ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾ ಕಲ್ಯಾಣ ಯೋಜನೆಯಲ್ಲಿ ಭ್ರಷ್ಟಾಚಾರ.!

Last Updated 27 ಮಾರ್ಚ್ 2015, 19:48 IST
ಅಕ್ಷರ ಗಾತ್ರ

ಬೆಂಗಳೂರು: ‘ಗಂಗಾ ಕಲ್ಯಾಣ ಯೋಜನೆ ಅಡಿ  ರೈತರಿಗೆ ಉಪಯೋಗವಾಗಲೆಂದು ಕೊರೆಸುತ್ತಿರುವ ಕೊಳವೆ ಬಾವಿಗೆ ನೀಡುವ ಅನುದಾನವನ್ನು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಸರ್ಕಾರಿ ಅಧಿಕಾರಿಗಳು ಹಣವನ್ನು ಕಬಳಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಜ್ಞಾನಪ್ರಕಾಶ್  ಆರೋಪಿಸಿದ್ದಾರೆ.

ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಿರುವ ಅವರು, ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಎಂ.ದಾಸನಪುರ ಗ್ರಾಮದಲ್ಲಿ   2013 ರಿಂದ 2015ರ ವರೆಗೆ 67 ಕೊಳವೆ ಬಾವಿ ಕೊರೆಯಿಸಲಾಗಿದ್ದು, ಇದರಲ್ಲಿ  ಸುಮಾರು 30 ಕೊಳವೆ ಬಾವಿಗಳಲ್ಲಿ ಮಾತ್ರ ನೀರು ಬಂದಿದೆ. ಉಳಿದ ಕೊಳವೆ ಬಾವಿಗಳಲ್ಲಿ ನೀರು ಬರದಿದ್ದರೂ ಸರ್ಕಾರಕ್ಕೆ ಸುಳ್ಳು   ಮಾಹಿತಿ ನೀಡುವ ಮೂಲಕ ಕೋಟ್ಯಂತರ ಹಣವನ್ನು  ಕಬಳಿಸಲಾಗಿದೆ’ ಎಂದು ದೂರಿದ್ದಾರೆ.‌

‘ಕೊಳವೆ ಬಾವಿ ಕೊರೆದ ಸಂದರ್ಭದಲ್ಲಿ ನೀರು ಸಿಗದೆ ಇದ್ದಲ್ಲಿ ಅಂತಹ ಕೊಳವೆ ಬಾವಿಗೆ ಸರ್ಕಾರದಿಂದ ಹಣ ಕೊಡಲು ಅವಕಾಶವಿರುವುದಿಲ್ಲ. ಆದರೂ ರೈತನನ್ನು ಕೊಳವೆ ಬಾವಿ ತೆಗೆದಿರುವ ಸ್ಥಳದಲ್ಲಿ ನಿಲ್ಲಿಸಿ, ಛಾಯಾಚಿತ್ರ ತೆಗೆದು ನೀರು ಸಿಕ್ಕಿದೆ ಎಂದು ದಾಖಲೆಗಳನ್ನು ಸೃಷ್ಟಿಸಲಾಗಿದೆ.   ಒಂದು ಕೊಳವೆ ಬಾವಿಗೆ   ಸುಮಾರು ₨ 3 ಲಕ್ಷವರೆಗೂ ಹಣ ಪಡೆದಿದ್ದಾರೆ’   ಎಂದು ಅವರು ಆಪಾದಿಸಿದ್ದಾರೆ.

‘ಸರ್ಕಾರಿ ನಿಯಮದ ಪ್ರಕಾರ ಒಂದು ಕೊಳವೆ ಬಾವಿಯಿಂದ ಮತ್ತೊಂದಕ್ಕೆ ಸುಮಾರು 200 ರಿಂದ 500 ಅಡಿ ಅಂತರ ಇರಬೇಕು. ಆದರೆ ನಿಯಮವನ್ನು ಗಾಳಿಗೆ ತೂರಿ ಅವ್ಯವಹಾರ ಎಸಗಿದ್ದಾರೆ’ ದೂರು ನೀಡಿದ್ದಾರೆ.

‘ಅವ್ಯವಹಾರ ಎಸಗಿರುವ  ಅಧಿಕಾರಿಗಳ ವಿರುದ್ಧ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT