ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್:ಕಿವೀಸ್‌ಜಯಭೇರಿ

ವಿಲಿಯಮ್ಸನ್‌ ದಾಳಿಗೆ ಪರದಾಡಿದ ಇಂಗ್ಲೆಂಡ್‌
Last Updated 2 ಜೂನ್ 2015, 19:30 IST
ಅಕ್ಷರ ಗಾತ್ರ

ಲೀಡ್ಸ್‌ (ಎಎಫ್‌ಪಿ): ಕೊನೆಯ ದಿನದಾಟದಲ್ಲಿ ಚುರುಕಿನ ಬೌಲಿಂಗ್‌ ಮಾಡಿದ ನ್ಯೂಜಿಲೆಂಡ್ ತಂಡ ಇಲ್ಲಿ ನಡೆದ ಇಂಗ್ಲೆಂಡ್‌ ಎದುರಿನ ಎರಡನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ 199 ರನ್‌ಗಳ ಗೆಲುವು ಪಡೆಯಿತು. ಈ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ 1–1ರಲ್ಲಿ ಸಮಬಲ ಸಾಧಿಸಿತು.

ವಾಟ್ಲಿಂಗ್ ಶತಕದ ಬಲದಿಂದ ನ್ಯೂಜಿಲೆಂಡ್‌ ಎರಡನೇ ಇನಿಂಗ್ಸ್‌ನಲ್ಲಿ 454 ರನ್‌ ಕಲೆ ಹಾಕಿತ್ತು. ಆದ್ದರಿಂದ ಎದುರಾಳಿ ತಂಡ ಜಯಕ್ಕೆ 455 ರನ್‌ ಗುರಿ ಗಳಿಸಬೇಕಿತ್ತು. ಸೋಮವಾರದ ಆಟಕ್ಕೆ ಮಳೆ ಅಡ್ಡಿಯಾಗಿದ್ದರಿಂದ ಪೂರ್ಣ ದಿನದಾಟ ನಡೆದಿರಲಿಲ್ಲ. ಸವಾಲಿನ ಗುರಿಗೆ ಪ್ರತಿಯಾಗಿ ಆಂಗ್ಲರ ತಂಡ ನಾಲ್ಕನೇ ದಿನದಾಟದ ಅಂತ್ಯಕ್ಕೆ 13 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 44 ರನ್‌ ಗಳಿಸಿತ್ತು.

ಆದರೆ, ಕೊನೆಯ ದಿನ ಮಾರ್ಕ್‌ ಕ್ರಾಗ್‌ (3ಕ್ಕೆ73), ಕೇನ್ ವಿಲಿಯಮ್ಸನ್‌ (3ಕ್ಕೆ15) ಮತ್ತು ಟ್ರೆಂಟ್‌ ಬೌಲ್ಟ್‌ (2ಕ್ಕೆ61) ಚುರುಕಿನ ಬೌಲಿಂಗ್‌ ಮುಂದೆ ಆತಿಥೇಯರು ತತ್ತರಿಸಿ ಹೋದರು. ಈ ತಂಡ 255 ರನ್‌ಗೆ ಆಲೌಟ್‌ ಆಯಿತು.

ಇಂಗ್ಲೆಂಡ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ (56) ಮತ್ತು ಜಾಸ್‌ ಬಟ್ಲರ್‌ (73) ಮಾತ್ರ ತಂಡವನ್ನು ಗೆಲುವಿನ ದಡ ಸೇರಿಸಲು ಹೋರಾಟ ನಡೆಸಿದರು. ಈ ತಂಡ 102 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದ್ದರಿಂದ ತಂಡ ಪಂದ್ಯ ಡ್ರಾ ಮಾಡಿಕೊಳ್ಳಲು ಯತ್ನಿಸಿ ವಿಫಲವಾಯಿತು. ಕುಕ್‌ 217 ನಿಮಿಷ ಮತ್ತು ಬಟ್ಲರ್ 172 ನಿಮಿಷ ಕ್ರೀಸ್‌ನಲ್ಲಿದ್ದು ದಿನ ಕಳೆಯುವ ಕಸರತ್ತು ನಡೆಸಿದರಾದರೂ ಫಲ ಲಭಿಸಲಿಲ್ಲ. ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ 124 ರನ್‌ಗಳ ಗೆಲುವು ಪಡೆದಿತ್ತು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್‌ 350 ಹಾಗೂ ದ್ವಿತೀಯ ಇನಿಂಗ್ಸ್‌ 454. ನ್ಯೂಜಿಲೆಂಡ್‌ ಮೊದಲ ಇನಿಂಗ್ಸ್‌ 350 ಮತ್ತು 91.5 ಓವರ್‌ಗಳಲ್ಲಿ 255 (ಅಲಸ್ಟೇರ್‌ ಕುಕ್ 56, ಬೆನ್‌ ಸ್ಟೋಕ್ಸ್‌ 29, ಜಾಸ್‌ ಬಟ್ಲರ್ 73, ಸ್ಟುವರ್ಟ್‌ ಬ್ರಾಡ್‌ 23; ಟ್ರೆಂಟ್‌ ಬೌಲ್ಟ್‌ 2ಕ್ಕೆ61, ಮಾರ್ಕ್‌ ಕ್ರಾಗ್ 3ಕ್ಕೆ73, ಕೇನ್‌ ವಿಲಿಯಮ್ಸನ್‌ 3ಕ್ಕೆ15). ಫಲಿತಾಂಶ: ನ್ಯೂಜಿಲೆಂಡ್‌ಗೆ 199 ರನ್ ಗೆಲುವು. ಪಂದ್ಯ ಶ್ರೇಷ್ಠ: ವಾಟ್ಲಿಂಗ್‌. ಸರಣಿ ಶ್ರೇಷ್ಠ: ಟ್ರೆಂಟ್‌ ಬೌಲ್ಟ್ ಹಾಗೂ ಅಲಸ್ಟೇರ್‌ ಕುಕ್‌.

*****
ನಾನು ಗಳಿಸಿದ ಶತಕ ತಂಡದ ಗೆಲುವಿಗೆ ಕಾರಣವಾಗಿದ್ದರಿಂದ ಖುಷಿಯಾಗಿದೆ. ಮಹತ್ವದ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು
-ವಾಟ್ಲಿಂಗ್‌, ಪಂದ್ಯ ಶ್ರೇಷ್ಠ ಪಡೆದ ಕಿವೀಸ್ ಆಟಗಾರ


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT