ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಆಸ್ಟ್ರೇಲಿಯಾ ಮರು ಹೋರಾಟ

ಎರಡನೇ ದಿನ ಭಾರತ ದಿಢೀರ್‌ ಕುಸಿತ, ಪದಾರ್ಪಣೆ ಪಂದ್ಯದಲ್ಲಿ ಹಜ್ಲೆವುಡ್‌ಗೆ ಐದು ವಿಕೆಟ್‌
Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಬ್ರಿಸ್ಬೇನ್‌: ಆರಂಭದಲ್ಲಿಯೇ ವಿಕೆಟ್‌ ಕಳೆದುಕೊಂಡು ಪರದಾಡಿದ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್‌ ರೋಜರ್ಸ್‌ ಮತ್ತು ನಾಯಕ ಸ್ಪೀವನ್‌ ಸ್ಮಿತ್‌ ಆಸರೆಯಾದರು. ಇದರಿಂದ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಮರು ಹೋರಾಟ ನಡೆಸುತ್ತಿದೆ.

ಮಹೇಂದ್ರ ಸಿಂಗ್‌ ದೋನಿ ನಾಯಕತ್ವದ ಪ್ರವಾಸಿ ತಂಡ ಮೊದಲ ಇನಿಂಗ್ಸ್‌ನಲ್ಲಿ 109.4 ಓವರ್‌ಗಳಲ್ಲಿ 408 ರನ್‌ ಕಲೆ ಹಾಕಿತ್ತು. ಮೊದಲ ದಿನದಾಟದಲ್ಲಿ 311 ರನ್‌ ಗಳಿಸಿದ್ದ ದೋನಿ ಪಡೆ ಗುರುವಾರ 97 ರನ್ ಕಲೆ ಹಾಕುವಷ್ಟರಲ್ಲಿ ಐದು ವಿಕೆಟ್‌ ಕಳೆದುಕೊಂಡು ದಿಢೀರ್‌ ಕುಸಿತ ಅನುಭವಿಸಿತು. ಇನಿಂಗ್ಸ್‌ ಆರಂಭಿಸಿರುವ ಆತಿಥೇಯರು ಎರಡನೇ ದಿನದಾಟದ ಅಂತ್ಯಕ್ಕೆ 52 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ 221 ರನ್‌ ಗಳಿಸಿದ್ದಾರೆ. ಇನಿಂಗ್ಸ್‌ ಮುನ್ನಡೆ ಪಡೆಯಬೇಕಾದರೆ 187 ರನ್‌ ಅಗತ್ಯವಿದೆ.

ದಿಢೀರ್‌ ಕುಸಿತ: ಆರಂಭಿಕ ಬ್ಯಾಟ್ಸ್‌ಮನ್‌ ಮುರಳಿ ವಿಜಯ್‌ ಶತಕದ ನೆರವಿನಿಂದ ಭಾರತ ಬುಧವಾರ ಉತ್ತಮ ಪ್ರದರ್ಶನ ತೋರಿತ್ತು. ಆದರೆ, ಎರಡನೇ ದಿನ ವೇಗಿ ಜೋಶ್‌ ಹಜ್ಲೆವುಡ್‌ ದಾಳಿಯ ಮುಂದೆ ಪರದಾಡಿತು.

65 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದ ಅಜಿಂಕ್ಯ ರಹಾನೆ ದಿನದಾಟದ ಮೂರನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಒಟ್ಟು 132

ಶೇನ್‌ ವಾಟ್ಸನ್‌ 100ನೇ ಇನಿಂಗ್ಸ್‌
2005ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಶೇನ್‌ ವಾಟ್ಸನ್‌ 100ನೇ ಇನಿಂಗ್ಸ್ ಆಡಿದ ಸಾಧನೆಗೆ ಪಾತ್ರರಾದರು. ಟೆಸ್ಟ್‌ನಲ್ಲಿ ಒಟ್ಟು 100 ಇನಿಂಗ್ಸ್‌ ಆಡಿದ ಆಸ್ಟ್ರೇಲಿಯಾದ 29ನೇ ಆಟಗಾರ ಎನಿಸಿಕೊಂಡರು.
ಮಾಜಿ ನಾಯಕ ರಿಕಿ ಪಾಂಟಿಂಗ್‌ (287 ಇನಿಂಗ್ಸ್‌), ಅಲನ್‌ ಬಾರ್ಡರ್‌ (267) ಮತ್ತು ಸ್ಟೀವ್‌ ವಾ (260) ಹೆಚ್ಚು ಇನಿಂಗ್ಸ್‌ಗಳಲ್ಲಿ ಆಡಿದ ಆಸ್ಟ್ರೇಲಿಯಾದ ಮೊದಲ ಮೂವರು ಬ್ಯಾಟ್ಸ್‌ಮನ್‌ಗಳು.

36 ವರ್ಷಗಳ ಬಳಿಕ 50ಕ್ಕಿಂತ ಹೆಚ್ಚು ರನ್‌
ಆಸ್ಟ್ರೇಲಿಯಾದ ಆಟಗಾರ ರೊಬ್ಬರು ಟೆಸ್ಟ್ ತಂಡದ ನಾಯಕ ರಾದ ಮೊದಲ ಪಂದ್ಯದಲ್ಲೇ ಅರ್ಧಶತಕಕ್ಕಿಂತಲೂ ಹೆಚ್ಚು ರನ್‌ ಗಳಿಸಿದ್ದು 36 ವರ್ಷಗಳ ಬಳಿಕ ಇದೇ ಮೊದಲು. 1978ರಲ್ಲಿ ಬ್ರಿಸ್ಬೇನ್‌ನಲ್ಲಿಯೇ ನಡೆದ ಪಂದ್ಯದಲ್ಲಿ ಗ್ರಹಾಮ್‌ ಎಲೊಪ್ (102) ಈ ಸಾಧನೆ ಮಾಡಿದ್ದರು. ಮೈಕಲ್‌ ಕ್ಲಾರ್ಕ್‌ ಗಾಯಗೊಂಡಿರುವ ಕಾರಣ ಸ್ಮಿತ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಮೂರನೇ ಬೌಲರ್‌
ಭಾರತ ವಿರುದ್ಧದ ಟೆಸ್ಟ್‌ನಲ್ಲಿ ಐದು ವಿಕೆಟ್‌ ಪಡೆದ ಆಸ್ಟ್ರೇಲಿಯಾದ ಮೂರನೇ ಬೌಲರ್‌ ಎನ್ನುವ ಕೀರ್ತಿಯನ್ನು ಹಜ್ಲೆವುಡ್‌ ಪಡೆದರು. 1999ರಲ್ಲಿ ಬ್ರೆಟ್‌ ಲೀ (47ಕ್ಕೆ5) ಮತ್ತು 2008ರಲ್ಲಿ ಜಾಸನ್‌ ಕ್ರೇಜಾ (215ಕ್ಕೆ8) ಈ ಸಾಧನೆ ಮಾಡಿದ್ದರು. ಹಜ್ಲೆವುಡ್‌ (68ಕ್ಕೆ5) ವಿಕೆಟ್‌ ಪಡೆದಿದ್ದಾರೆ.

ಎಸೆತಗಳನ್ನು ಎದುರಿಸಿದ ರಹಾನೆ ಎಂಟು ಬೌಂಡರಿ ಸೇರಿದಂತೆ 81 ರನ್‌ ಕಲೆ ಹಾಕಿದರು. ಇನ್ನೊಬ್ಬ ಬ್ಯಾಟ್ಸ್‌ಮನ್ ರೋಹಿತ್‌ ಶರ್ಮ (32, 55ಎಸೆತ, 3 ಬೌಂಡರಿ, 1 ಸಿಕ್ಸರ್‌) ಬೇಗನೆ ಪೆವಿಲಿಯನ್ ಸೇರಿದರು.

ಸವಾಲಿನ ಮೊತ್ತ ಕಲೆ ಹಾಕುವ ಗುರಿ ಹೊಂದಿದ್ದ ದೋನಿ ಏಳನೇ ವಿಕೆಟ್‌ಗೆ ಆರ್‌. ಅಶ್ವಿನ್‌ ಜೊತೆ ಕೊಂಚ ತಾಳ್ಮೆಯ ಆಟ ತೋರಿದರು. ದೋನಿ (33) ಮತ್ತು ಅಶ್ವಿನಿ (35) ರನ್ ಗಳಿಸಿದರು. ಈ ಜೋಡಿ ಏಳನೇ ವಿಕೆಟ್‌ಗೆ 57 ರನ್‌ ಕಲೆ ಹಾಕಿದ್ದ ವೇಳೆ ಹಜ್ಲೆವುಡ್‌ ಮತ್ತೆ ಪ್ರಾಬಲ್ಯ ಮೆರೆದರು. 103ನೇ ಓವರ್‌ನ ಮೂರನೇ ಎಸೆತವನ್ನು ಅಶ್ವಿನ್‌ ಥರ್ಡ್‌ ಮ್ಯಾನ್‌ ಬಳಿ ಬಾರಿಸಲು ಯತ್ನಿಸಿ ಎರಡನೇ ಸ್ಲೀಪ್‌ನಲ್ಲಿದ್ದ ಶೇನ್‌ ವಾಟ್ಸನ್‌ ಕೈಗೆ ಕ್ಯಾಚ್‌ ನೀಡಿದರು. ದೋನಿ ಕೂಡಾ ಇದೇ ಬೌಲರ್ ಎಸೆತದಲ್ಲಿ ಪೆವಿಲಿಯನ್‌ ಸೇರಿದರು.

ಎಂಟು ವಿಕೆಟ್‌ಗಳು ಪತನವಾದಾಗ ಭಾರತ 394 ರನ್‌ ಗಳಿಸಿತ್ತು. ವರುಣ್‌ ಆ್ಯರನ್ (4). ಉಮೇಶ್‌ ಯಾದವ್ (9) ಮತ್ತು ಇಶಾಂತ್‌ ಶರ್ಮ (ಔಟಾಗದೆ 1) ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲು ಕಾಂಗರೂ ಪಡೆಯ ಬೌಲರ್‌ಗಳು ಅವಕಾಶ ನೀಡಲಿಲ್ಲ.

ಮಿಂಚಿದ ಹಜ್ಲೆವುಡ್‌: ದಿನದಾಟದ ಮೊದಲ ಅವಧಿಯಲ್ಲಿ ಆತಿಥೇಯರು ಬಿಗುವಿನ ದಾಳಿ ನಡೆಸಿದರು. ಚೊಚ್ಚಲ ಟೆಸ್ಟ್‌ ಆಡುತ್ತಿರುವ ಹಜ್ಲೆವುಡ್‌ ಅವರ ಕರಾರುವಾಕ್ಕಾದ ಬೌಲಿಂಗ್‌ ಎದುರಿಸಿ ನಿಲ್ಲಲು ಪ್ರವಾಸಿ ಆಟಗಾರರಿಗೆ ಸಾಧ್ಯವಾಗಿಲಿಲ್ಲ. ಮೊದಲ ದಿನ ಎರಡು ವಿಕೆಟ್‌ ಪಡೆದಿದ್ದ ಬಲಗೈ ವೇಗಿ ಹಜ್ಲೆವುಡ್‌ ಗುರುವಾರ  ಮೂರು ವಿಕೆಟ್‌ ಕಬಳಿಸಿದರು.

ಹಜ್ಲೆವುಡ್‌ 2010ರಲ್ಲಿ ಏಕದಿನ ಮಾದರಿಯ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ, ಟೆಸ್ಟ್ ತಂಡದಲ್ಲಿ ಸ್ಥಾನ ಲಭಿಸಿರಲಿಲ್ಲ. ಮೊದಲ ಸಲ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು. ಪದಾರ್ಪಣೆ ಪಂದ್ಯದಲ್ಲಿ ಐದು ವಿಕೆಟ್‌ ಪಡೆದ ಆಸ್ಟ್ರೇಲಿಯಾದ 33ನೇ ಬೌಲರ್‌ ಎನಿಸಿದರು.
 

‘ಏಕದಿನ ಮಾದರಿ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ ಬದುಕು ಆರಂಭವಾಯಿತು. ಆದರೆ, ಟೆಸ್ಟ್‌ ತಂಡದಲ್ಲಿ ಸ್ಥಾನ ಗಳಿಸಬೇಕೆನ್ನುವುದು ದೊಡ್ಡ ಕನಸಾಗಿತ್ತು. ಮೊದಲ ಟೆಸ್ಟ್‌ನಲ್ಲಿ ತೋರಿದ ನನ್ನ ಪ್ರದರ್ಶನ ಅತೀವ ಖುಷಿ ನೀಡಿದೆ’
–ಜೋಶ್‌ ಹಜ್ಲೆವುಡ್‌

ಮೂರು ವರ್ಷಗಳ ಬಳಿಕ ಆಸ್ಟ್ರೇಲಿಯಾದ ಬೌಲರ್‌ವೊಬ್ಬರ ಪದಾರ್ಪಣೆ ಟೆಸ್ಟ್‌ನಲ್ಲಿ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. 2011ರಲ್ಲಿ ಇದೇ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ ಎದುರು ಜೇಮ್ಸ್ ಪ್ಯಾಟಿನ್ಸನ್‌ (27ಕ್ಕೆ5) ಹಿಂದೆ ಈ ಸಾಧನೆ ಮಾಡಿದರು.

ನೆರವಾದ ರೋಜರ್ಸ್‌–ಸ್ಮಿತ್‌: ಎರಡನೇ ದಿನದಾಟದಲ್ಲಿ ಭಾರತವನ್ನು ಬೇಗನೆ ಕಟ್ಟಿಹಾಕಿದ ಖುಷಿಯಲ್ಲಿ ಇನಿಂಗ್ಸ್ ಆರಂಭಿಸಿದ ಆತಿಥೇಯ ತಂಡಕ್ಕೆ ಆರಂಭದಲ್ಲಿಯೇ ನಿರಾಸೆ ಎದುರಾಯಿತು.

ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿದ್ದ ಡೇವಿಡ್‌ ವಾರ್ನರ್‌ (29) ವೇಗಿ ಉಮೇಶ್‌ ಯಾದವ್ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ಶೇನ್ ವಾಟ್ಸನ್‌ (25) ಮತ್ತು ಶಾನ್‌ ಮಾರ್ಷ್‌ (32) ಅಲ್ಪ ನೆರವಾದರಾದರೂ ದೊಡ್ಡ ಮೊತ್ತವನ್ನು ಪೇರಿಸುವಲ್ಲಿ ವಿಫಲರಾದರು.

ಒಂದೆಡೆ ತಂಡ ವಿಕೆಟ್‌ ಪತನವಾಗುತ್ತಿದ್ದರೂ ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್‌ ರೋಜರ್ಸ್ ಒತ್ತಡಕ್ಕೆ ಒಳಗಾಗಲಿಲ್ಲ. 79 ಎಸೆತಗಳನ್ನು ಎದುರಿಸಿದ ಅವರು 10 ಬೌಂಡರಿ ಸೇರಿದಂತೆ 55 ರನ್‌ ಗಳಿಸಿದರು. ಟೆಸ್ಟ್ ತಂಡವನ್ನು ಮೊದಲ ಬಾರಿಗೆ ಮುನ್ನಡೆಸುತ್ತಿರುವ ಸ್ಟೀವನ್‌ ಸ್ಮಿತ್‌ ಅರ್ಧಶತಕ ಗಳಿಸಿ ರೋಜರ್ಸ್‌ಗೆ ಉತ್ತಮ ಬೆಂಬಲ ನೀಡಿದರು.

ಅಡಿಲೇಡ್‌ ಟೆಸ್ಟ್‌ನಲ್ಲಿ ಒಂದು ಶತಕ ಮತ್ತು ಅರ್ಧಶತಕ ಗಳಿಸಿದ್ದ ಸ್ಮಿತ್‌ ಇಲ್ಲಿಯೂ ಜವಾಬ್ದಾರಿಯುತ ಆಟ ತೋರಿದರು. 88 ಎಸೆತಗಳನ್ನು ಎದುರಿಸಿರುವ ಬಲಗೈ ಬ್ಯಾಟ್ಸ್‌ಮನ್‌ ಸ್ಮಿತ್‌ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ ಸೇರಿದಂತೆ 65 ರನ್ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಟೆಸ್ಟ್‌ನಲ್ಲಿ ಇವರು ಗಳಿಸಿದ 10ನೇ ಅರ್ಧಶತಕವಿದು.

ಮಿಂಚಿದ ವೇಗಿಗಳು: ಬ್ರಿಸ್ಬೇನ್‌ ಅಂಗಳದ ಪಿಚ್‌ನಲ್ಲಿ ಎರಡನೇ ದಿನ ಎರಡೂ ತಂಡಗಳ ವೇಗದ ಬೌಲರ್‌ಗಳು ಪ್ರಾಬಲ್ಯ ಮೆರೆದರು.
ಗುರುವಾರ ಒಟ್ಟು ಒಂಬತ್ತು ವಿಕೆಟ್‌ಗಳು ಪತನವಾದವು. ಅದರಲ್ಲಿ ವೇಗಿಗಳೇ ಏಳು ವಿಕೆಟ್‌ ಉರುಳಿಸಿದರು. ಹಜ್ಲೆವುಡ್‌ (3), ಶೇನ್‌ ವಾಟ್ಸನ್‌ (1) ಮತ್ತು ಬಲಗೈ ವೇಗಿ ಯಾದವ್‌ (3) ಪಡೆದರು. ಮಂದ ಬೆಳಕಿನ ಕಾರಣ ದಿನದಾಟದ ಓವರ್‌ಗಳು ಪೂರ್ಣಗೊಳ್ಳುವ ಮುನ್ನವೇ ಆಟಕ್ಕೆ ತೆರೆ ಬಿತ್ತು.

ಎರಡು ವರ್ಷಗಳ ಬಳಿಕ ಟೆಸ್ಟ್‌ ಆಡುತ್ತಿರುವ ಉಮೇಶ್ ಪ್ರಮುಖ ಮೂವರು ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದರು. ಮಹಾರಾಷ್ಟ್ರದ ವೇಗಿ 2012ರಲ್ಲಿ ಅಹಮದಾಬಾದ್‌ನಲ್ಲಿ ಇಂಗ್ಲೆಂಡ್‌ ಎದುರು ಕೊನೆಯ ಟೆಸ್ಟ್‌ ಆಡಿದ್ದರು.

ಸ್ಕೋರ್ ವಿವರ

ಭಾರತ ಮೊದಲ ಇನಿಂಗ್ಸ್‌ 109.4 ಓವರ್‌ಗಳಲ್ಲಿ 408
(ಬುಧವಾರದ ಅಂತ್ಯಕ್ಕೆ 83 ಓವರ್‌ಗಳಲ್ಲಿ 311ಕ್ಕೆ4)
ಅಜಿಂಕ್ಯ ರಹಾನೆ ಸಿ. ಬ್ರಾಡ್‌ ಹಡಿನ್‌ ಬಿ. ಹಜ್ಲೆವುಡ್  81
ರೋಹಿತ್‌ ಶರ್ಮ ಸಿ. ಸ್ಟೀವನ್‌ ಸ್ಮಿತ್‌ ಬಿ. ಶೇನ್‌ ವಾಟ್ಸನ್‌ 32
ಎಂ.ಎಸ್‌. ದೋನಿ ಸಿ. ಬ್ರಾಡ್‌ ಹಡಿನ್ ಬಿ. ಹಜ್ಲೆವುಡ್‌  33
ಆರ್‌. ಅಶ್ವಿನ್ ಸಿ. ಶೇನ್‌ ವಾಟ್ಸನ್‌ ಬಿ. ಜೋಶ್ ಹಜ್ಲೆವುಡ್‌ 35
ಉಮೇಶ್‌ ಯಾದವ್ ಸಿ. ರೋಜರ್ಸ್‌ ಬಿ. ಲೊಯೊನ್  09
ಆ್ಯರನ್‌ ಸಿ. ಮರ್ನಾಸ್‌ (ಬದಲಿ ಆಟಗಾರ) ಬಿ. ಲಿಯೊನ್‌ 04
ಇಶಾಂತ್‌ ಶರ್ಮ ಔಟಾಗದೆ  01
ಇತರೆ: (ಬೈ-4, ಲೆಗ್‌ ಬೈ-1, ವೈಡ್‌-2, ನೋ ಬಾಲ್‌-1)  08
ವಿಕೆಟ್‌ ಪತನ: 5-321 (ರಹಾನೆ; 85.4), 6-328 (ರೋಹಿತ್‌; 91.2), 7-385 (ಅಶ್ವಿನ್; 102.3), 8-394 (ದೋನಿ; 104.2), 9-407 (ವರುಣ್‌; 107.6), 10-408 (ಯಾದವ್; 109.4)
ಬೌಲಿಂಗ್: ಮಿಷೆಲ್‌ ಜಾನ್ಸನ್‌ 21-4-81-0, ಜೋಶ್‌ ಹಜ್ಲೆವುಡ್‌ 23.2-6-68-5, ಮಿಷೆಲ್‌ ಸ್ಟಾರ್ಕ್‌ 17-1-83-0, ಮಿಷೆಲ್‌ ಮಾರ್ಷ್‌ 6-1-14-1, ನಥಾನ್‌ ಲಿಯೊನ್‌ 25.4-2-105-3, ಶೇನ್‌ ವಾಟ್ಸನ್‌ 14.4-6-39-1, ಡೇವಿಡ್‌ ವಾರ್ನರ್‌ 1-0-9-0, ಸ್ಟೀವನ್‌ ಸ್ಮಿತ್‌ 1-0-4-0.

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ 52 ಓವರ್‌ಗಳಲ್ಲಿ 221ಕ್ಕೆ4
ಕ್ರಿಸ್‌ ರೋಜರ್ಸ್‌ ಸಿ. ದೋನಿ ಬಿ. ಉಮೇಶ್‌ ಯಾದವ್  55
ಡೇವಿಡ್‌ ವಾರ್ನರ್‌ ಸಿ. ಅಶ್ವಿನ್ ಬಿ. ಉಮೇಶ್‌ ಯಾದವ್ 29
ಶೇನ್‌ ವಾಟ್ಸನ್‌ ಸಿ. ಶಿಖರ್‌ ಧವನ್‌ ಬಿ. ಅಶ್ವಿನ್‌  25
ಸ್ಟೀವನ್ ಸ್ಮಿತ್‌ ಬ್ಯಾಟಿಂಗ್‌  65
ಶಾನ್‌ ಮಾರ್ಷ್‌ ಸಿ. ಅಶ್ವಿನ್ ಬಿ. ಉಮೇಶ್ ಯಾದವ್‌  32
ಮಿಷೆಲ್ ಮಾರ್ಷ್‌ ಬ್ಯಾಟಿಂಗ್‌ 07
ಇತರೆ: (ಲೆಗ್‌ ಬೈ-1, ವೈಡ್‌-3, ನೋ ಬಾಲ್-4)  08
ವಿಕೆಟ್ ಪತನ: 1-47 (ವಾರ್ನರ್; 8.3), 2-98 (ವಾಟ್ಸನ್; 19.4), 3-121 (ರೋಜರ್ಸ್; 24.5), 4-208 (ಶಾನ್‌ ಮಾರ್ಷ್‌; 46.5).
ಬೌಲಿಂಗ್: ಇಶಾಂತ್‌ ಶರ್ಮ 9-0-47-0, ವರುಣ್ ಆ್ಯರನ್ 12-1-59-0, ಉಮೇಶ್‌ ಯಾದವ್‌ 13-2-48-3, ರವಿಚಂದ್ರನ್‌ ಅಶ್ವಿನ್‌ 18-3-66-1.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT