ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಾಂತಿಯ ನಿರೀಕ್ಷೆಯಲ್ಲಿ ಪ್ರಿಯಾಂಕಾ ಚೋಪ್ರಾ

Last Updated 22 ಮೇ 2015, 19:30 IST
ಅಕ್ಷರ ಗಾತ್ರ

ಬಾಲಿವುಡ್‌ನಲ್ಲಿ ಮಹಿಳಾ ಪ್ರಧಾನ ಕಥೆ ಹೊಂದಿರುವ ಸಾಲು ಸಾಲು ಚಿತ್ರಗಳು ತೆರೆಗೆ ಬರುತ್ತಿರುವುದು ನಟಿ ಪ್ರಿಯಾಂಕಾ ಚೋಪ್ರಾ ಅವರ ಸಂತಸಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಮುಂಬೈನಲ್ಲಿ ಅನುಷ್ಕಾ ಶರ್ಮಾ ನಟಿಸಿರುವ ‘ಎನ್‌ಎಚ್‌ 10’ ಚಿತ್ರವನ್ನು ವೀಕ್ಷಿಸಿದ ಪ್ರಿಯಾಂಕಾ ಅವರು, ದೀಪಿಕಾ ಪಡುಕೋಣೆ ನಟಿಸಿದ ‘ಪೀಕು’ ಮತ್ತು ಕಂಗನಾ ಅವರ ‘ತನು ವೆಡ್ಸ್‌ ಮನು ರಿಟರ್ನ್ಸ್‌’ ಸಿನಿಮಾಗಳನ್ನೂ ನೋಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

‘ಇಂದು ಇಂಥ ಒಳ್ಳೊಳ್ಳೆ ಕಥೆಗಳಿರುವ ಸಿನಿಮಾಗಳಲ್ಲಿ ನಟಿಯರು ಪ್ರದಾನ ಪಾತ್ರ ವಹಿಸುತ್ತಿರುವುದನ್ನು ನೋಡಿದರೆ ತುಂಬ ಖುಷಿಯಾಗುತ್ತದೆ. ಮೊದಲೆಲ್ಲ ಜನರಿಗೆ ನಮ್ಮ ಸಾಮರ್ಥ್ಯದ ಬಗೆಗೆ ನಂಬಿಕೆಯೇ ಇರಲಿಲ್ಲ. ನಾವು ಯಾವತ್ತೂ ಎರಡನೇ ಸ್ಥಾನದಲ್ಲಿಯೇ ಇರುತ್ತಿದ್ದೆವು. ನಾನು ‘ಫ್ಯಾಷನ್‌’ ಸಿನಿಮಾ ಮಾಡಿದಾಗ ಹಲವರು ಗೇಲಿಮಾಡಿದ್ದರು. ಈ ಸಿನಿಮಾ ನಿನ್ನ ವೃತ್ತಿಬದುಕನ್ನು ಹಾಳು ಮಾಡುತ್ತದೆ ಎಂದು ಎಚ್ಚರಿಸಿದ್ದರು. ಆದರೆ ಈಗ ನೋಡಿ! ಈ ವಿದ್ಯಮಾನ ಅತಿ ಶೀಘ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆಯಾಗಿ ಬದಲಾಗುತ್ತದೆ’ ಎಂದು ವಿಶ್ವಾಸದ ಮಾತುಗಳನ್ನು ಆಡಿದ್ದಾರೆ ಪ್ರಿಯಾಂಕಾ.

‘ಪ್ರೌಡ್‌ ಫೀಮೇಲ್‌’ ಎಂದು ಟ್ವೀಟ್‌ ಮಾಡಿರುವ ಪ್ರಿಯಾಂಕಾ ‘ಎನ್ಎಚ್‌ 10’ ಚಿತ್ರಕ್ಕಾಗಿ ಅನುಷ್ಕಾ ಶರ್ಮಾ ಅವರನ್ನೂ ಮುಕ್ತವಾಗಿ ಹೊಗಳಿದ್ದಾರೆ.

ನಟಿ, ನಿರ್ಮಾಪಕಿ, ಗಾಯಕಿಯಾಗಿಯೂ ಹಿಂದಿ ಚಿತ್ರರಂಗದಲ್ಲಿ ಬಹುಬೇಡಿಕೆಯಲ್ಲಿರುವ ಪ್ರಿಯಾಂಕಾ ಸದ್ಯಕ್ಕೆ ‘ದಿಲ್‌ ಧಡಕ್‌ನೆ ದೋ’ ಮತ್ತು ‘ಗಂಗಾಜಲ್‌ 2’ ಚಿತ್ರಗಳಿಗೆ ಹೇಗೆ ಪ್ರತಿಕ್ರಿಯೆ ಸಿಕ್ಕೀತು ಎಂಬ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ವಾರ ‘ದಿಲ್‌ ಧಡಕ್‌ನೆ ದೋ’ ಸಿನಿಮಾ ತೆರೆಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT