ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಸಿಯೊಮಿ ಮೊಬೈಲ್‌ ಬಳಸದಂತೆ ಸೂಚನೆ

Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭದ್ರತಾ ಕಾರಣಗಳಿಂದಾಗಿ ಚೀನಾದ ಕಂಪೆನಿಯೊಂದರ ‘ಕ್ಸಿಯೊಮಿ ರೆಡ್ಮಿ 1ಎಸ್‌’ ಮೊಬೈಲ್‌ ಫೋನ್‌ಗಳನ್ನು ಬಳಸದಿರುವಂತೆ ವಾಯುಪಡೆ (ಐಎಎಫ್‌) ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಸೂಚಿಸಲಾಗಿದೆ.

ಇತ್ತೀಚೆಗೆ ಮಾರುಕಟ್ಟೆಗೆ ಬಂದ ಎಫ್‌ಸೆಕ್ಯೂರ್‌ ಕಂಪೆನಿಯ ಕ್ಸಿಯೊಮಿ ರೆಡ್ಮಿ 1ಎಸ್‌ ಸ್ಮಾರ್ಟ್‌ಫೋನ್‌ ಬಳಸುವವರ ಹೆಸರು, ಐಎಂಇಐ, ಫೋನ್‌ನಲ್ಲಿ ದಾಖಲಾದ ಹೆಸರು, ದೂರವಾಣಿ ಸಂಖ್ಯೆಗಳು ಹಾಗೂ ಪಠ್ಯ ಸಂದೇಶಗಳನ್ನು ಬೀಜಿಂಗ್‌ನಲ್ಲಿರುವ ಸರ್ವರ್‌ಗೆ ವರ್ಗಾಯಿಸುವಂತೆ ರೂಪಿಸಲಾಗಿದೆ. ಹೀಗಾಗಿ ಭದ್ರತೆಯ ಕಾರಣದಿಂದ ಈ ಸೂಚನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT