ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಕಿಯ ಪುಳಕ, ಸೇವೆಯ ಕನವರಿಕೆ

‘ವಿದ್ಯಾರ್ಥಿ ಪೊಲೀಸ್‌ ಕೆಡೆಟ್’ ಯೋಜನೆಗೆ ಚಾಲನೆ
Last Updated 2 ಮಾರ್ಚ್ 2015, 19:48 IST
ಅಕ್ಷರ ಗಾತ್ರ

ಬೆಂಗಳೂರು: ಶಾಲೆಯ ಸಮವಸ್ತ್ರವನ್ನು ಮರೆಸಿದ್ದ ಖಾಕಿ ಅಲ್ಲಿದ್ದವರಿಗೆ ವಿಶೇಷ ಮೆರಗು ತಂದಿತ್ತು. ಆದರೆ, ಅದಕ್ಕೆ ಖದರ್‌ ಇರಲಿಲ್ಲ. ಸ್ನೇಹ, ಪ್ರೀತಿಯ ಲೇಪನವಿತ್ತು.  ಅದನ್ನು ತೊಟ್ಟವರ ಮುಖ-ದಲ್ಲಿ ದರ್ಪದ ಛಾಯೆ ಇರಲಿಲ್ಲ. ಪುಳಕದ ಮುಗುಳ್ನಗೆಯೊಂದಿಗೆ ಆತ್ಮ-ವಿಶ್ವಾಸ ಮನೆಮಾಡಿತ್ತು. ಆ ಸುಕೋಮಲ ಮುಖಗಳನ್ನೇ ದೂರದಲ್ಲಿ ಕುಳಿತು ತದೇಕ ಚಿತ್ತದಿಂದ ನೋಡು-ತ್ತಿದ್ದ ಹಲವು ಜೀವಗಳ ಕಣ್ಣುಗಳಲ್ಲಿ ಮಾತ್ರ ಆನಂದಭಾಷ್ಪ ಹನಿಯುತ್ತಿತ್ತು.

ಪೊಲೀಸ್‌ ಇಲಾಖೆಯು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತಂದ ‘ವಿದ್ಯಾರ್ಥಿ ಪೊಲೀಸ್‌ ಕೆಡೆಟ್’ (ಎಸ್‌ಪಿಸಿ) ಯೋಜನೆಗೆ ಸೋಮವಾರ ಚಾಲನೆ ನೀಡಿದ ಕಾರ್ಯಕ್ರಮ ಇಂತಹ-ದೊಂದು ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಕಂಠೀರವ ಒಳಾಂಗಣ ಕ್ರೀಡಾಂಗಣ-ದಲ್ಲಿ  ನಡೆದ ಸಮಾರಂಭದಲ್ಲಿ ‘ಎಸ್‌ಪಿ-ಸಿ’ಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ‘ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಮೂಡಿಸಿ, ಆ ಮೂಲಕ ಅವರನ್ನು ನೆಲದ ಕಾನೂನನ್ನು ಗೌರವಿಸುವ ಪ್ರಜ್ಞಾವಂತ ನಾಗರಿಕರ-ನ್ನಾಗಿ ರೂಪಿಸಬೇಕೆಂಬ ಈ ಯೋಜ-ನೆಯ ಆಶಯವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು’ ಎಂದು ಕಿವಿ ಮಾತು ಹೇಳಿದರು.

‘ನಾಗರಿಕ ಸಮಾಜ ಶಾಂತಿ ಮತ್ತು ನೆಮ್ಮದಿಯಿಂದ ಬದುಕಬೇಕಾದರೆ ಕಾನೂನು ಸುವ್ಯವಸ್ಥೆ ಚೆನ್ನಾಗಿರಬೇಕು. ಧರ್ಮ ಮತ್ತು ಜಾತಿಗಳ ನಡುವೆ ಸಂಘರ್ಷ ಹುಟ್ಟುಹಾಕುವ ದುಷ್ಟಶಕ್ತಿ-ಗಳನ್ನು ಗುರುತಿಸಿ ಅವುಗಳ ವಿರುದ್ಧ ಹೋರಾಡುವುದು ಇಂದಿನ ಅಗತ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಜನಸಂಖ್ಯೆಯಲ್ಲಿ ಶೇ 60 ರಷ್ಟಿರುವ ಯುವ ಜನತೆ ವೃತ್ತಿ ಶಿಕ್ಷಣಕ್ಕಿಂತ ಹೆಚ್ಚು ನೈತಿಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ದ್ವೇಷ, ಅಸೂಯೆ ಬದಿಗಿಟ್ಟು ದೇಶ-ಪ್ರೇಮ ಮತ್ತು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸರೊಂದಿಗೆ ಕೈಜೋಡಿಸಬೇಕು’ ಎಂಬುದಾಗಿ ಅವರು ಕರೆ ನೀಡಿದರು.

ಗೃಹ ಸಚಿವ ಕೆ.ಜೆ.ಜಾರ್ಜ್‌ ಮಾತ-ನಾಡಿ, ‘ಯಾವುದೇ ಅಹಿತಕರ ಘಟನೆಗೆ ಪೊಲೀಸ್‌ ಇಲಾಖೆಯನ್ನು ಹೊಣೆಯ-ನ್ನಾಗಿ ಮಾಡುವುದು ಸಲ್ಲದು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡು-ವಲ್ಲಿ ಪೊಲೀಸ್‌ ಇಲಾಖೆಗೆ ಸಾರ್ವಜನಿ-ಕರು, ಸಂಘ ಸಂಸ್ಥೆಗಳು ಮತ್ತು ಮಾಧ್ಯ-ಮ-ಗಳು ಕೂಡ ಪಾಲುದಾರರಾಗ-ಬೇಕು’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

‘ಯುವ ಜನರಿಗೂ ಪೊಲೀಸ್ ಇಲಾಖೆ ಕಾರ್ಯವೈಖರಿ ಪರಿಚಯಿ-ಸುವ ದಿಸೆಯಲ್ಲಿ ಈ ಯೋಜನೆ ರೂಪಿಸ-ಲಾಗಿದೆ. ಎಸ್‌ಪಿಸಿಗೆ ಸೇರಿರುವ ಪ್ರತಿಯೊಬ್ಬರೂ ವಿದ್ಯಾರ್ಥಿ ಸಮುದಾಯಕ್ಕೆ ಮಾದರಿಯಾಗುವ ಕೆಲಸ ಮಾಡಿ’ ಎಂದು ಹಾರೈಸಿದರು. ಎಸ್‌ಪಿಸಿ ರಾಜ್ಯ ಸಮನ್ವಯಾಧಿಕಾರಿ-ಯಾಗಿರುವ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಪಿ.ಹರಿಶೇಖರನ್‌ ಮಾತನಾಡಿ, ‘ಯುವ ಪೀಳಿಗೆಯಲ್ಲಿ ನಾಯಕತ್ವ ಗುಣದ ಜತೆಗೆ ಸಾಮಾಜಿಕ ಜವಾಬ್ದಾರಿ ಮೂಡಿಸುವುದು ಈ ಪ್ರಾಯೋಗಿಕ ಯೋಜನೆಯ ಉದ್ದೇಶ. ಇದಕ್ಕಾಗಿ ಸರ್ಕಾರಿ, ಅನುದಾನಿತ ಹಾಗೂ ಬಿಬಿಎಂಪಿಗೆ ಸೇರಿದ 35 ಶಾಲೆಗಳಿಂದ 1,500 ವಿದ್ಯಾರ್ಥಿ­ಗಳನ್ನು ಆಯ್ಕೆ ಮಾಡ­­ಲಾಗಿದೆ’ ಎಂದು ಹೇಳಿದರು.

‘ಪ್ರತಿ ಶಾಲೆಯಿಂದ ಸಂದರ್ಶನ ಮತ್ತು ಲಿಖಿತ ಪರೀಕ್ಷೆ ಮೂಲಕ 44 ವಿದ್ಯಾರ್ಥಿಗಳನ್ನು ಆಯ್ಕೆ ಮಾಡ­ಲಾಗಿದೆ. ವಿದ್ಯಾರ್ಥಿಗಳಿಗೆ ಇಲಾಖೆ ವತಿಯಿಂದಲೇ 2 ಜತೆ ಸಮವಸ್ತ್ರ ನೀಡಲಾಗಿದೆ. 22 ಕೆಡೆಟ್‌ಗಳ ಎರಡು ತುಕಡಿಗಳನ್ನಾಗಿ ವಿಂಗಡಿಸಲಾಗುತ್ತದೆ.
ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಪ್ರತಿ ಶಾಲೆಯ ಇಬ್ಬರು ಶಿಕ್ಷಕರನ್ನು ಸಮುದಾಯ ಪೊಲೀಸ್ ಅಧಿಕಾರಿ (ಸಿಪಿಒ) ಹಾಗೂ  ಸಹಾಯಕ ಸಮು­ದಾಯ ಪೊಲೀಸ್ ಅಧಿಕಾರಿಯ­ನ್ನಾಗಿ (ಎಸಿಪಿಒ) ನೇಮಕ ಮಾಡಲಾಗಿದೆ’ ಎಂದು ತಿಳಿಸಿದರು.

‘ಸಿಪಿಒ ಮತ್ತು ಎಸಿಪಿಒ ಶಿಕ್ಷಕರಿಗೆ ಇಲಾಖೆ ಅಧಿಕಾರಿಗಳು ತರಬೇತಿ ನೀಡುತ್ತಾರೆ. ಶಾಲೆಗೆ ವಿದ್ಯಾರ್ಥಿಗಳ ಬೋಧನೆಗೆ ಅಗತ್ಯವಾದ ಸಾಧನಗಳನ್ನು ನೀಡಲಾಗುತ್ತದೆ. ಮಕ್ಕಳನ್ನು ಕ್ಷೇತ್ರ ಭೇಟಿಗಾಗಿ ಪೊಲೀಸ್ ಠಾಣೆ, ನ್ಯಾಯಾಲಯ, ಬಿಬಿಎಂಪಿ, ಕಂದಾಯ ಇಲಾಖೆಯ ಕಚೇರಿ  ಮತ್ತು ಕಾರಾಗೃಹಗಳಿಗೆ ಕರೆದೊಯ್ದು ಆಯಾ ಇಲಾಖೆಗಳ ಕಾರ್ಯವೈಖರಿ ಪರಿಚಯಿಸ-ಲಾಗುತ್ತದೆ’ ಎಂದರು.

ಪೊಲೀಸ್‌ ಮಹಾನಿರ್ದೇಶಕ ಓಂಪ್ರಕಾಶ್‌, ಗೃಹ ಸಚಿವರ ಭದ್ರತಾ ಸಲಹೆಗಾರ ಕೆಂಪಯ್ಯ, ನಗರ ಪೊಲೀಸ್‌ ಆಯುಕ್ತ ಎಂ.ಎನ್‌. ರೆಡ್ಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್ ಮೊಹಿಸಿನ್‌ ಮತ್ತು ಕರ್ನಾಟಕ ಒಲಿಂಪಿಕ್‌ ಸಂಸ್ಥೆಯ ಅಧ್ಯಕ್ಷ ಕೆ.ಗೋವಿಂದರಾಜ್ ಉಪಸ್ಥಿತರಿದ್ದರು.

ಕೆಡೆಟ್‌ಗಳು ಏನಂತಾರೆ?
ಕರ್ತವ್ಯಗಳ ಅರಿವು
ಎಸ್‌ಪಿಸಿ ಸೇರಿದ ನಂತರ ಪೊಲೀಸರ ಕರ್ತವ್ಯಗಳ ಜತೆಗೆ ಕಷ್ಟ ಏನು ಎನ್ನುವುದು ಅರಿ-ವಿಗೆ ಬರುತ್ತಿದೆ. ಜತೆಗೆ ದೇಶಾ-ಭಿಮಾನ ಉಕ್ಕುತಿದೆ.
– ಎ.ಅಂಕರಾಜು, ಸರ್ಕಾರಿ ಪ್ರೌಢಶಾಲೆ ಅಗರ

ಸೇವೆಯ ಬಯಕೆ
ತಂದೆ ತಾಯಿಗೆ ಗೌರವ ತರುವ ಈ ಖಾಕಿ ಸಮವಸ್ತ್ರ ಧರಿಸಲು ಸಂತಸ-ವಾಗು-ತ್ತದೆ. ದೇಶಕ್ಕೆ ನನ್ನದೇ ಆದ ಸೇವೆ ಸಲ್ಲಿಸಬೇಕೆಂಬ ಬಯಕೆ-ಯಾಗು-ತ್ತಿದೆ. ಸಹಪಾಠಿಗಳ ನಡುವೆ ಈ ಸಮವಸ್ತ್ರ ಧರಿಸುವುದೇ ಹೆಮ್ಮೆಯ ವಿಚಾರ.
– ಜಿ.ಸಿ.ನಮ್ರತಾ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಮಲ್ಲೇಶ್ವರ

ದೊಡ್ಡ ಅಧಿಕಾರಿಯಾಗುವೆ
ಎಸ್‌ಪಿಸಿ ಸೇರಿದ ನಂತರ ದೊಡ್ಡ ಪೊಲೀಸ್‌ ಅಧಿಕಾರಿ-ಯಾಗ-ಬೇಕೆಂಬ ಆಸೆ ಮೂಡಿದೆ. ಕೆಟ್ಟ ಕೆಲಸಗಳನ್ನು ತಡೆಗಟ್ಟಿ, ಕಳ್ಳರನ್ನು ಸದೆ-ಬಡಿದು ಸಮಾಜಕ್ಕೆ ನನ್ನದೇ ಆದ ಸೇವೆ ಸಲ್ಲಿಸುತ್ತೇನೆ.
– ವೈ.ಸಂತೋಷ್, ಸರ್ಕಾರಿ ಪ್ರೌಢಶಾಲೆ ಬಾಗಲೂರು.

ಧೈರ್ಯ ಬಂದಿದೆ
ಈ ಸಮವಸ್ತ್ರ-ದಲ್ಲಿ ನನ್ನನ್ನು ನೋಡಲು ಅಮ್ಮ ತುಂಬ ಖುಷಿ ಪಡುತ್ತಾರೆ. ನಾನು ಖಾಕಿ ಧರಿಸು-ತ್ತೇನೆ ಎಂದು ಕನಸಿ-ನಲ್ಲಿ-ಯೂ ಅಂದು--ಕೊಂಡಿರ-ಲಿಲ್ಲ. ಇದನ್ನು ತೊಟ್ಟ ನಂತರ ಧೈರ್ಯ ಬಂದಿದೆ. ಕೆಟ್ಟ ಕೆಲಸ ಕಂಡರೆ ತಡೆಗಟ್ಟ-ಬೇಕು ಎನಿಸುತ್ತಿದೆ.
– ವಿದ್ಯಾಶ್ರೀ, ಸರ್ಕಾರಿ ಪ್ರೌಢಶಾಲೆ ಅಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT