ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುರ್ಷಿದ್‌ ವಿರುದ್ಧ ಜೇಟ್ಲಿ ವಾಗ್ದಾಳಿ

Last Updated 17 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಕಾರ್ಯಕ್ರಮ­ಗಳಿಗೆ ಭಾರಿ ಸಂಖ್ಯೆ ಯಲ್ಲಿ ಜನ ಸೇರುವುದರ ಸಾಚಾತನದ ಬಗ್ಗೆ ಪ್ರಶ್ನಿಸಿದ್ದ ಕಾಂಗ್ರೆಸ್‌್ ಮುಖಂಡ ಸಲ್ಮಾನ್‌ ಖುರ್ಷಿದ್‌ ವಿರುದ್ಧ ಹಣಕಾಸು ಸಚಿವ ಅರುಣ್‌ ಜೇಟ್ಲಿ ಕಿಡಿಕಾರಿದ್ದಾರೆ.

ಕಾಂಗ್ರೆಸ್‌ ನಾಯಕರಿಗೆ ತಮ್ಮ ದೇಶದಲ್ಲೇ ಸೇರದಷ್ಟು ಸಂಖ್ಯೆಯ ಜನ ಮೋದಿ ಅವರಿಗೆ ವಿದೇಶದಲ್ಲಿ ಸೇರುತ್ತಾರೆ. ಇದರಲ್ಲೇ ಕಾಂಗ್ರೆಸ್‌ ನಾಯಕರ ದುಸ್ಥಿತಿ ತಿಳಿಯುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಮ್ಯಾನ್ಮಾರ್‌ ರಾಜಧಾನಿ ನೇ ಪೈ ತಾವ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಭಾರತ ಮೂಲದ ಸಾವಿರಾರು ಜನರು ಭಾಗವಹಿಸಿದ್ದರ ಬಗ್ಗೆ ಖುರ್ಷಿದ್‌ ಅನುಮಾನ ವ್ಯಕ್ತಪಡಿಸಿದ್ದರು.

‘ನಾನು ನೇ ಪೈ ತಾವ್‌ಗೆ ಎರಡು ಬಾರಿ  ಹೋಗಿದ್ದೇನೆ. ಅಲ್ಲಿನ ಬೀದಿಗಳಲ್ಲಿ ಒಬ್ಬರೂ ಸಿಗುವುದಿಲ್ಲ. ಇಷ್ಟಾದರೂ ಮೋದಿ ಅವರ ಭಾಷಣ ಕೇಳಲು 20 ಸಾವಿರ ಜನ ಸೇರಿದ್ದು ಹೇಗೆ. ಹಲವರನ್ನು ತಮ್ಮೊಂದಿಗೆ ಮೋದಿ ಕರೆದು ಕೊಂಡು ಹೋಗಿದ್ದರೇ’ ಎಂದು ಖುರ್ಷಿದ್‌ ಉತ್ತರ ಪ್ರದೇಶದ ಫರೂಖಾಬಾದ್‌ನಲ್ಲಿ ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT