ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಅಧ್ಯಕ್ಷರ ಇಲೆವೆನ್‌ಗೆ ಇನಿಂಗ್ಸ್‌ ಮುನ್ನಡೆ

Last Updated 18 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚುರುಕಿನ ಬೌಲಿಂಗ್ ಮೂಲಕ ಸಂಯುಕ್ತ ಇಲೆವೆನ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ ಅಧ್ಯಕ್ಷರ ಇಲೆವೆನ್ ತಂಡ ಶಫಿ ದಾರಾಶಾ ಕ್ರಿಕೆಟ್‌ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಮೊದಲ ದಿನವೇ ಇನಿಂಗ್ಸ್‌ ಮುನ್ನಡೆ ಪಡೆದುಕೊಂಡಿದೆ.

ಇಲ್ಲಿನ ಐಎಎಫ್‌ ಮೈದಾನದಲ್ಲಿ ಸೋಮವಾರ ಆರಂಭವಾದ ಎರಡು ದಿನಗಳ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಸಂಯುಕ್ತ ಇಲೆವೆನ್‌ 46.3 ಓವರ್‌ಗಳಲ್ಲಿ 111 ರನ್ ಗಳಿಸುವಷ್ಟರಲ್ಲಿ ಆಲೌಟ್‌ ಆಯಿತು. ಸುರೇಶ್‌, ಸ್ಪಿನ್ನರ್‌ಗಳಾದ ಕೆ. ಗೌತಮ್‌ ಮತ್ತು ಶ್ರೇಯಸ್‌ ಗೋಪಾಲ್‌ ತಲಾ ಮೂರು ವಿಕೆಟ್‌ ಉರುಳಿಸಿದರು.

ಅಧ್ಯಕ್ಷರ ಇಲೆವೆಲ್‌ ತಂಡ ಮೊದಲ ದಿನದಾಟದ ಅಂತ್ಯಕ್ಕೆ 48 ಓವರ್‌ಗಳಲ್ಲಿ ಆರು ವಿಕೆಟ್‌ ನಷ್ಟಕ್ಕೆ 174 ರನ್ ಗಳಿಸಿ ಮೂರು ಪಾಯಿಂಟ್ಸ್‌ ಖಚಿತಪಡಿಸಿಕೊಂಡಿದೆ. ಶ್ರೇಯಸ್‌ 123 ಎಸೆತಗಳಲ್ಲಿ 92 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. 14 ಬೌಂಡರಿಗಳನ್ನೂ ಬಾರಿಸಿದ್ದಾರೆ. ರಾಜ್ಯ ತಂಡ ಮತ್ತು ಐಪಿಎಲ್‌ನಲ್ಲಿ ಆಡಿರುವ ಶ್ರೇಯಸ್‌ ಆಟ ತಂಡದ ಮುನ್ನಡೆಗೆ ಕಾರಣವಾಯಿತು. 

ಆದಿತ್ಯ ಮೈದಾನದಲ್ಲಿ ನಡೆಯುತ್ತಿರುವ ಇನ್ನೊಂದು ಪಂದ್ಯದಲ್ಲಿ  ಉಪಾಧ್ಯಕ್ಷರ ಇಲೆವೆನ್ ತಂಡ 84  ಓವರ್‌ಗಳಲ್ಲಿ 264 ರನ್‌ ಗಳಿಸಿದೆ.

ಸಂಕ್ಷಿಪ್ತ ಸ್ಕೋರು
ಐಎಎಫ್‌ ಮೈದಾನ: ಸಂಯುಕ್ತ ಇಲೆವೆನ್‌ 46.3 ಓವರ್‌ಗಳಲ್ಲಿ 111 (ಕೆ.ವಿ. ಸಿದ್ಧಾರ್ಥ್‌ 50; ಸುರೇಶ್ ಎಚ್‌. ಕರಣಿ 3ಕ್ಕೆ25, ಕೆ. ಗೌತಮ್‌ 3ಕ್ಕೆ16, ಶ್ರೇಯಸ್‌ ಗೋಪಾಲ್‌ 3ಕ್ಕೆ35). ಅಧ್ಯಕ್ಷರ ಇಲೆವೆನ್‌ 48 ಓವರ್‌ಗಳಲ್ಲಿ 6 ವಿಕೆಟ್‌ಗೆ 176 (ಮೀರ್‌ ಕೌನೇನ್‌ ಅಬ್ಬಾಸ್ 27, ಶ್ರೇಯಸ್ ಗೋಪಾಲ್‌ ಬ್ಯಾಟಿಂಗ್‌ 92, ಶರತ್‌ ಶ್ರೀನಿವಾಸ್‌ ಬ್ಯಾಟಿಂಗ್‌ 37; ಅಭಿಮನ್ಯು ಮಿಥುನ್‌ 6ಕ್ಕೆ24).

ಆದಿತ್ಯ ಮೈದಾನ: ಉಪಾಧ್ಯಕ್ಷರ ಇಲೆವೆನ್‌ 84  ಓವರ್‌ಗಳಲ್ಲಿ 264 (ಆರ್‌. ಪ್ರತೀಕ್ಷ್‌ 89,  ಪವನ್‌ ದೇಶಪಾಂಡೆ 31, ಜಿ.ಎಸ್‌. ಚಿರಂಜೀವಿ 62, ಲಿಖಿತ್‌ ಬನ್ನೂರು ಔಟಾಗದೆ 20; ಆದಿತ್ಯ ಸೋಮಣ್ಣ 3ಕ್ಕೆ49, ಸತೀಶ್ ಭಾರದ್ವಾಜ್ 2ಕ್ಕೆ60). ಬೆಂಗಳೂರು ವಲಯ 13.1 ಓವರ್‌ಗಳಲ್ಲಿ 2 ವಿಕೆಟ್‌ಗೆ 46 (ಮಯಂಕ್‌ ಅಗರವಾಲ್‌ ಬ್ಯಾಟಿಂಗ್ 21, ಲಿಯಾನ್‌ ಖಾನ್‌ 22; ಲಿಖಿತ್‌ ಬನ್ನೂರ 1ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT