾ ತೆರಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT