ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗೂ­ಬಾಯಿ ಹಾನಗಲ್‌ ಬಳುವಳಿ ಉಳಿಯಲಿ

Last Updated 25 ಜನವರಿ 2015, 19:30 IST
ಅಕ್ಷರ ಗಾತ್ರ

ಮೊನ್ನೆ ನಡೆದ ‘ಸಾಹಿತ್ಯ ಸಂಭ್ರಮ’ ಸಂದರ್ಭ­ದಲ್ಲಿ ಧಾರವಾಡಕ್ಕೆ ಹೋಗಿ­ದ್ದಾಗ ಸಹಜ ಕುತೂಹಲದಿಂದ ಗಂಗೂ­ಬಾಯಿ ಹಾನಗಲ್‌ ಅವರು ಹುಟ್ಟಿದ ಮನೆ ನೋಡಲು ಹೋಗಿದ್ದೆ. ಅದನ್ನು ನೋಡಿ ತುಂಬ ಬೇಸರ­ವಾಯ್ತು. ಅವರ ನೆನಪಿಗಾಗಿ ಸರ್ಕಾರ ಅವರ  ಮನೆಯ ಪುನರುಜ್ಜೀವನ­ಕ್ಕೆಂದು ₨ 25 ಲಕ್ಷ ಹಣ ನೀಡಿದೆ. ಆದರೆ ಈ ಹಣ ಎಲ್ಲಿ ಹೋಗಿದೆ ಎಂಬುದು ತಿಳಿಯುವಂತಿಲ್ಲ!

ಮನೆ ಶಿಥಿಲವಾಗಿರುವುದಷ್ಟೇ ಅಲ್ಲ  ಅದಕ್ಕೆ ಕಳೆದ 3 ತಿಂಗಳಿನಿಂದ ವಿದ್ಯುತ್ತಿನ ಅನುಕೂಲ­ವಿಲ್ಲ. ಅಲ್ಲಿರುವ ಅಪೂರ್ವ ಛಾಯಾಚಿತ್ರ­ಗಳು ಬಣ್ಣಗೆಟ್ಟಿವೆ.  ಶೀರ್ಷಿಕೆ ಒಂದು ಕಡೆ ಇದ್ದರೆ, ಅದಕ್ಕೆ ಸಂಬಂಧಿಸಿದ ಚಿತ್ರ ಇನ್ನೆಲ್ಲೋ ಇದೆ. ಹಿರಿಯರು ಉಳಿಸಿ ಹೋಗಿರುವುದನ್ನು ಉಳಿಸಿಕೊಳ್ಳ­ಬೇಕು ಎನ್ನುವ ಪ್ರಜ್ಞೆಯೇ ಬಹುಶಃ ನಮ್ಮಲ್ಲಿ ಇಲ್ಲ ಅನಿ­ಸುತ್ತದೆ. ಈ ಬಗ್ಗೆ ನಮ್ಮ  ಸಾಹಿತಿಗಳಾಗಲೀ ಸಂಗೀತಪ್ರಿಯ­ರಾಗಲೀ ಯಾವುದೇ ಕಳಕಳಿ ಪ್ರದರ್ಶಿಸದೆ ಇರುವುದು ವಿಷಾದಕರ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇತ್ತ ಕಡೆ ಈಗಲಾದರೂ ದೃಷ್ಟಿಹರಿಸಿ ಈ  ದೊಡ್ಡ ಸಂಗೀತಗಾರ್ತಿಯ ಬಳುವಳಿ ಉಳಿಯು­ವಂತೆ ಮಾಡುವುದು ತೀರಾ ಅಗತ್ಯ.             

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT