ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜೇಂದ್ರಗಡ: ರಾಜಕೀಯ ಗದ್ದಲ

Last Updated 27 ಮೇ 2015, 7:17 IST
ಅಕ್ಷರ ಗಾತ್ರ

ಗಜೇಂದ್ರಗಡ: ಪಂಚಾಯ್ತಿ ಚುನಾವಣೆ ಕಾವು ಜೋರಾಗಿ ಸಾಗಿದೆ. ಮತದಾನದ ದಿನ ಸಮೀಪಿಸಿದ ಕಾರಣ ಬಿಸಿಲ ಧಗೆಯನ್ನು ಲೆಕ್ಕಿಸದ ಅಭ್ಯರ್ಥಿಗಳು ನಿದ್ದೆ ತೊರೆದು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಪಂಚಾಯ್ತಿ ಸದಸ್ಯರಾಗುವ ಕನಸನ್ನು ಹೊತ್ತು ತಂಡೋಪತಂಡವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ರಾತ್ರಿ ಜನರು ದೊರಕುತ್ತಾರೆ ಎಂಬ ಆಸೆಯಿಂದ ಪ್ರತಿ ಮನೆಗೂ ಬಂದು ಮತದಾರರ ಕಾಲನ್ನು ಹಿಡಿದುಕೊಳ್ಳುವುದು, ಭರವಸೆಯ ಮಹಾಪೂರ ಹರಿಸುವುದು, ಹಣವನ್ನು ನೀಡುವುದು, ಬಾಡೂಟ ಕೊಡುವುದು ಮಾಮೂಲಿಯಾಗಿದೆ.

ರಾತ್ರಿಯ ವೇಳೆ ಹಳ್ಳಿಗಳನ್ನು ನೋಡಿದರೆ ಇಲ್ಲಿ ಯಾವುದೋ ಜಾತ್ರೆ ನಡೆದಿದೆ ಎನ್ನುವಂತಿರುತ್ತದೆ. ಈ ಜಾತ್ರೆ ಸಂಜೆಯಾಗುತ್ತಿದ್ದಂತೆ ಆರಂಭವಾಗಿ ಜನರು ಮಲಗುವವವರೆಗೆ ಮುಂದುವರೆದಿರುತ್ತದೆ. ಕೆಲ ವಾರ್ಡ್‌ಗಳಲ್ಲಿ ಜನರು ಕಣಕ್ಕಿಳಿದವರಿಗೆ ನೀರಿಳಿಸುತ್ತಿದ್ದಾರೆ.

ಕೆಲ ಕಡೆ ಬಹಳಷ್ಟು ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಅಲ್ಪ ಮತಗಳು ಅವರಿಗೆ ಬಂದರೆ ಸಾಕು ಜಯ ನಿಶ್ಚಿತ ಎಂಬ ಲೆಕ್ಕಾಚಾರವು ಸಾಗಿದೆ. ಇದನ್ನರಿತ ಅಭ್ಯರ್ಥಿಗಳು ಅಲ್ಪ ಮತಕ್ಕಾಗಿ ಹಣ ಮತ್ತು ಜಾತಿಯನ್ನು ಬಳಸಿಕೊಳ್ಳುತ್ತಾ ಕೆಲವು ಮತದಾರರನ್ನು ‘ಫಿಕ್ಸ್‌’ ಕೂಡಾ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಈ ಸಲ ಯಾರೇ ಗೆದ್ದರೂ  10 ಮತಗಳ ಅಂತರದಿಂದ ಎಂಬ ಅರಿವು ಅಭ್ಯರ್ಥಿಗಳಲ್ಲಿ ಮನೆಮಾಡಿದೆ. ರಾಜೂರ ಗ್ರಾಮ ಪಂಚಾಯ್ತಿಗೆ ದಿಂಡೂರ, ಕಾಲಕಾಲೇಶ್ವರ, ಭೈರಾಪೂರ ಮತ್ತು ತಾಂಡಾ ಸೇರಿವೆ. ಇಲ್ಲಿ ಆಯ್ಕೆಯಾಗಬೇಕಾದ 21 ಸದಸ್ಯರಿಗೆ 101 ಜನ ಕಣದಲ್ಲಿ ಉಳಿದಿದ್ದಾರೆ. ರಾಜೂರಿನಲ್ಲಿ 4 ವಾರ್ಡ್‌ಗಳಿವೆ. ಒಂದು ವಾರ್ಡ್‌ಗೆ ಮೂವರು ಸದಸ್ಯರಂತೆ 12 ಜನರನ್ನು ಆಯ್ಕೆ ಮಾಡಬೇಕಾಗಿದೆ.

ಅದಕ್ಕಾಗಿ 67 ಜನ ಸ್ಪರ್ಧೆಯಲ್ಲಿದ್ದಾರೆ. 1ನೇ ವಾರ್ಡ್‌ನಲ್ಲಿ17 ಜನ, 2ನೇ ವಾರ್ಡ್‌ಗೆ 22 , 3ನೆ ವಾರ್ಡ್‌ಗೆ 10, 4ನೆ ವಾರ್ಡ್‌ಗೆ 18 ಜನ ಇದ್ದಾರೆ. ರಾಜೂರಿನಲ್ಲಿ 972 ಕುಟುಂಬಗಳಿವೆ. 5,484 ಜನಸಂಖ್ಯೆ ಹೊಂದಿದೆ.  ಇಲ್ಲಿನ ಮತದಾರರ ಸಂಖ್ಯೆ 3453 ಇದೆ. ಇದರಿಂದ ಸ್ಪರ್ಧಾ ಕಣದಲ್ಲಿರುವವರು ಅತಿ ಕಡಿಮೆ ಮತಗಳಿಂದ ಜಯ ಸಾಧಿಸಲಿದ್ದಾರೆ. 2ನೇ ಸ್ಥಾನದಲ್ಲಿ ಹೊಳೆಆಲೂರ ಅತಿ ಹೆಚ್ಚು ಸ್ಪರ್ಧಾಳುಗಳಿರುವ ಇದು ಬಹು ತುರುಸಿನ ಕಣವಾಗಿದೆ. ಇಲ್ಲಿನ ಪ್ರಚಾರವು ಜಾತ್ರೆಯಂತಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT