ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಯೇಟಿವ್ ಕಾರ್ನರ್

Last Updated 24 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೇಸಿಗೆ ಮಾಸದಲ್ಲಿ ಛೋಟು ಪೇಂಟರ್ ಸಹಯೋಗದೊಂದಿಗೆ ಫೋರಂ ವ್ಯಾಲ್ಯೂ ಮಾಲ್ ಶನಿವಾರ, ಭಾನುವಾರ (ಏ.26, ಏ.27) ‘ಕ್ರಿಯೇಟಿವ್ ಕಾರ್ನರ್’ ಎಂಬ ವಿಶೇಷ ಪ್ರದರ್ಶನವನ್ನು ಆಯೋಜಿಸಿದೆ.

ಈ ಪ್ರದರ್ಶನದ ಸಮಯದಲ್ಲಿ ಮಾಲ್‌ಗೆ ಭೇಟಿ ನೀಡುವ ಯಾವುದೇ ಗ್ರಾಹಕರು ತಮಗಿಷ್ಟವಾಗುವ ಕರಕುಶಲ ವಸ್ತು ಮಾರಾಟ/ತಯಾರಿಕೆ ಚಟುವಟಿಕೆ ನಡೆಯುವ ಸ್ಥಳಕ್ಕೆ ಭೇಟಿ ನೀಡಬಹುದು. ಗ್ರಾಹಕರು ತಮ್ಮ ಕೈಯಾರೆ ಕಲಾಕೃತಿಗಳನ್ನು ರಚಿಸುವ ಅವಕಾಶವನ್ನು ಪಡೆಯುವುದರ ಜತೆಗೆ  ಕಲಾಕೃತಿಯನ್ನು ಮನೆಗೆ ಕೊಂಡೊಯ್ಯಬಹುದು.

ಟೆರ್ರಾಕೋಟಾ ಟ್ರೈಬಲ್, ಹಾರ್ಡ್ ಬೋರ್ಡ್ ಕಟೌಟ್, ಕ್ಯಾನ್ವಾಸ್, ಪಾಟ್ ಪೇಂಟಿಂಗ್ ಹಾಗೂ ಐಸ್‌ಕ್ರೀಂ ಸ್ಟಿಕ್ಸ್‌ ಸೇರಿದಂತೆ ನವೀನ ಕಲೆಗಳು ಹಾಗೂ ಕರಕುಶಲ ವಸ್ತು ತಯಾರಿಕೆ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.

ಎಲ್ಲಾ ವಯಸ್ಸಿನವರಿಗೂ ಸರಿ ಹೊಂದುವಂತಹ ಚಟುವಟಿಕೆಗಳು ನಡೆಯಲಿದ್ದು, ವಾರಾಂತ್ಯದಲ್ಲಿ ಸಮಯ ಕಳೆಯಲು ಒಳ್ಳೆಯ ಅವಕಾಶ. ಸಂಜೆ 4ರಿಂದ ಸಂಜೆ 8ರವರೆಗೆ. ಸ್ಥಳ: ಫೋರಂ ವ್ಯಾಲ್ಯೂ ಮಾಲ್, ವೈಟ್‌ಫೀಲ್ಡ್. ಮಾಹಿತಿಗೆ: ೦೮೦ ೨೫೦೪೩೮೦೦.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT